No Result
View All Result
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ
English Articles

Duniya Vijay, Rachita Ram & Raj B. Shetty’s Landlord Premieres This Saturday on Zee Kannada

by ಕಲ್ಪ ನ್ಯೂಸ್
May 22, 2026
0

Kalpa Media House  |  Bengaluru | Zee Kannada has always captivated its audience with unique content, offering engaging fiction stories,...

Read moreDetails
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
  • Advertise With Us
  • Grievances
  • About Us
  • Contact Us
Sunday, May 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ದಕ್ಷಿಣ ಕನ್ನಡ

ಫಲಿಸದ ಪ್ರಾರ್ಥನೆ | 134 ದಿನಗಳ ಜೀವನ್ಮರಣ ಹೋರಾಟದಲ್ಲಿ ಸೋತು ಕೊನೆಯುಸಿರೆಳೆದ ಅಪೂರ್ವ ಭಟ್

ನಾಲ್ಕು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದ ಭೀಕರ ಅಪಘಾತ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 8, 2025
in ದಕ್ಷಿಣ ಕನ್ನಡ
0
ಫಲಿಸದ ಪ್ರಾರ್ಥನೆ | 134 ದಿನಗಳ ಜೀವನ್ಮರಣ ಹೋರಾಟದಲ್ಲಿ ಸೋತು ಕೊನೆಯುಸಿರೆಳೆದ ಅಪೂರ್ವ ಭಟ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  |

ಸುಮಾರು ನಾಲ್ಕು ತಿಂಗಳ ಹಿಂದೆ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ #RoadAccident ತೀವ್ರವಾಗಿ ಗಾಯಗೊಂಡು ಬರೋಬ್ಬರಿ 134 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅಪೂರ್ವ ಭಟ್ ವಿಧಿಯಾಟಕ್ಕೆ ಬಲಿಯಾಗಿದ್ದು, ಈ ಮೂಲಕ ಸಾವಿರಾರು ಮಂದಿಯ ಪ್ರಾರ್ಥನೆ ವ್ಯರ್ಥವಾಗಿದೆ.

ಸುಮಾರು 134 ದಿನಗಳಿಂದ ಮಂಗಳೂರಿನ #Mangalore ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅಪೂರ್ವ ಭಟ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆದರು.

ಹೇಗಾಗಿತ್ತು ಅಪಘಾತ?
ಸುಮಾರು ನಾಲ್ಕು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ-ಮೈಸೂರು #Mysore ರಾಷ್ಟ್ರೀಯ ಹೆದ್ದಾರಿಯ ಮುರ ಬಳಿ ಖಾಸಗಿ ಬಸ್ ಕಾರಿಗೆ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿತ್ತು.

ಅಂಡೆಪುಣಿ ಈಶ್ವರ ಭಟ್ ಮತ್ತು ಪುತ್ರಿ ಅಪೂರ್ವ ಭಟ್(30) ಅವರು ಗಂಭೀರ ಗಾಯಗೊಂಡಿದ್ದರು. ಈಶ್ವರ ಭಟ್ ಅವರ ಮೊಮ್ಮಗಳು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದರು. ಗಂಭೀರ ಗಾಯಗೊಂಡಿದ್ದ ಈಶ್ವರ ಭಟ್ ಮತ್ತು ಅವರ ಮಗಳು ಅಪೂರ್ವ ಅವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಈ ನಡುವೆ ಈಶ್ವರ ಭಟ್ ಅವರು ಚೇತರಿಸಿಕೊಂಡಿದ್ದರು. ಅಪೂರ್ವ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮಂಗಳೂರು ಮೂಲದ ಆಶಿಶ್ ಹಾಗೂ ಅಪೂರ್ವ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಈಕೆಗೆ ಓರ್ವ ಮಗಳಿದ್ದಾಳೆ. ಆದರೆ, ಒಂದು ಭೀಕರ ಅಪಘಾತ ಅವರ ಜೀವನವನ್ನೇ ಕತ್ತಲು ಮಾಡಿತು.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಪೂರ್ವ ಅವರು, 134 ದಿನಗಳ ಕಾಲದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪತ್ನಿ ಹುಷಾರಾಗಲಿ ಎಂದು ಆಶಿಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಾಯಿ ಪ್ರೀತಿಗೋಸ್ಕರ ಹಂಬಲಿಸುತ್ತಿರುವ ಮಗಳಿಗಾಗಿ ಪ್ರಾರ್ಥಿಸಿ ಎಂದು ನಿತ್ಯ ಪೋಸ್ಟ್ ಹಂಚಿಕೊಳ್ಳುತ್ತಿದ್ದರು. ಅದನ್ನು ನೋಡಿ ಅನೇಕರು ವಿಧ ವಿಧವಾಗಿ ಪ್ರಾರ್ಥಿಸಿದ್ದರು. ಸ್ವಲ್ಪವೂ ಧೃತಿಗೆಡದೆ ಆಶಿಶ್ ಅವರು ಪತ್ನಿ ಈ ಹೋರಾಟದಲ್ಲಿ ಗೆದ್ದು ಬರುತ್ತಾಳೆ ಎಂದುಕೊಂಡು ಪ್ರಯತ್ನಪಟ್ಟಿದ್ದರು. ಬೆಂಗಳೂರಿನಿಂದ ಮಂಗಳೂರಿಗೆ ಮನೆ ಶಿಫ್ಟ್ ಮಾಡಿದ್ದರು. ಆದರೆ ಯಾವ ಪ್ರಾರ್ಥನೆಯೂ ಫಲಿಸಲೇ ಇಲ್ಲ.

ಆಶಿಶ್ ಸರಡ್ಕ ಅವರೇ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದು, 134 ದಿನಗಳ ಪ್ರಯಾಣ ಇಂದು ಸಾಯಂಕಾಲ 6 ಗಂಟೆಗೆ ಮುಗಿಯಿತು. ಅಪೂರ್ವ ಈಗ ನಮ್ಮೊಂದಿಗೆ ಇಲ್ಲ! ಆಕೆ ಇನ್ನು ನೆನಪು ಮಾತ್ರ. ಪ್ರಾರ್ಥಿಸಿದ ಎಲ್ಲರಿಗೂ ನಾನು ಚಿರಋಣಿ! ಎಂದಿದ್ದಾರೆ.
ಆಶಿಶ್ ಅವರ ಪೋಸ್ಟ್’ನಲ್ಲಿ ಏನಿದೆ?
ಅಪೂರ್ವ ಸಾವು ಅಪಘಾತದಿಂದ ಆದ ಕಾರಣ ಎಲ್ಲದಕ್ಕೂ ಪೊಲೀಸರು ಬಂದೇ ಆಗಬೇಕು… ಅವರಿಗೆ ಕಾಯ್ತಾ ಇದ್ದೇವೆ.. ಫೇಸ್ಬುಕ್ ತುಂಬಾ ಅಪೂರ್ವ ಇದ್ದಾಳೆ.. ನಿನ್ನೆ ತುಂಬಾ ಜನ ಬರೆದಿರುವ ಲೇಖನಗಳಲ್ಲಿ ಅಪೂರ್ವ 4 ತಿಂಗಳಿನಿಂದ ಕೋಮಾದಲ್ಲಿ ಇದ್ದಳು ಅಂತಾ ಬರೆದಿರುವುದನ್ನು ನಾನು ಓದಿದ್ದೇನೆ..
ಆದರೆ ತೀರಾ ಆಪ್ತರಿಗೆ ಮಾತ್ರ ಗೊತ್ತಿದ್ದ, ನಮ್ಮ ಮನಸ್ಸಿಗೆ ತುಂಬಾ ಆಘಾತವನ್ನು, ಈ ನೋವನ್ನು amplify ಮಾಡಿದ ಕಾರಣಗಳನ್ನು ಈಗ ಹೇಳಬೇಕು ಅಂತಾ ಅನ್ನಿಸ್ತಾ ಇದೆ..

ಅಪೂರ್ವ ಅಪಘಾತ ಆದಾಗ ಅನುಭವಿಸಿದ ತಲೆಯ ಪೆಟ್ಟು ತೀವ್ರ ಸ್ವರೂಪದ್ದಾಗಿತ್ತು .. diffused axonal injury ಆದ ಕಾರಣ ಮೊದಲ ಕೆಲವು ದಿನಗಳು ಏನಾಗಿದೆ ಅನ್ನುವ ಅರಿವು ಇರಲಿಲ್ಲ.. ಸ್ವಲ್ಪ ಸೆಟಲ್ ಡೌನ್ ಆದ ಮೇಲೆ 10 ದಿನಗಳ ನಂತರ ಮಾಡಿದ MRI ಆಕೆಯ MIDBRAIN ಪೆಟ್ಟು ತಿಂದಿದೆ ಅನ್ನೋದನ್ನು ಹೇಳಿತ್ತು.. Age is the only positive she has, ಅಂದಿದ್ದ ವೈದ್ಯರು, ಯಾವ ಗ್ಯಾರೆಂಟಿ ಕೊಡೋಕೂ ಸಾಧ್ಯ ಇಲ್ಲ ನಮಗೆ ಅಂತಾ ಹೇಳಿದ್ರು..

ಆದರೆ ನಾವು ಅಲ್ಲಿಂದ ನಾವು ಮಾಡಿದ ಹೋರಾಟ ತುಂಬಾ ಕ್ಲಿಷ್ಟಕರವಾದದ್ದು.. 24 ದಿನಗಳ ನಂತರ ಅವಳನ್ನು ವಾರ್ಡಿಗೆ ಶಿಫ್ಟ್ ಮೂಡಿಸಿದ್ದು ಕೂಡಾ ಆಕೆಗೆ ಮ್ಯೂಸಿಕ್ ಥೆರಪಿ, ನಮ್ಮ ಮಾತು, ಸೌಂಡ್ ಥೆರಪಿ ಫಿಸಿಕಲ್ stimulation, ರೇಕಿ ಹೀಲಿಂಗ್, ಪ್ರಾಣಿಕ್ ಹೀಲಿಂಗ್ ಮಾಡಬಹುದು ಅನ್ನುವ ಕಾರಣಕ್ಕೆ.. ಸಾಧಾರಣ ಜುಲೈ ಮಧ್ಯದ ವರೆಗೆ ಅಪೂರ್ವ ಯಾವ ರೆಸ್ಪಾನ್ಸ್ ಕೂಡಾ ಮಾಡ್ತಾ ಇರಲಿಲ್ಲ.. ಆದರೆ ಮತ್ತೆ ನಿಧಾನಕ್ಕೆ ನಾವು ಹೇಳುವ ವಿಚಾರಗಳು ಅವಳಿಗೆ ಅರ್ಥ ಆಗೋಕೆ ಶುರುವಾಯಿತು.. ಕರೆದಾಗ ಕಣ್ಣು ಬಿಡೋಕೆ ಪ್ರಯತ್ನ ಮಾಡ್ತಾ ಇದ್ಲು… ಒಮ್ಮೆ thumbs up ಮಾಡು ಅಂದಾಗ ಮಾಡಿದ್ಲು… wow! ಈ ರಿಕವರಿ ಬಂದರೆ ತುಂಬಾ ಜನ ಮೇಲೆ ಬೀಳ್ತಾರೆ ಅಂದರು ವೈದ್ಯರು.. ಅದು ಆಗಸ್ಟ್ ಒಂದು..

ಅದಾಗಿ ಬರೋಬ್ಬರಿ 15 ದಿನ ಅಪೂರ್ವಗೆ urinary infection ಮತ್ತು ಅದಕ್ಕೆ ಕೊಟ್ಟ ಆಂಟಿಬಯೋಟಿಕ್ ಕಾರಣದಿಂದ ಸುಸ್ತಾಗಿ ಹೋದಳು.. ಆಗ ಹೋದ ರೆಸ್ಪಾನ್ಸಿವ್ನೆಸ್ ಮತ್ತೆ ವಾಪಸ್ ಆಗಿದ್ದು ಸೆಪ್ಟೆಂಬರ್ ತಿಂಗಳಲ್ಲಿ.. ಫಿಸಿಯೋಥೆರಪಿ ಆಗುವಾಗ ಹೇಳಿದ್ದು ಎಲ್ಲಾ ಅರ್ಥ ಆಗೋಕೆ ಶುರುವಾಯಿತು.. ಬಲಗೈಗೆ ಸ್ವಲ್ಪ ಬಲ ಕಮ್ಮಿಯಿತ್ತು.. ಆದರೆ ಎಡಕೈಗೆ ಬಾಲ್ ಕೊಟ್ಟರೆ ಹಿಡಿಯೋದು ಬಿಡೋದು ಮಾಡಿದ್ಲು.. ಎರಡೆರಡು ಗಂಟೆ ಅವಳ ಮುಂದೆ ಕೂತು ಮಾತಾಡಿಸುತ್ತಾ ಇದ್ದೇ .. ನಾನಿಲ್ಲದೆ ಇದ್ದಾಗ ಅಪ್ಪ ಮತ್ತೆ ಚಿಕ್ಕಮ್ಮನ ಮಗ Gaurav Surya ಈ ಕೆಲಸ ಮಾಡ್ತಾ ಇದ್ದಾ.. ಇನ್ನೂ ಹೇಗೆ ಇಂಪ್ರೂವ್ ಮಾಡೋದು ಅಂತಾ ಇರೋ ಬರೋ ವೀಡಿಯೋಗಳನ್ನು ರೀಸರ್ಚ್ ಪೇಪರ್ ಗಳನ್ನು ತಿರುವಿಹಾಕಿ ಆಗಿತ್ತು.. ಸೆಪ್ಟೆಂಬರ್ ಮಧ್ಯಭಾಗದಲ್ಲಿ ಅಪೂರ್ವ ಬೆರಳುಗಳ ಮೂಲಕ ಕೌಂಟ್ ಮಾಡೋಕೆ , ಕಣ್ಣು ಮೂವ್ ಮಾಡಿ ಆಚೆ ಈಚೆ ನೋಡೋಕೆ ಶುರು ಮಾಡಿದ್ಲು… ಸೆಪ್ಟೆಂಬರ್ ಕೊನೆಯ 10 ದಿನದಲ್ಲಿ yes/ no ಅನ್ನೋದನ್ನು ತಲೆ ಅಲ್ಲಾಡಿಸುವ ಮೂಲಕ ಮಾಡಿದ್ಲು.. ಮಗಳ ನೆನಪು, ನನ್ನ ನೆನಪು, ಮನೆಯವರ ನೆನಪು ಎಲ್ಲಾ ಅವಳಿಗೆ ಇತ್ತು.. she should fully recover with this ಅಂತಾ ವೈದ್ಯರು ಹೇಳಿದ್ರು.. ಅವಳ ಬಳಿ, ಅಪೂರ್ವ ನೀನು ನಡೆದುಕೊಂಡು ಇಲ್ಲಿಂದ ಹೋಗಬೇಕು ಅಂದಿದ್ರು.. ಮಗಳನ್ನು ಒಂದೆರಡು ಸರ್ತಿ ಕರೆದುಕೊಂಡು ಬಂದು ಮಾತಾಡಿಸಿದೆ.. ಅವಳ ಪ್ರೆಸೆನ್ಸ್ ಫೀಲ್ ಮಾಡಿ ಕಣ್ಣೀರು ಬಂದಿತ್ತು ಅವಳಿಗೆ ಒಮ್ಮೆ.. ಫಿಸಿಯೋಥೆರಪಿ ಮಾಡುವವರು ಮಾತಾಡಿಸಿ, ಅವಳನ್ನು ಪ್ರಚೋದಿಸಿ, ಕೂರಿಸುವುದು ಮಾಡ್ತಾ ಇದ್ರು..
ಅಪೂರ್ವಗೆ ಪಿಸಿಯೋ ಮಾಡ್ತಾ ಇದ್ದ ಮೇಡಂ ಅವಳ ಹತ್ರ ತುಂಬಾ ಆತ್ಮೀಯವಾಗಿ ಮಾತಾಡಿ, ನೀನು ಇನ್ನು ಬೇಗ ಹುಷಾರಾಗಿ ಇಲ್ಲಿಂದ ಹೋಗಬೇಕು ಅಂದಿದ್ರು.. ಕುತ್ತಿಗೆಯಲ್ಲಿ tracheostomy ಇತ್ತು.. ಫುಡ್ ಪೈಪ್ ಹೊಟ್ಟೆಗೆ ಹಾಕಿದ್ರು, ಕ್ಯಾತಿಟರ್ ಇತ್ತು.. ಹಾಗಾಗಿ ಮನೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಇರಲಿಲ್ಲ ನಮಗೆ.. ಇಷ್ಟು ವೇಗದಲ್ಲಿ ಇಂಪ್ರೂವ್ ಆಗ್ತಾ ಇದ್ದ ಅಪೂರ್ವ ಇದ್ದಕಿದ್ದ ಹಾಗೆ ಮೊನ್ನೆ ಸೋಮವಾರ ಒಮ್ಮೆ ಉಸಿರಾಟದ ಸಮಸ್ಯೆ ಎದುರಿಸಿದಳು.. ಮತ್ತೆ ಅದೂ ಸರಿಯಾಯಿತು.. ಪುನಃ ಮಂಗಳವಾರ ಅದು ರಿಪೀಟ್ ಆಯಿತು.. ಬುಧವಾರಕ್ಕೆ ಬಿಪಿ ಕಮ್ಮಿಯಾಗೋದು ಶುರುವಾಯಿತು… urinary infection ಮತ್ತೆ ಅಟ್ಯಾಕ್ ಮಾಡಿ ಅದೂ ಆಂಟಿಬಯೋಟಿಕ್ ರೆಸಿಸ್ಟೆಂಟ್ ಆಗಿದ್ದ ಕಾರಣ ಆಕೆಯ ಪರಿಸ್ಥಿತಿ ಗಂಭೀರ ಆಗಿದ್ದು.. ಅಲ್ಲಿಂದ icu, 3-4 ಗಂಟೆಯಲ್ಲಿ ವೆಂಟಿಲೇಟರ್ … ವಿಚಿತ್ರ ನೋಡಿ … ಇಂತಹ infection ಆದಾಗ ಏಟು ತಿನ್ನೋದು ಕಿಡ್ನಿ, ಲಿವರ್ ಇಲ್ಲದೆ ಇದ್ರೆ lungs. ಅಪೂರ್ವ ಕೇಸ್ ಅಲ್ಲಿ ಅದೆಲ್ಲಾ ಸರಿ ಇತ್ತು… ಗುರುವಾರ ಬೆಳಗ್ಗೆ ಒಮ್ಮೆ ಬಿಪಿ ಕೆಳಗೆ ಬಿತ್ತು.. ನೋಡಿದ್ರೆ ಅದು miocardidial infraction ತರಾ ಇದೆ ಅಂದ್ರು ವೈದ್ಯರು.. It is unheard of in a young patient like her with no co morbidities ಅಂದ್ರು ನಮ್ಮ ನ್ಯೂರೋ ಸರ್ಜನ್.. ಆದರೆ ಮತ್ತೆ ತಿಳಿದದ್ದು ಅದು sepsis induced miocarditis ಅಂತಾ..

ಅಲ್ಲಿಂದ ಏನೇನೋ ಪ್ರಯತ್ನಗಳನ್ನು ನಾವೂ ಮಾಡಿದ್ವಿ.. ಅವರು ಎಲ್ಲರೂ ಮಾಡಿದ್ರು.. ಸಾರ್ ದುಡ್ಡು ಎಷ್ಟು ಖರ್ಚಾಗುತ್ತೆ ಅಂತಾ ಯೋಚನೆ ಮಾಡಬೇಡಿ, ಏನು ಮಾಡಬೇಕು ಅನ್ನುವ ಆಲೋಚನೆ ಮಾತ್ರ ನೀವು ಮಾಡಿ, ನೀವು ಏನು ಹೇಳಿದ್ರೂ ನಾವು ಅದನ್ನು ಮಾಡ್ತೇವೆ ಅಂತಾ ನಾವೂ ಹೇಳಿದ್ವಿ.. ಇರುವ ಎಲ್ಲ ಮದ್ದು try ಮಾಡಿದ್ರು, ಬೇರೆ ಬೇರೆ ವೈದ್ಯರ opinion ತೆಗೊಂಡು ಆಯಿತು.. ಪ್ರಾಜ್ಞರ, ಜ್ಯೋತಿಷಿಗಳ ಬಳಿ ಕೇಳಿಸಿಯಾಯಿತು. ಗುರುಗಳು, ಹಿರಿಯರು ಅಂತಾ ಎಲ್ಲರ ಬಳಿ ನಾನು ಬೇಡಿಕೊಂಡೆ.. 134 ದಿನದಲ್ಲಿ ನಾನು ಮಾಡದೇ ಇದ್ದ ಪೂಜೆಗಳು, ಪ್ರಾರ್ಥನೆಗಳು ಇಲ್ಲ.. ಆದರೂ ಅಪೂರ್ವ ಕೊನೆಗೆ ಯಾಕೋ ಮನಸ್ಸು ಬದಲಾಯಿಸಿದಳು.. ಪ್ರಾಯಶಃ ಆಕೆಗೆ ಈ ದೇಹದಲ್ಲಿ ಇದ್ದುಕೊಂಡು ತನ್ನ ಕಾರ್ಯಗಳನ್ನು ಮಾಡುವುದು ಕಷ್ಟ, ಡಿಪೆಂಡೆಂಟ್ ಆಗ್ತೇನೆ ಅಂತಾ ಅನ್ನಿಸಿತೋ ಏನೋ… ನಿನ್ನೆ ಸಾಯಂಕಾಲ 5 ಗಂಟೆಯವರೆಗೆ ಆಕೆಯ ಮನಸ್ಸು ಬದಲಾಯಿಸುವ ಪ್ರಯತ್ನ ತುಂಬಾ ಮಾಡಿದೆ…. But ನಿನ್ನೆ she didn’t want to fight.. ಇದಕ್ಕಿಂತ ಕಷ್ಟದ ಕ್ಲಿಷ್ಟಕರವಾದ ಪರಿಸ್ಥಿತಿಯಿಂದ ಹೊರಬಂದಿದ್ದ ಅಪೂರ್ವ ನಿನ್ನೆ ಸಾಕಿನ್ನು ಇದು ಅಂತಾ ನಿರ್ಧಾರ ಮಾಡಿ ಹೋದದ್ದು.. She was not someone who didn’t fight. She fought till the very end.. ನಮಗೆ ಯಾರಿಗೂ ಭಾರ ಆಗೋದು ಬೇಡ ಅಂತ ಹೋಗಿದ್ದು ಅವಳು… ಅದೆಷ್ಟೋ ಪ್ರೀತಿ/ ನೋವು ಮನಸ್ಸಲ್ಲಿ ಇಟ್ಟುಕೊಂಡು ಕೂತಿದ್ಲು ಗೊತ್ತಿಲ್ಲ!

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news  

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

   

Tags: Andepunicoastal newsDakshina KannadaKannada News WebsiteKaravali newsLatest News KannadaMangaloreMuraPutturRoad Accidentಅಂಡೆಪುಣಿಅಪೂರ್ವ ಭಟ್ದಕ್ಷಿಣ ಕನ್ನಡಮಂಗಳೂರು
Share197Tweet123Send
Previous Post

ಶಿವಮೊಗ್ಗ ಏರ್’ಪೋರ್ಟ್’ನಲ್ಲಿ ಬರಲಿದೆ ಮಾಲ್, ಹೊಟೇಲ್, ಕಮರ್ಷಿಯಲ್ ಕಾಂಪ್ಲೆಕ್ಸ್

Next Post

ಎಲ್’ಪಿಜಿ ಸಿಲಿಂಡರ್ ತುಂಬಿದ್ದ ಟ್ರಕ್ ಸ್ಪೋಟ | ಏಳು ವಾಹನಗಳು ಭಸ್ಮ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ: 14 ವಾಹನಗಳು ಬೆಂಕಿಗಾಹುತಿ

ಎಲ್'ಪಿಜಿ ಸಿಲಿಂಡರ್ ತುಂಬಿದ್ದ ಟ್ರಕ್ ಸ್ಪೋಟ | ಏಳು ವಾಹನಗಳು ಭಸ್ಮ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
A Colorful Memorable Brahmakalshotsava at Padubidri

A Colorful Memorable Brahmakalshotsava at Padubidri

May 23, 2026
ಪ್ರತಿಬಿಂಬಿಸುವ ಶಿಕ್ಷಕ ಪ್ರತಿದಿನ ಬೆಳೆಯುತ್ತಾನೆ: ಡಾ. ಶಿವಕುಮಾರ್

ಪ್ರತಿಬಿಂಬಿಸುವ ಶಿಕ್ಷಕ ಪ್ರತಿದಿನ ಬೆಳೆಯುತ್ತಾನೆ: ಡಾ. ಶಿವಕುಮಾರ್

May 23, 2026
ಶಿಕ್ಷಣ ಸಂಸ್ಥೆಯ ಮೂಲಕ ಉದ್ಯೋಗ ಸೃಷ್ಟಿ ಮಾಡಿದ ಶಿಕ್ಷಣ ರತ್ನ ಕೆ ಸಿ ರಂಗಯ್ಯ: ಸುರೇಶ್ ಋಗ್ವೇದಿ

ಶಿಕ್ಷಣ ಸಂಸ್ಥೆಯ ಮೂಲಕ ಉದ್ಯೋಗ ಸೃಷ್ಟಿ ಮಾಡಿದ ಶಿಕ್ಷಣ ರತ್ನ ಕೆ ಸಿ ರಂಗಯ್ಯ: ಸುರೇಶ್ ಋಗ್ವೇದಿ

May 23, 2026
ಭರಮಸಾಗರ ಭಾಗದಲ್ಲಿ ಕೃಷಿಯೊಂದಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿ

ಭರಮಸಾಗರ ಭಾಗದಲ್ಲಿ ಕೃಷಿಯೊಂದಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿ

May 23, 2026
ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಹೆಚ್ಚಳ | 3ನೇ ಬಾರಿ ತೈಲ ದರ ಏರಿಕೆ, ಶಿವಮೊಗ್ಗದಲ್ಲಿ ಎಷ್ಟಿದೆ ರೇಟ್?

ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಹೆಚ್ಚಳ | 3ನೇ ಬಾರಿ ತೈಲ ದರ ಏರಿಕೆ, ಶಿವಮೊಗ್ಗದಲ್ಲಿ ಎಷ್ಟಿದೆ ರೇಟ್?

May 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL