ಕಲ್ಪ ಮೀಡಿಯಾ ಹೌಸ್ | ಕರ್ನಾಟಕ |
ಮಾರಾಟದಲ್ಲಿ ಮಹಿಳೆಯರು ಸಬಲೀಕರಣ ಹೊಂದಲು, ಅದರೆಡೆ ಸಂಪೂರ್ಣ ಗಮನಹರಿಸುವ ಸಲುವಾಗಿ, ಅದಕ್ಕಾಗಿ ಮೀಸಲಾದ ವಿಭಾಗ Oyiii ಅನ್ನು ಪ್ರಾರಂಭಿಸುವುದಾಗಿ ನಾಮ್ಸ್‌ಬೆಲ್ ಘೋಷಿಸಿದೆ.
ಮಹಿಳಾ ವೃತ್ತಿಪರರು ಮತ್ತು ಅಧಿಕೃತ ಗ್ರಾಹಕ ಸಂಪರ್ಕ ಬಯಸುವ ಬ್ರ್ಯಾಂಡ್‌ಗಳ ನಡುವಿನ ಅಂತರ ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ Oyiii ಮಾರಾಟ ಉದ್ಯಮದಲ್ಲಿ ಪ್ರಭಾವಿ ಪರಿಣಾಮ ಸೃಷ್ಟಿಸುವ ಗುರಿ ಹೊಂದಿದೆ.

“ರೆಸ್ಯೂಮ್‌ಗಳು ಒಂದು ಕಥೆಯಾದರೆ, ಅಭ್ಯರ್ಥಿಯು ಬ್ರ್ಯಾಂಡ್‌ನ ಪ್ರೇಕ್ಷಕರೊಂದಿಗೆ ನಿಜವಾದ ಸಂಪರ್ಕ ಸಾಧಿಸಿದಾಗ ನೈಜ ಮ್ಯಾಜಿಕ್(ಅದ್ಭುತ) ಸಂಭವಿಸುತ್ತದೆ. ಹೀಗಾಗಿ ಸಂಪರ್ಕ ಸಾಧಿಸುವುದು ಕಷ್ಟ ಎಂದಾಗ ಅಲ್ಲಿ ಓಯೀ ಧಾವಿಸುತ್ತದೆ.”
ಉದ್ಯಮ-ನಿರ್ದಿಷ್ಟ ತರಬೇತಿ, ವೃತ್ತಿ ಬೆಳವಣಿಗೆಯ ಅವಕಾಶಗಳು ಮತ್ತು ಮಹಿಳೆಯರ ಸಾಮರ್ಥ್ಯ ಗಳನ್ನು ಎತ್ತಿ ತೋರಿಸುವ ಸೂಕ್ತವಾದ ಪಾತ್ರಗಳಿಗೆ ಪ್ರವೇಶ ಒದಗಿಸಲು Oyiii ಯನ್ನು ನಿರ್ಮಿಸಲಾಗಿದೆ. ಈ ಉಪಕ್ರಮವು ಕೇವಲ ಉದ್ಯೋಗದ ಬಗ್ಗೆ ಅಲ್ಲ, ಮಹಿಳೆಯರು ಹೊಳೆಯುವ, ಬೆಳೆಯುವ ಮತ್ತು ತಮಗಾಗಿ ಮತ್ತು ಅವರು ಪ್ರತಿನಿಧಿಸುವ ಬ್ರ್ಯಾಂಡ್‌ಗಳಿಗಾಗಿ ಶಾಶ್ವತ ವ್ಯತ್ಯಾಸವನ್ನುಂಟು ಮಾಡುವ ಸ್ಥಳಗಳನ್ನು ಸೃಷ್ಟಿಸುವುದಾಗಿದೆ.

“ಮಹಿಳೆಯರು ಕೇವಲ ಕೊಡುಗೆ ನೀಡುವುದಕ್ಕೆ ಮಾತ್ರ ಸೀಮಿತರಾಗಿಲ್ಲ, ಅವರು ರೂಪಾಂತರಕ್ಕೆ ವೇಗವರ್ಧಕರು ಎಂಬ ನಂಬಿಕೆಯ ಮೇಲೆ Oyiii ನಿರ್ಮಿಸಲಾಗಿದೆ. ಅವರು ಗ್ರಾಹಕರೊಂದಿಗೆ ಆಳವಾಗಿ ಸಂಪರ್ಕ ಸಾಧಿಸುತ್ತಾರೆ, ವಿಶ್ವಾಸ ಗಳಿಸುತ್ತಾರೆ ಮತ್ತು ವಹಿವಾಟನ್ನು ಮೀರಿದ ನಿಷ್ಠೆಯನ್ನು ನಿರ್ಮಿಸು ತ್ತಾರೆ. ಸೂಕ್ತ ಬೆಂಬಲದೊಂದಿಗೆ, ಹೆಚ್ಚಿನ ವಹಿವಾಟು ನಡೆಸುವ ಉದ್ಯಮಕ್ಕೆ ಸ್ಥಿರತೆ ತರುತ್ತಾರೆ” ಎಂದು ನಾಮ್ಸ್‌ಬೆಲ್‌ನ ಪ್ರತಿಭಾ ಸ್ವಾಧೀನ ಮುಖ್ಯಸ್ಥೆ ಸ್ನೇಹಾ ಪಟೇಲ್ ಹೇಳುತ್ತಾರೆ.

ಬ್ರ್ಯಾಂಡ್‌ಗಳು ಕಾರ್ಯಕ್ಷಮತೆ-ಚಾಲಿತ ಪ್ರತಿಭೆಗೆ Oyiii ಮೂಲಕ, ಪ್ರವೇಶ ಪಡೆಯುತ್ತವೆ ಮತ್ತು ಮಹಿಳೆಯರು ಅರ್ಥಪೂರ್ಣ ವೃತ್ತಿಜೀವನಕ್ಕೆ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ – ಇದು ಕೇವಲ ನೇಮಕಾತಿಯಲ್ಲ, ಒಂದು ಚಳುವಳಿಯಾಗಿದೆ.
ಮುಖ್ಯವಾಗಿ, ಮಹಿಳೆಯರು ಮುಂಚೂಣಿಯ ಪಾತ್ರಗಳಲ್ಲಿ ಅಭಿವೃದ್ಧಿ ಹೊಂದುವುದನ್ನು ನೋಡುವ ಅವರ ಕನಸನ್ನು ನಾಮ್ಸ್‌ಬೆಲ್ ತಂಡವು ಜೀವಂತಗೊಳಿಸಿದೆ. 18 ವರ್ಷದ ನಿದಾ ರಾಯನ್ ಅವರ ದೃಷ್ಟಿಕೋನದಿಂದ Oyiii ಸ್ಫೂರ್ತಿ ಪಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post