ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಅರಸಾಳು ಹಾಗೂ ಕುಂಸಿ ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ, ನೈಋತ್ಯ ರೈಲ್ವೆಯು ಇದೇ ಅಕ್ಟೋಬರ್ 6ರಿಂದ 2026 ಜನವರಿ 5ರವರೆಗೂ ಅಂದರೆ ಮೂರು ತಿಂಗಳ ಕಾಲ ಕೆಲವು ರೈಲುಗಳ ಪ್ರಯೋಗಾತ್ಮಕ ತಾತ್ಕಾಲಿಕ ನಿಲುಗಡೆ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ಮುಂದುವರಿಸಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ರೈಲಿನ ವಿವರಗಳು ಈ ಕೆಳಗಿನಂತಿವೆ.
1. 20651 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ತಾಳಗುಪ್ಪ ಎಕ್ಸ್’ಪ್ರೆಸ್ ಕುಂಸಿಗೆ 20:05 ಕ್ಕೆ ಬಂದು 20:06 ಕ್ಕೆ ಹೊರಡುತ್ತದೆ. ಅರಸಾಳು 20:20 ಕ್ಕೆ ಬಂದು 20:21 ಗಂಟೆಗೆ ಹೊರಡಲಿದೆ.
2. 20652 ಸಂಖ್ಯೆಯ ತಾಳಗುಪ್ಪ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ಅರಸಾಳು 06:19 ಕ್ಕೆ ಬಂದು 06:20 ಗಂಟೆಗೆ ಹೊರಡಲಿದೆ. ಕುಂಸಿ 06:33 ಕ್ಕೆ ಬಂದು 06:34 ಗಂಟೆಗೆ ಹೊರಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post