ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸ್ವಚ್ಛೋತ್ಸವ – ಸ್ವಚ್ಛತಾ ಹಿ ಸೇವಾ 2025 ಅಭಿಯಾನದ ಭಾಗವಾಗಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು #Southwestern Railway Bangalore ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳು ಯ ಶಸ್ವಿಯಾಗಿ ನಡೆದವು.
ಅಭಿಯಾನದ ಅಂಗವಾಗಿ ಇಂದು ಸಸಿ ನೆಡುವ ಕಾರ್ಯಕ್ರಮ ಮತ್ತು ಕುದುರೆ ಶಿಲ್ಪದ ಅನಾವರಣ ಕಾರ್ಯಕ್ರಮ ಆಯೋಜಿಸಿತ್ತು. ಪರಿಸರ ಸುಸ್ಥಿರತೆ ಮತ್ತು ಸಾರ್ವಜನಿಕ ಜಾಗೃತಿಯನ್ನು ಕೇಂದ್ರೀಕರಿಸಿದ ಸರಣಿ ಕಾರ್ಯಕ್ರಮಗಳನ್ನು ಆಚರಿಸಿತು.

ಅದೇ ರೀತಿಯಲ್ಲಿ ಕೃಷ್ಣರಾಜಪುರಂ, ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಯಶವಂತಪುರ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ, ಹಿಂದೂಪುರ, ಧರ್ಮಪುರಿ, ಹೊಸೂರು ಮತ್ತು ಬಂಗಾರಪೇಟೆಯಲ್ಲಿಯೂ ಸಹ ಸಸಿ ನೆಡುವ ಕಾರ್ಯಕ್ರಮ ಏರ್ಪಡಿಸಿದ್ದು ಇದರಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಯಶವಂತಪುರದ ಕೋಚಿಂಗ್ ಡಿಪೋದಲ್ಲಿ ನಿರ್ಮಿಸಲಾಗಿದ್ದ ಕುದುರೆ ಕಲಾಕೃತಿಯ ಅನಾವರಣವು ಈ ದಿನದ ವಿಶೇಷ ಆಕರ್ಷಣೆಯಾಗಿತ್ತು.
ಸ್ವಚ್ಛತಾ ಹಿ ಸೇವಾ ಅಭಿಯಾನದ ವೇಸ್ಟ್ ಟು ಆರ್ಟ್ ಉಪಕ್ರಮದ ಅಡಿಯಲ್ಲಿ ರಚಿಸಲಾದ ಈ ಶಿಲ್ಪವನ್ನು ಸ್ಪ್ರಿಂಗ್’ಗಳು, ಕಬ್ಬಿಣದ ರಾಡ್’ಗಳು, ಟ್ರಾಲಿ ಚಕ್ರಗಳು, ಬೋಲ್ಟ್’ಗಳು, ನಟ್ಸ್ ಮತ್ತು ಚಕ್ರಗಳಂತಹ ನಿರುಪಯುಕ್ತ ವಸ್ತುಗಳನ್ನು ಬಳಸಿ ಕಲಾಕೃತಿ ನಿರ್ಮಿಸಲಾಗಿದೆ.

ಹೆಚ್ಚುವರಿ ವಿಭಾಗೀಯ ರೈಲ್ವೇ ವ್ಯವಸ್ಥಾಪಕರಾದ ಪರೀಕ್ಷಿತ್ ಮೋಹನ್ಪುರಿಯಾ, ಹಿರಿಯ ಕೋಚಿಂಗ್ ಡಿಪೋ ಅಧಿಕಾರಿ ಧರ್ಮೇಂದ್ರ ಸೀವಿರ್ ಮತ್ತು ಕೋಚಿಂಗ್ ಡಿಪೋ ಅಧಿಕಾರಿ ಪ್ರಶಾಂತ್ ಮತ್ತಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















Discussion about this post