ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರಿ ಮೋಟಾರ್ ಸ್ಪೀಡ್‌ವೇಯಲ್ಲಿ ಇಂದು ನಡೆದ ಜೆಕೆ ಟೈರ್ ಇಂಡಿಯನ್ ರೇಸಿಂಗ್ ಫೆಸ್ಟಿವಲ್ ನ 3 ನೇ ಸುತ್ತಿನಲ್ಲಿ ಕೈಲ್ ಕುಮಾರನ್ (ಇಂಡಿಯನ್ ರೇಸಿಂಗ್ ಲೀಗ್), ಇಟ್ಸುಕೀ ಸಾಟೋ (ಎಫ್‌ಐಎ ಪ್ರಮಾಣಿತ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್) ಮತ್ತು ಮೆಹುಲ್ ಅಗರವಾಲ್ (28ನೇ ಜೆಕೆ ಟೈರ್ ಎಫ್‌ಎಂಎಸ್‌ಸಿಐ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್ ಫಾರ್ಮುಲಾ ಎಲ್‌ಜಿಬಿ4) ಅತ್ಯತ್ತಮ ಪ್ರದರ್ಶನ ನೀಡಿದರು.
ಇಂಡಿಯನ್ ರೇಸಿಂಗ್ ಲೀಗ್
ಕಿಚ್ಚಾ ಕಿಂಗ್ಸ್ ಬೆಂಗಳೂರು ತಂಡದ ಕೈಲ್ ಕುಮಾರನ್ ರೇಸಿಂಗ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಜಯಶೀಲರಾಗಿ, ಭಾರತದ ಸ್ಪರ್ಧಾತ್ಮಕ ಮೋಟಾರ್‌ಸ್ಪೋರ್ಟ್ಸ್ ವೇದಿಕೆಯಾಗಿ ಬೆಳೆಯುತ್ತಿರುವ ಇಂಡಿಯನ್ ರೇಸಿಂಗ್ ಲೀಗ್‌ನಲ್ಲಿ ಎಲ್ಲರ ಗಮನ ಸೆಳೆದರು.
ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ‘ಎ’ ಚಾಲಕ ಕುಮಾರನ್, ಪೋಲ್ ಪೊಸಿಷನ್‌ನಿಂದ ಪ್ರಾರಂಭಿಸಿ 25 ನಿಮಿಷ + 1 ಲ್ಯಾಪ್‌ನ ಪ್ರಮುಖ ರೇಸ್‌ನಲ್ಲಿ ಆಧಿಪತ್ಯ ಸಾಧಿಸಿದರು. 2.4 ಕಿಮೀ ಸರ್ಕ್ಯೂಟ್‌ನಲ್ಲಿ ವೇಗ ಮತ್ತು ನಿಯಂತ್ರಣದ ಮೂಲಕ ಮೊದಲ ಲ್ಯಾಪ್‌ನಿಂದಲೇ ಮುನ್ನಡೆ ಪಡೆದು ಕೊನೆ ಹಂತದವರೆಗೂ ಮುಂದುವರೆಸಿದರು.
ಈ ಬಗ್ಗೆ ಮಾತನಾಡಿದ ಕುಮಾರನ್, “ಕಾರು ಸೂಪರ್ ಆಗಿತ್ತು ಹಾಗು ಪೋಡಿಯಂನಲ್ಲಿ ನಿಂತಾಗ ಬಹಳ ಖುಷಿಯಾಯಿತು’ ಎಂದರು.
ಏಳನೇ ಸ್ಥಾನದಲ್ಲಿದ್ದ ನೀಲ ಜಾನಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದುದರಿಂದ ಕಿಚ್ಚಾಸ್ ಕಿಂಗ್ಸ್ ತಂಡಕ್ಕೆ ಡಬಲ್ ಪೋಡಿಯಂ ಸಿಕ್ಕಿತು. ಹೈದರಾಬಾದ್ ಬ್ಲ್ಯಾಕ್ ಬರ್ಡ್ಸ್‌ನ ಅಖಿಲ್ ರಬೀಂದ್ರ ದ್ವಿತೀಯ ಸ್ಥಾನ ಪಡೆದರು.
ಪ್ರೊವಿಷನಲ್ ಫಲಿತಾಂಶಗಳು (IRL Driver A Race):
1. ಕೈಲ್ ಕುಮಾರನ್ (ಕಿಚ್ಚಾಸ್ ಕಿಂಗ್ಸ್ ಬೆಂಗಳೂರು) – 26:34.556
2. ಅಖಿಲ್ ರಬೀಂದ್ರ (ಹೈದರಾಬಾದ್ ಬ್ಲ್ಯಾಕ್ ಬರ್ಡ್ಸ್) – 26:36.855
3. ನೀಲ್ ಜಾನಿ (ಕಿಚ್ಚಾಸ್ ಕಿಂಗ್ಸ್ ಬೆಂಗಳೂರು) – 26:36.934ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್:
ತನ್ನ ಮೊದಲ ರೇಸ್ ನಲ್ಲಿಎಲ್ಲರನ್ನು ಅಚ್ಚರಿಸಿಗೊಳಿಸಿದ ಸಾಟೋ ಶಾಕ್, ಜಪಾನ್‌ನ ಇಟ್ಸುಕೀ ಸಾಟೋ, ಅಹಮದಾಬಾದ್ ಏಪೆಕ್ಸ್ ರೇಸರ್ಸ್ ಪರ ತಮ್ಮ ಭಾರತೀಯ ಡೆಬ್ಯೂ ರೇಸ್‌ನಲ್ಲೇ ಮಾಸ್ಟರ್‌ಕ್ಲಾಸ್ ಪ್ರದರ್ಶನ ನೀಡಿ ಪೋಲ್‌ನಿಂದಲೇ ಮುನ್ನಡೆ ಕಾಯ್ದುಕೊಂಡು ಮೊದಲ ರೇಸ್ ಗೆದ್ದರು. 15 ವರ್ಷದ ಶೇನ್ ಚಂದಾರಿಯಾ (ಚೆನ್ನೈ ಟರ್ಬೋ ರೈಡರ್ಸ್) ಅವರಿಗೆ 5 ಸ್ಥಾನಗಳ ಗ್ರಿಡ್ ಪೆನಾಲ್ಟಿ ವಿಧಿಸಲಾಯಿತು, ಈಗಾಗಿ ಸಾಟೋಗೆ ಪೋಲ್‌ನಿಂದ ಆರಂಭಿಸಲು ಅವಕಾಶ ದೊರೆಯಿತು. ಜಪಾನ್, ಮೊಜಾಂಬಿಕ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳ ಸ್ಪರ್ಧಿಗಳ ವಿರುದ್ಧ ಸಾಟೋ ಸ್ಪರ್ಧಿಸಿ 27:10.989 ಸಮಯದಲ್ಲಿ ಫಿನಿಷ್‌ಲೈನ್ ದಾಟಿದರು.
ಈ ಬಗ್ಗೆ ಮಾತನಾಡಿದ ಸಾಟೋ, ‘ರೇಸಿಂಗ್ ನಲ್ಲಿ ಪಾಲ್ಗೊಂಡಿದ್ದು ಸಕತ್ ಖುಷಿಯಾಯಿತು, ನಾನು ಗೆಲ್ಲಬಲ್ಲೆ ಎಂದು ತೋರಿಸಿದೆ” ಎಂದರು.
ಪ್ರೊವಿಷನಲ್ ಫಲಿತಾಂಶಗಳು (F4 Indian Championship – Race 1):
1.ಇಟ್ಸುಕೀ ಸಾಟೋ (ಅಹಮದಾಬಾದ್ ಏಪೆಕ್ಸ್ ರೇಸರ್ಸ್) – 27:10.989
2.ಘಾಜಿ ಮೊಟ್ಲೇಕರ್ (ಕೊಲ್ಕತಾ ರಾಯಲ್ ಟೈಗರ್ಸ್) – 27:31.350
3.ಸೈಶಿವ ಶಂಕರನ್ (ಸ್ಪೀಡ್ ಡೀಮನ್ಸ್ ದೆಹಲಿ) – 27:31.469ಪ್ರೊವಿಷನಲ್ ಫಲಿತಾಂಶಗಳು (F4 ಇಂಡಿಯನ್ ಚಾಂಪಿಯನ್‌ಶಿಪ್ – ರೇಸ್ 1):
ರೇಸ್ 1: ಅಗರವಾಲ್ 20:13.369 ಸಮಯದಲ್ಲಿ ಮೊದಲ ಸ್ಥಾನ ಪಡೆದರು. ಧ್ರುವ್ ಗೋಸ್ವಾಮಿ (ಎಂ ಸ್ಪೋರ್ಟ್) 20:17.203 ಸಮಯದಲ್ಲಿ ದ್ವಿತೀಯ ಸ್ಥಾನ ಮತ್ತು ಆದಿತ್ಯ ಪಟ್ನಾಯಕ್ (ಡಾರ್ಕ್ ಡಾನ್ ರೇಸಿಂಗ್) 20:17.538 ಸಮಯದಲ್ಲಿ ಮೂರನೇ ಸ್ಥಾನ ಪಡೆದರು.
ರೇಸ್ 2: ಅಗರವಾಲ್ ಮತ್ತೊಮ್ಮೆ ಮುನ್ನಡೆ ಕಾಯ್ದುಕೊಂಡು 18:01.251 ಸಮಯದಲ್ಲಿ ಗೆದ್ದರು. ಧ್ರುವ್ ಗೋಸ್ವಾಮಿ ದ್ವಿತೀಯ (18:05.480) ಮತ್ತು ದಿಲ್ಜಿತ್ ಟಿ ಎಸ್ ಮೂರನೇ ಸ್ಥಾನ (18:06.376) ಪಡೆದರು. ಟ್ರ್ಯಾಕ್‌ನಲ್ಲಿ ಸಂಭವಿಸಿದ ಅಪಘಾತದಿಂದ ರೇಸ್ ತಾತ್ಕಾಲಿಕವಾಗಿ ನಿಲ್ಲಿಸಲಾಯಿತು ಮತ್ತು ರೆಡ್ ಫ್ಲ್ಯಾಗ್ ನಂತರ ಏಳು ಲ್ಯಾಪ್‌ಗಳ ರೀಸ್ಟಾರ್ಟ್‌ನೊಂದಿಗೆ ಪೂರ್ಣಗೊಂಡಿತು.
ಪ್ರೊವಿಷನಲ್ ಫಲಿತಾಂಶಗಳು (Formula LGB4):
ರೇಸ್ 1:
1.ಮೆಹುಲ್ ಅಗರವಾಲ್ (ಡಾರ್ಕ್ ಡಾನ್ ರೇಸಿಂಗ್) – 20:13.369
2.ಧ್ರುವ್ ಗೋಸ್ವಾಮಿ (ಎಂ ಸ್ಪೋರ್ಟ್) – 20:17.203
3.ಆದಿತ್ಯ ಪಟ್ನಾಯಕ್ (ಡಾರ್ಕ್ ಡಾನ್ ರೇಸಿಂಗ್) – 20:17.538
ರೇಸ್ 2:
1.ಮೆಹುಲ್ ಅಗರವಾಲ್ (ಡಾರ್ಕ್ ಡಾನ್ ರೇಸಿಂಗ್) – 18:01.251
2.ಧ್ರುವ್ ಗೋಸ್ವಾಮಿ (ಎಂ ಸ್ಪೋರ್ಟ್) – 18:05.480
3.ದಿಲ್ಜಿತ್ ಟಿ ಎಸ್ (ಡಾರ್ಕ್ ಡಾನ್ ರೇಸಿಂಗ್) – 18:06.376
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post