ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಐಡಿ ಕಾರ್ಡ್ #ID Card ಇಲ್ಲದಂತೆ ವ್ಯಾಪಾರ ನಡೆಸುತ್ತಿರುವವರ ಬಗ್ಗೆ ಪರಿಶೀಲನೆ ನಡೆಸಿ, ಸರಿಯಾದ ದಾಖಲೆ ಇಲ್ಲದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ #MLA Channabasappa ಸೂಚನೆ ನೀಡಿದರು.
ಶಾಸಕರ ಕಚೇರಿಯಲ್ಲಿ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ ಅವರೊಂದಿಗೆ ನೆಹರು ರಸ್ತೆ ಹಾಗೂ ಗಾಂಧಿ ಬಜಾರ್ ವರ್ತಕರ ಸಂಘದ ಸದಸ್ಯರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಏನೆಲ್ಲಾ ಸೂಚನೆ ನೀಡಿದ್ದಾರೆ?
- ಗಾಂಧಿ ಬಜಾರ್ ಕೆಲ ಕಿಡಿಗೇಡಿಗಳಿಂದ ಉಂಟಾಗುತ್ತಿರುವ ಟ್ರಾಫಿಕ್ ಅಶಿಸ್ತಿಗೆ ಸಂಬಂಧಿಸಿದಂತೆ ತಕ್ಷಣದ ನಿಗಾವಹಿಸಿ
- ಅನಧಿಕೃತವಾಗಿ ಬೇರೆ ರಾಜ್ಯಗಳಿಂದ ಬಂದಿರುವ ಕೆಲವು ವ್ಯಾಪಾರಿಗಳು ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ
- ಐಡಿ ಕಾರ್ಡ್ ಇಲ್ಲದಂತೆ ವ್ಯಾಪಾರ ನಡೆಸುತ್ತಿರುವವರ ಬಗ್ಗೆ ಪರಿಶೀಲನೆ ನಡೆಸಿ, ಸರಿಯಾದ ದಾಖಲೆ ಇಲ್ಲದವರ ವಿರುದ್ಧ ಕ್ರಮ ವಹಿಸಿ
- ಅಸಮರ್ಪಕವಾಗಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಪ್ರವೃತ್ತಿ, ವ್ಯಾಪಾರ ಪ್ರದೇಶಗಳಲ್ಲಿ ಗಂಭೀರ ಟ್ರಾಫಿಕ್ ಸಮಸ್ಯೆ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ, ಪಾರ್ಕಿಂಗ್ ನಿಯಮಗಳ ಅಳವಡಿಕೆಗೆ ಆದ್ಯತೆ ನೀಡಿ
- ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಕೆಲ ಕಿಡಿಗೇಡಿಗಳ ವಿರುದ್ಧ ಕ್ರಮ ವಹಿಸಿ
- ಹಬ್ಬದ ಸಂದರ್ಭಗಳಲ್ಲಿ ಉಂಟಾಗುವ ಪಾರ್ಕಿಂಗ್ ಗೊಂದಲಗಳನ್ನು ನಿಯಂತ್ರಿಸಲು, ಪ್ರತ್ಯೇಕ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಮಾಡಿ
- ನೆಹರು ರಸ್ತೆಯಲ್ಲಿನ ಪಾರ್ಕಿಂಗ್ ಸಮಸ್ಯೆ ಬಗೆಹರಿಸಿ
- ನೆಹರು ರಸ್ತೆಯಲ್ಲಿನ ಅಪಾಯಕಾರಿಯಾದ ಗುಂಡಿಗಳನ್ನು ತ್ವರಿತವಾಗಿ ದುರಸ್ತಿ ಮಾಡಿ
- ಡಿವೈಡರ್’ಗಳ ಮೇಲೆ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸಿ, ದಾರಿಗಳ ದೃಶ್ಯತೆ ಮತ್ತು ಸುರಕ್ಷತೆಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಿ
- ಅನಧಿಕೃತವಾಗಿ ಹಾಕಲಾಗಿರುವ ಫ್ಲೆಕ್ಸ್ ಬೋರ್ಡುಗಳು, ನಗರ ಸೌಂದರ್ಯವನ್ನು ಹಾನಿಗೊಳಿಸುತ್ತಿರುವುದರಿಂದ ಅವನ್ನು ತೆರವುಗೊಳಿಸಲು ತP್ಷÀಣದ ಕ್ರಮ ಕೈಗೊಳ್ಳಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post