ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ವೈದ್ಯಕೀಯ ದತ್ತ ಸಂಸ್ಥೆಯಾದ ಮಿಷನ್ ಸ್ಮೈಲ್ ಸಹಯೋಗದೊಂದಿಗೆ ಮುತ್ತೂಟ್ ಪಪ್ಪಚನ್ ಫೌಂಡೇಷನ್ ಸಹಭಾಗಿತ್ವದಲ್ಲಿ ರಾಜ್ಯದ ಯುವಜನರಿಗೆ ಮತ್ತು ಮಕ್ಕಳಿಗೆ ಉಚಿತ ಸೀಳುತುಟಿ ಶಸ್ತ್ರಚಿಕಿತ್ಸಾ ಶಿಬಿರವನ್ನು ಜೂನ್ 21ರಿಂದ 24ರ ವರೆಗೆ ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಿಷನ್ ಸ್ಮೈಲ್‍ನ ರಾಷ್ಟ್ರೀಯ ಕಾರ್ಯಕ್ರಮದ ಮುಖ್ಯಸ್ಥ ಡಾ. ವಿನಾಯಕ್ ಜಿ. ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಮೈಲ್ ಪ್ಲೀಸ್, ಮುತ್ತೂಟ್ ಪಪ್ಪಚನ್ ಫೌಂಡೇಷನ್ ಫ್ಯಾನ್ ಇಂಡಿಯಾ ಉಪಕ್ರಮವಾಗಿದ್ದು, ಅರ್ಹ ಹಿನ್ನಲೆಯಲ್ಲಿ ಮಕ್ಕಳು ಮತ್ತು ಯುವಕರಿಗೆ ಉಚಿತ, ಸುರಕ್ಷಿತ, ಸಹಾನುಭೂತಿಯೊಂದಿಗೆ ಸಮಗ್ರ ಸೀಳುತುಟಿ ಶಸ್ತ್ರಚಿಕಿತ್ಸೆಗಳನ್ನು ಒದಗಿಸುತ್ತದೆ. ಮಿಷನ್ ಸ್ಮೈಲ್ ಸಹಭಾಗಿತ್ವದಲ್ಲಿ 2014ರಲ್ಲಿ ಕೇರಳದಿಂದ ಆರಂಭವಾದ ಈ ಉಪಕ್ರಮವು 13 ರಾಜ್ಯಗಳನ್ನು ಸೇರಿದ್ದು ಮತ್ತು ಇಲ್ಲಿಯವರೆಗೆ ದೇಶಾದ್ಯಂತ 3301 ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಕರ್ನಾಟಕದಲ್ಲಿ ಕಳೆದ ಏಳು ಸ್ಮೈಲ್ ಪ್ಲೀಸ್ ಮಿಷನ್‍ಗಳಲ್ಲಿ ಕರ್ನಾಟಕದ 416 ಮಕ್ಕಳು ಹಾಗೂ ಯುವಕರು ಈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಿವಮೊಗ್ಗದಲ್ಲಿ ಇದು 8ನೇಸ್ಮೈಲ್ ಪ್ಲೀಸ್ ಮಿಷನ್ ಮತ್ತು ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನಲ್ಲಿ ಮೊದಲನೇಯದ್ದಾಗಿದೆ ಎಂದರು.
ಮಿಷನ್ ಸ್ಮೈಲ್ ಆರಂಭವಾದಾಗಿನಿಂದ ದೇಶಾದ್ಯಂತ ಒಟ್ಟಾರೆ 49500ಕ್ಕೂ ಹೆಚ್ಚು ಉಚಿತ ಸೀಳುತುಟಿ ಶಸ್ತ್ರಚಿಕಿತ್ಸೆಗಳನ್ನು ಮತ್ತು 73,000ಕ್ಕೂ ಹೆಚ್ಚು ವೈದ್ಯಕೀಯ ಮೌಲ್ಯಮಾಪನ ನಡೆದಿದೆ. ಹಾಗೆಯೇ ಕರ್ನಾಟಕದಲ್ಲಿ 600ಕ್ಕೂ ಹೆಚ್ಚು ಶಸ್ತ್ರಚಿಕತ್ಸೆಗಳನ್ನು ಪಡೆದಿದ್ದಾರೆ ಎಂದರು.
ಶಿಬಿರದಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ, ವೈದ್ಯರ ಸಲಹೆ, ಔಷಧ ಮತ್ತು ಚಿಕಿತ್ಸೆ, ಆಹಾರ ಮತ್ತು ವಸತಿ ವ್ಯವಸ್ಥೆ, ಪ್ರಯಾಣವೆಚ್ಚದ ಸಹಾಯಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಹೆಸರು ನೊಂದಾಯಿಸಲು ಮೊ. : 9035293680 ಅಥವಾ 9945254429 ಹತ್ತಿರದ ಮುತ್ತೂಟ್ ಪಿನ್‍ಕಾರ್ಪ್ ಅಥವಾ ಮುತ್ತೂಟ್ ಮೈಕ್ರೋಫಿನ್ ಶಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಿಷನ್ ಸ್ಮೈಲ್ ರಾಷ್ಟ್ರೀಯ ಕಾರ್ಯಕ್ರಮದ ಮುಖ್ಯಸ್ಥ ರಫಿಯುರ್ ರಹಮಾನ್, ವಿನಾಯಕ ಹೆಬ್ಬಾರ್, ಶಿವಕುಮಾರ್, ವಿನಾಯಕ ಕುಲಕರ್ಣಿ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post