ಕಲ್ಪ ಮೀಡಿಯಾ ಹೌಸ್ | ಮೈಸೂರು |
ದೀಪಾವಳಿ ಹಬ್ಬದ #Deepavali Festival ಪ್ರಯುಕ್ತ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ರೈಲ್ವೆ ಮಂಡಳಿಯು ಮೈಸೂರು ಮತ್ತು ಜೈಪುರ ನಡುವೆ ಪ್ರತಿ ದಿಕ್ಕಿನಲ್ಲಿ ತಲಾ ಎರಡು ಟ್ರಿಪ್’ಗಳಿಗೆ ವಿಶೇಷ ಎಕ್ಸ್’ಪ್ರೆಸ್ ರೈಲುಗಳ #Special Express Train ಕಾರ್ಯಾಚರಣೆಗೆ ಅನುಮೋದನೆ ನೀಡಿದೆ.
06231 ಸಂಖ್ಯೆಯ ಮೈಸೂರು-ಜೈಪುರ ಎಕ್ಸ್’ಪ್ರೆಸ್ ವಿಶೇಷ ರೈಲು ಅಕ್ಟೋಬರ್ 18 ಮತ್ತು 25ರಂದು ಮೈಸೂರಿನಿಂದ ರಾತ್ರಿ 11:55 ಗಂಟೆಗೆ ಹೊರಡಲಿದೆ. ಸೋಮವಾರದಂದು ಸಂಜೆ 06:40 ಗಂಟೆಗೆ ಜೈಪುರವನ್ನು ತಲುಪಲಿದೆ.
ಮತ್ತೆ ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06232 ಜೈಪುರ-ಮೈಸೂರು ಎಕ್ಸ್’ಪ್ರೆಸ್ ವಿಶೇಷ ರೈಲು ಅಕ್ಟೋಬರ್ 21 ಮತ್ತು 28ರಂದು ಜೈಪುರದಿಂದ ಮುಂಜಾನೆ 04:00 ಗಂಟೆಗೆ ಹೊರಟು, ಗುರುವಾರ ಮುಂಜಾನೆ 03:30 ಗಂಟೆಗೆ ಮೈಸೂರಿಗೆ ಆಗಮಿಸಲಿದೆ.

ಇನ್ನು, ಈ ವಿಶೇಷ ರೈಲು ಮಾರ್ಗಮಧ್ಯೆ ಮಂಡ್ಯ, ಕೆಎಸ್’ಆರ್ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ದಾವಣಗೆರೆ, ಎಸ್’ಎಸ್’ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರೋಡ್, ಪಾಲ್ಘರ್, ವಾಪಿ, ವಲ್ಸಾದ, ಸೂರತ್, ವಡೋದರಾ, ಅಹಮದಾಬಾದ್, ಸಾಬರಮತಿ ಬಿಜಿ, ಮಹೆಸನಾ, ಪಾಲನ್ಪುರ, ಅಬು ರೋಡ್, ಫಲ್ನಾ, ರಾಣಿ, ಮಾರ್ವಾರ್, ಸೋಜತ್ ರೋಡ್, ಬೇವರ್, ಅಜ್ಮೀರ್, ಮತ್ತು ಕಿಶನ್’ಗಢ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
ಆದಾಗ್ಯೂ, ಜೈಪುರದ ಕಡೆಗೆ ಹೋಗುವ ರೈಲು ಸಂಖ್ಯೆ 06231 ತನ್ನ ಪ್ರಯಾಣದಲ್ಲಿ ಸಾಬರಮತಿ ಬಿಜಿ ನಿಲುಗಡೆಯನ್ನು ಬಿಟ್ಟು ಬಿಡುತ್ತದೆ. ಮೈಸೂರಿನ ಕಡೆಗೆ ಹಿಂದಿರುಗುವ ಪ್ರಯಾಣದಲ್ಲಿ ರೈಲು ಸಂಖ್ಯೆ 06232 ಅಹಮದಾಬಾದ್ ನಿಲುಗಡೆ ಇರುವುದಿಲ್ಲ.
ಈ ವಿಶೇಷ ರೈಲು ಒಟ್ಟು 18 ಬೋಗಿಗಳನ್ನು ಒಳಗೊಂಡಿರುತ್ತದೆ, ಅವುಗಳಲ್ಲಿ 2 ಎಸಿ ಟು-ಟೈರ್, 12 ಎಸಿ ತ್ರಿ-ಟೈರ್, 2 ಸ್ಲೀಪರ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್’ಗಳು ಇರಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post