ಕಲ್ಪ ಮೀಡಿಯಾ ಹೌಸ್ | ಮೈಸೂರು/ಶಿವಮೊಗ್ಗ |
ಹಾಸನ ಮತ್ತು ಮಾವಿನಕೆರೆ ನಡುವೆ ಟ್ರ್ಯಾಕ್ ನವಿಕರಣ ಕಾಮಗಾರಿ ನಡೆಯುವುದರಿಂದ ಕೆಳಗಿನ ರೈಲುಗಳ ಸೇವೆಯನ್ನು 25 ದಿನಗಳ ಕಾಲ ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ವಿವರ ಈ ಕೆಳಗಿನಂತಿದೆ.
- ರೈಲು ಸಂಖ್ಯೆ 16221 ತಾಳಗುಪ್ಪ – ಮೈಸೂರು ಎಕ್ಸ್’ಪ್ರೆಸ್, ಮೇ 16ರಿಂದ 20, ಮೇ 23ರಿಂದ 27, ಮೇ 30ರಿಂದ ಜೂನ್ 03, ಜೂನ್ 06ರಿಂದ 10 ಮತ್ತು ಜೂನ್ 13ರಿಂದ 17ರವರೆಗೆ ಪ್ರಯಾಣ ಆರಂಭಿಸುವ ರೈಲುಗಳು ಮಾರ್ಗಮಧ್ಯದಲ್ಲಿ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

- ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್’ಪ್ರೆಸ್, ಮೇ 16ರಿಂದ 20, ಮೇ 23ರಿಂದ 27, ಮೇ 30ರಿಂದ ಜೂನ್ 03, ಜೂನ್ 06ರಿಂದ 10 ಮತ್ತು ಜೂನ್ 13ರಿಂದ 17ರವರೆಗೆ ಪ್ರಯಾಣ ಆರಂಭಿಸುವ ರೈಲುಗಳು ಮಾರ್ಗಮಧ್ಯದಲ್ಲಿ 80 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- ರೈಲು ಸಂಖ್ಯೆ 06583 ಕೆಎಸ್’ಆರ್ ಬೆಂಗಳೂರು – ಹಾಸನ ಡೆಮು, ಮೇ 16ರಿಂದ 20, ಮೇ 23ರಿಂದ 27, ಮೇ 30ರಿಂದ ಜೂನ್ 03, ಜೂನ್ 06ರಿಂದ 10 ಮತ್ತು ಜೂನ್ 13ರಿಂದ 17ರವರೆಗೆ ಪ್ರಯಾಣ ಆರಂಭಿಸುವ ರೈಲುಗಳು ಮಾರ್ಗಮಧ್ಯದಲ್ಲಿ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















