ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಪಿಇಎಸ್’ಐಎಂಎಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಹಣಕಾಸಿನ ಸಾಕ್ಷರತೆ ಕುರಿತ ವಿಶೇಷ ಉಪನ್ಯಾಸ ಯಶಸ್ವಿಯಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರಿನ ಹಣಕಾಸು ಸೇರ್ಪಡೆ ಅಭಿವೃದ್ಧಿ ಇಲಾಖೆಯ ಸಹಾಯಕ ಜನರಲ್ ಮ್ಯಾನೇಜರ್ ಬುಬುಲ್ ಬೊರ್ಡೋಲಿ ಅವರು, ಭಾರತೀಯ ರಿಸರ್ವ್ ಬ್ಯಾಂಕ್, ಅದರ ಕಾರ್ಯಗಳು, ಪಾತ್ರ ಮತ್ತು ಪ್ರಾಮುಖ್ಯತೆ, ನಿಯಂತ್ರಣ ಪ್ರಾಧಿಕಾರದ ಕಾರ್ಯ ನಿರ್ವಹಣೆ ಕುರಿತು ಮಹತ್ವದ ವಿಚಾರಗಳನ್ನು ತಿಳಿಸಿಕೊಟ್ಟರು.
ವಾಣಿಜ್ಯ ಬ್ಯಾಂಕುಗಳಲ್ಲಿ ಆರ್‌ಬಿಐನ ಪಾತ್ರ, ಆರ್ಥಿಕ ಅರಿವು ಮತ್ತು ಸಾಕ್ಷರತೆ ಹಣಕಾಸು ಜ್ಞಾನ, ಹಣಕಾಸು ನಡವಳಿಕೆ, ಆರ್ಥಿಕ ವರ್ತನೆ, ಬಜೆಟ್, ಉಳಿತಾಯ ಮತ್ತು ಜವಾಬ್ದಾರಿಯುತ ಸಾಲ ಪಡೆಯುವ ಕ್ರಮ, ಆರ್ಥಿಕ ಸಾಕ್ಷರತೆಯ ಪ್ರಮುಖ ಅಂಶಗಳು ಮತ್ತು ಪ್ರಾಮುಖ್ಯತೆ, ಆನ್‌ಲೈನ್ ಬ್ಯಾಂಕಿಂಗ್‌ಗಾಗಿ ಉತ್ತಮ ಅಭ್ಯಾಸಗಳು ಪಾವತಿ ಮತ್ತು ಕಾರ್ಡ್ ಸುರಕ್ಷತೆ, ಬ್ಯಾಂಕಿಂಗ್‌ನಲ್ಲಿ ಸೈಬರ್ ಭದ್ರತೆ, ಸಾಮಾಜಿಕ ಭದ್ರತಾ ಕಲ್ಯಾಣ ಯೋಜನೆಗಳು, ಮಾದರಿ ಶೈಕ್ಷಣಿಕ ಸಾಲ ಯೋಜನೆಗಳು ಮೊದಲಾದ ವಿಷಯಗಳ ಕುರಿತು ಮಾಹಿತಿಗಳನ್ನು ನೀಡಿದರು.
ಶಿವಮೊಗ್ಗದ ಲೀಡ್ ಬ್ಯಾಂಕ್‌ನ ಲೀಡ್ ಡಿಸ್ಟಿçಕ್ ಮ್ಯಾನೇಜರ್ ಹನುಮಂತಪ್ಪ ಅವರು ಲೀಡ್ ಬ್ಯಾಂಕ್’ಗಳ ಕಾರ್ಯ ವಿಧಾನದ ಕುರಿತು ಹಲವು ಉಪಯುಕ್ತ ಮಾಹಿತಿಯನ್ನು ನೀಡಿದರು.
ಪ್ರಾಂಶುಪಾಲರಾದ ಡಾ.ಜಿ.ಎಂ. ಸುದರ್ಶನ್, ಶಿವಮೊಗ್ಗದ ಲೀಡ್ ಬ್ಯಾಂಕಿನ ಅಧಿಕಾರಿಗಳಾದ ಬಿ. ಹೊನ್ನಪ್ಪ, ನಿರ್ವಹಣಾ ಶಾಸ್ತç ವಿಭಾಗದ ಮುಖ್ಯಸ್ಥ ಡಿ. ಮೋಹನ್, ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಆರ್. ಮಂಜುನಾಥ್,ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿ ವರ್ಗದವರು ಹಾಗೂ ಬಿಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವಿಲ್ಮಾ ಮಿರಾಂಡ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post