ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸ್ಪೆಷಲಿಸ್ಟ್ ಸ್ಟಾಫಿಂಗ್ ಸಂಸ್ಥೆ Xpheno ಇಂದು ತನ್ನ ಸೇವಾ ಪೋರ್ಟ್ಫೋಲಿಯೊವನ್ನು ಸ್ಟಾಫಿಂಗ್ ಮತ್ತು ಪ್ರತಿಭಾ ಸಲಹಾ ಸೇವೆಗಳಿಂದ ಹೊರಗೆ ವಿಸ್ತರಿಸಿ Recruitment Process Outsourcing (RPO) ಎಂಬ ಹೊಸ ವಿಭಾಗವನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಈ ಹೊಸ ವಿಭಾಗವನ್ನು ಮುನ್ನಡೆಸಲು ಶರಿನ್ ಕರಿಯಪ್ಪರನ್ನು RPO ಮುಖ್ಯಸ್ಥರಾಗಿ ನೇಮಿಸಲಾಗಿದೆ.
8 ವರ್ಷಗಳಲ್ಲಿ 30,000 ಕ್ಕೂ ಹೆಚ್ಚು GCC ನೇಮಕಾತಿಗಳು ನಡೆದಿರುವುದರಿಂದ, ಭಾರತದಲ್ಲಿನ ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳಿಗೆ (GCC) ಪ್ರತಿಭಾ ಕಾರ್ಯಗಳನ್ನು ನಿರ್ಮಿಸಿ ವಿಸ್ತರಿಸುವಲ್ಲಿ Xpheno ಪರಿಣತಿಯನ್ನು ಬಳಸಿಕೊಳ್ಳುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 40 ಕ್ಕೂ ಹೆಚ್ಚು ಟರ್ನ್‌ಕಿ GCC ವಿಸ್ತರಣೆಗಳನ್ನು ಯಶಸ್ವಿಯಾಗಿ ನೆರವೇರಿಸಿರುವ Xpheno, ತನ್ನ RPO ಚಟುವಟಿಕೆಗಳ ಮೂಲಕ ಸಂಸ್ಥೆಗಳಿಗೆ ವೇಗ, ಪ್ರಮಾಣ ಮತ್ತು ಸ್ಥಿರತೆ ಒದಗಿಸಲು ತಯಾರಾಗಿದೆ.

ಶರಿನ್ ಕರಿಯಪ್ಪ, Head of RPO, Xpheno, ಮಾತನಾಡಿ; “Xpheno ಯ RPO ವ್ಯವಹಾರವನ್ನು ಮುನ್ನಡೆಸುವುದಕ್ಕೆ ನನಗೆ ಅಪಾರ ಸಂತೋಷವಾಗಿದೆ. ಜಾಗತಿಕ ಗ್ರಾಹಕರೊಂದಿಗೆ ವಿವಿಧ ಪ್ರಮಾಣ ಮತ್ತು ಸಂಕೀರ್ಣತೆಯ Hiring ಯೋಜನೆಗಳಲ್ಲಿ ಕೆಲಸ ಮಾಡಿದ ಅನುಭವದಿಂದ, ನಾನು ಇಲ್ಲಿ ಅಪಾರ ಅವಕಾಶಗಳನ್ನು ಕಾಣುತ್ತೇನೆ. Xpheno ಯ GCC ಪರಿಣತಿ ಮತ್ತು ನಮ್ಮ RPO ಸಾಮರ್ಥ್ಯದ ಸಂಯೋಜನೆ, ಭಾರತದ ಎಂಟರ್‌ಪ್ರೈಸ್ Hiring ಕ್ಷೇತ್ರದಲ್ಲಿ ಗೇಮ್-ಚೇಂಜರ್ ಆಗಲಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post