ಕಲ್ಪ ಮೀಡಿಯಾ ಹೌಸ್ | ಮೈಸೂರು |
ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆ ಹೆಚ್ಚಿಸಲು ನೈಋತ್ಯ ರೈಲ್ವೆ ಮೈಸೂರು ವಿಭಾಗವು #South Western Railway Mysore Division ಮೈಸೂರು ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳ ನವೀಕರಣ ಕಾಮಗಾರಿಗಳನ್ನು ಕೈಗೊಂಡಿದ್ದು ಪ್ಲಾಟ್ಫಾರಂ ಸಂಖ್ಯೆ 2 ಮತ್ತು 3 ರಲ್ಲಿ ಇರುವ ಫುಟ್ ಓವರ್ ಬ್ರಿಜ್ (ಎಫ್ಒಬಿ) ಮೆಟ್ಟಿಲುಗಳು 60 ದಿನಗಳ ಕಾಲ ನವೀಕರಣ ಮತ್ತು ದುರಸ್ತಿ ಕೆಲಸಗಳಿಗೆ ಒಳಪಡಲಿವೆ.
ಹಲವು ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಈ ಮೆಟ್ಟಿಲುಗಳು ಹಳೆಯದಾಗಿರುವುದರಿಂದ, ಇಂದಿನ ಸುರಕ್ಷತಾ ಮಾನದಂಡಗಳನ್ನು ಪೂರೈಸಲು ಅವುಗಳನ್ನು ಬದಲಿಸಲಾಗುವುದು.
ಈ ಅವಧಿಯಲ್ಲಿ ಪ್ರಯಾಣಿಕರ ಸುಲಭ ಸಂಚಾರಕ್ಕೆ ತಾತ್ಕಾಲಿಕ ಬದಲಿ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ಲಿಫ್ಟ್ ಮತ್ತು ಅಂಡರ್ಪಾಸ್ ಬಳಸುವಂತೆ ವಿನಂತಿಸಲಾಗಿದೆ. ಸ್ಪಷ್ಟ ಮಾರ್ಗಸೂಚಿ ಫಲಕಗಳು, ಘೋಷಣೆಗಳು ಹಾಗೂ ನಿಲ್ದಾಣ ಸಿಬ್ಬಂದಿಯಿಂದ ಸಹಾಯ ಲಭ್ಯವಿರುತ್ತದೆ.
ಈ ಅವಧಿಯಲ್ಲಿ ಉಂಟಾಗುವ ತೊಂದರೆಗಾಗಿ ನೈಋತ್ಯ ರೈಲ್ವೆ ವಿಷಾದಿಸುತ್ತದೆ ಹಾಗೂ ಪ್ರಯಾಣಿಕರ ಸಹಕಾರವನ್ನು ಕೋರುತ್ತದೆ.
ಈ ನವೀಕರಣದಿಂದಾಗಿ ಮೈಸೂರು ನಿಲ್ದಾಣದ ಮೂಲಸೌಕರ್ಯಗಳು ಇನ್ನಷ್ಟು ಸುರಕ್ಷಿತವಾಗಲಿದ್ದು, ಪ್ರಯಾಣಿಕ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಸಹಾಯವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post