ಚೀನಾ ಡ್ರ್ಯಾಗೆನ್‍ಗೆ ಮೊದಲಿನಿಂದಲೂ ಭೂದಾಹ. ತನ್ನ ಭೂವ್ಯಾಪ್ತಿಯನ್ನು ವಿಸ್ತರಿಸಲು ಸದಾ ಪ್ರಯತ್ನಿಸುತ್ತಿರುತ್ತದೆ. ಅರುಣಾಚಲದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಭಾರತದ ನೆರೆಯ ಪಾಕಿಸ್ಥಾನದೊಂದಿಗೆ ಸೇರಿ ಭಾರತವನ್ನು ಹಣಿಯಲು ಪ್ರಯತ್ನಿಸುತ್ತಿದೆ. ಮೇಲಾಗಿ 138 ಕೋಟಿ ಜನಸಂಖ್ಯೆ ಹೊಂದಿದೆ.
ಹಾಗಾಗಿ, ದೊಡ್ಡ ಸೈನ್ಯವನ್ನು ಕಟ್ಟಿದೆ. ಇನ್ನು ಅಮೆರಿಕಾವು ತನಗೆ ಲಾಭ ಸಿಗುವೆಡೆಯೆಲ್ಲಾ ತನ್ನ ಸೈನ್ಯವನ್ನು ನಿಯೋಜಿಸುತ್ತದೆ. ಉದಾ: ಅಫ್ಘಾನಿಸ್ತಾನ್, ಇರಾಕ್, ಸಿರಿಯಾ ಮತ್ತು ವಿಶ್ವಸಂಸ್ಥೆಯಡಿ ಶಾಂತಿ ಸ್ಥಾಪಿಸಲು ಹಲವು ದೇಶಗಳಿಗೆ ತನ್ನ ಸೈನ್ಯವನ್ನು ಕಳುಹಿಸುತ್ತದೆ.
ಅಮೆರಿಕಾ ದೊಡ್ಡ ಸೈನ್ಯವನ್ನು ಹೊಂದಿದ್ದರೆ ಕೆಲವು ಕಾರಣಗಳಿವೆ. (ಸಕಾರಣವೇ? ಗೊತ್ತಿಲ್ಲ). ಇನ್ನು ಭಾರತ 125 ಕೋಟಿ ಜನಸಂಖ್ಯೆ ಹೊಂದಿದೆ. ದೇಶದ ಸುತ್ತಲೂ ಪಾಕಿಸ್ಥಾನ, ಬಾಂಗ್ಲಾ, ಚೀನಾ, ಶ್ರೀಲಂಕಾ ದೇಶಗಳು ಸುತ್ತುವರೆದಿವೆ. ಚೀನಾ ಎಲ್ಲ ದಿಕ್ಕುಗಳಲ್ಲೂ ಅಂದರೆ ಮ್ಯಾನ್ಮಾರ್‍ನ ಸಿಕ್ವೆ ಬಂದರು, ಬಾಂಗ್ಲಾದ ಢಾಕಾ ಬಂದರು, ಶ್ರೀಲಂ ಕಾದ ಹಂಬಂಟೋಟಾ ಬಂದರು, ಮಾಲ್ಡೀವ್ಸ್ ಮತ್ತು ಪಾಕಿಸ್ಥಾನದ ಗ್ವಾದಾರ್ ಬಂದರುಗಳಲ್ಲಿ ತನ್ನ ನೌಕಾನೆಲೆಯನ್ನು ಸ್ಥಾಪಿಸಿದೆ.
ಹೀಗಾಗಿ, ಭಾರತ ದೊಡ್ಡ ಸೈನ್ಯವನ್ನು ಹೊಂದಿರುವುದಕ್ಕೆ ಕಾರಣವಿದೆ. ಆದರೆ, ಚೀನಾದ ಪರಮಾಪ್ತ ಉ. ಕೊರಿಯಾ ಅಷ್ಟು ದೊಡ್ಡ ಸೈನ್ಯವನ್ನು ಹೊಂದಿರುವುದಕ್ಕೆ ಕಾರಣಗಳೇ ಇಲ್ಲ. ಕಣ್ಣಿಗೆ ಕಾಣುವ ಕಾರಣ ಅಂದರೆ ದ. ಕೊರಿಯಾವನ್ನು ವಶಪಡಿಸಿಕೊಳ್ಳುವುದು ಮತ್ತು ಅದಕ್ಕೆ ಅಡ್ಡಲಾಗಿ ನಿಂತಿರುವ ಅಮೆರಿಕಾವನ್ನು ಬಗ್ಗುಬಡಿಯುವುದು.
ದೇಶ ಒಟ್ಟಾರೆ ಸೈನ್ಯ ಪ್ರತಿಸಾವಿರ ನಾಗರಿಕರಿಗೆ
ಚೀನಾ 35,03,000 2.6 ಸೈನಿಕರು
ಅಮೆರಿಕಾ 23,49,950 7.3 ಸೈನಿಕರು
ಭಾರತ 47,68,407 3.9 ಸೈನಿಕರು
ಉತ್ತರ ಕೊರಿಯಾ 76,79,000 308.5 ಸೈನಿಕರು
ರಷ್ಯಾ 33,64,000 23.4 ಸೈನಿಕರು
ದೇಶದ ಒಟ್ಟಾರೆ ಜನಸಂಖ್ಯೆಯ 3ನೆಯ 1 ಭಾಗ ಸೈನಿಕರೇ ತುಂಬಿದ್ದಾರೆಂದರೆ ಉತ್ತರ ಕೊರಿಯಾ ಅದಿನ್ನೆಷ್ಟು ಅನವಶ್ಯಕ ಸೈನ್ಯವನ್ನು ಸೃಷ್ಟಿಸಿದೆ ಊಹಿಸಿಕೊಳ್ಳಿ.
(ಮುಂದುವರೆಯವುದು)
Discussion about this post