ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೆಸ್ಕಾಂ ಘಟಕಗಳ ತುರ್ತು ಕಾಮಗಾರಿಗಳ ಹಿನ್ನೆಲೆಯಲ್ಲಿ ಜೂನ್ 29ರಂದು ಶಿವಮೊಗ್ಗ ನಗರದ ಪ್ರಮುಖ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಆಲ್ಕೊಳ ವಿವಿ ಕೇಂದ್ರದಿAದ ಸರಬರಾಜಾಗುವ ಫೀಡರ್ ಎಎಫ್-8ರಲ್ಲಿ ತುರ್ತು ಕಾಮಗಾರಿ ನಡೆಯುವುದರಿಂದ ಜೂನ್ 29 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಲಕ್ಷೀಪುರ, ಕೆಂಚಪ್ಪ ಲೇಔಟ್, ಎನ್’ಎಂಸಿ. ಕಾಂಪೌAಡ್, ಸೂಡಾ ಕಚೇರಿ, ಪೊಲೀಸ್ ಚೌಕಿ, ಸವಿ ಬೇಕರಿ ಎದುರು, 100 ಅಡಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇನ್ನು, ಮೆಸ್ಕಾಂ ಘಟಕ-2ರ ನಗರ ಉಪವಿಭಾಗ 1 ರ ವ್ಯಾಪ್ತಿಯ ರಾಘವೇಂದ್ರ ಸ್ವಾಮಿ ಮಠದ ರಸ್ತೆ ಜಿ¯್ಲÁ ಪಂಚಾಯಿತಿ ಎದುರು ಸ್ಪನ್ ಪೋಲ್ ಸ್ಥಳಾಂತರಿಸುವ ಕಾಮಗಾರಿ ನಡೆಯಲಿರುವುರಿಂದ ಜೂನ್ 29 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೂ ರಾಘವೇಂದ್ರ ಸ್ವಾಮಿ ಮಠದ ರಸ್ತೆ, ತಿಲಕ್ ನಗರ, ರತ್ನಮ್ಮ ಮಾಧವ ರಾವ್ ರಸ್ತೆ, ಕುವೆಂಪು ರಸ್ತೆ, ಪಾರ್ಕ್ ಬಡಾವಣೆ, ದುರ್ಗಿಗುಡಿ, ಶಿವಮೂರ್ತಿ ಸರ್ಕಲ್ ಹಾಗೂ ಜಿಲ್ಲಾ ಪಂಚಾಯ್ತಿ ರಸ್ತೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















