Thursday, November 27, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಯಶಸ್ಸಿನ ಹಾದಿಯಲ್ಲಿ ಅದ್ಥುತ ರಂಗ ಪ್ರತಿಭೆ ಶಿಲ್ಪಾ

October 31, 2025
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಉಡುಪಿ ಮಣ್ಣಿನ ಸುವಾಸನೆ, ಅಮ್ಮನ ಕನಸು, ಕಾಲೇಜಿನ ದಿನಗಳ ಉತ್ಸಾಹ – ಇವುಗಳ ಸಂಗಮವೇ ಶಿಲ್ಪಾ ಶೆಟ್ಟಿ ಅವರ ಕಲಾಜೀವನದ ಬುನಾದಿ.

ಬಾಲ್ಯದಿಂದಲೇ ಕಲೆ ಅವರ ಹೃದಯದ ನಂಟಾಗಿದ್ದು, ಕಾಲೇಜು ಸಂದರ್ಭದಲ್ಲಿ NSS ತಂಡದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಹವ್ಯಾಸಿ ರಂಗತಂಡಗಳ ಮೂಲಕ ಅವರು ಮೊದಲ ಬಾರಿಗೆ ರಂಗಮಂಟಪವನ್ನು ಮುಟ್ಟಿದರು. ಆ ದಿನದ ಆ ಹೆಜ್ಜೆ, ಮುಂದಿನ ದಾರಿ ಹೇಗೆ ಇರಬೇಕು ಎಂಬುದನ್ನು ತೋರಿಸಿಕೊಟ್ಟಿತು. ನಂತರ ಮೈಸೂರಿನ ಪ್ರಸಿದ್ಧ ರಂಗಾಯಣದಲ್ಲಿ ನಟನಾ ತರಬೇತಿ ಪಡೆದು ತಮ್ಮ ಕಲೆಗೊಂದು ಹೊಸ ಶಕ್ತಿ ತುಂಬಿಕೊಂಡರು.
ಈ ಪಯಣದಲ್ಲಿ ತಾಯಿಯ ಪ್ರೋತ್ಸಾಹವೇ ದೊಡ್ಡ ಶಕ್ತಿ. “ನಿನ್ನ ಕನಸು ನಿನ್ನ ಹಾದಿ” ಎಂದು ಬೆನ್ನೆಲುಬಾಗಿ ನಿಂತ ತಾಯಿ, ಶಿಲ್ಪಾಳಿಗೆ ಧೈರ್ಯದ ದಾರಿಯನ್ನೂ ನೀಡಿದರು.

ಇಂದು ಶಿಲ್ಪಾ ಶೆಟ್ಟಿ ಅವರು 30ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ, ನೂರಕ್ಕೂ ಅಧಿಕ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಹೃದಯದಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ. ಪಾತ್ರವು ಎಷ್ಟು ದೊಡ್ಡದು, ಚಿಕ್ಕದು ಎಂಬುದಲ್ಲ – ಅದಕ್ಕೆ ಅವರು ತುಂಬುವ ಜೀವವೇ ಮುಖ್ಯ ಎಂಬ ನಂಬಿಕೆ ಅವರ ನಟನೆಯ ಕೌಶಲ್ಯವನ್ನು ವಿಶಿಷ್ಟವಾಗಿಸಿದೆ.

ರಂಗಭೂಮಿಯ ಹೊರತಾಗಿಯೂ, ಚಲನಚಿತ್ರ ಮತ್ತು ವೆಬ್‌ಸೀರೀಸ್ ಜಗತ್ತಿನಲ್ಲಿಯೂ ಅವರು ತಮ್ಮ ಪ್ರತಿಭೆಯನ್ನು ಪರಿಚಯಿಸಿದ್ದಾರೆ. ನವ್ಯ ರಾವ್ ನಿರ್ದೇಶನದ ಪುಟ್ಟ ಭಯ, ಪ್ಯಾರಮ್ಹವ್ ಸ್ಪಾಟ್‌ಲೈಟ್ ನಿರ್ಮಾಣದ ಸ್ಟ್ರಾಬೆರಿ, ತುಳು ಕಿರುಚಿತ್ರ 2 ಪಜ್ಜೆ, ನಾಗೇಂದ್ರ ಗಾಣಿಗ ನಿರ್ದೇಶನದ ಅಭಿರಾಮಚಂದ್ರ, ಮನ್ಸೋರೆ ಅವರ ದೂರತೀರಯಾನ ಮೊದಲಾದ ಚಿತ್ರಗಳಲ್ಲಿ ಅವರು ತಮ್ಮ ಕಲಾಶಕ್ತಿಯನ್ನು ತೋರಿಸಿದ್ದಾರೆ. ಶಿಮಾರೋ ಚಾನೆಲ್‌ನ ಹಿಂದಿ ವೆಬ್‌ಸೀರೀಸ್‌ನಲ್ಲಿ ನಟನೆಯ ಮೂಲಕ ದೇಶದಾದ್ಯಂತ ಪ್ರೇಕ್ಷಕರಿಗೆ ತಲುಪಿದ್ದಾರೆ. ವಿಶೇಷವಾಗಿ ರೂಪಾ ಅಯ್ಯರ್ ನಿರ್ದೇಶನದ ಬಾಲಿವುಡ್ ಚಿತ್ರ “ನೀರಾ ಆರ್ಯ” ಅವರ ಕಲಾಜೀವನಕ್ಕೆ ಮತ್ತೊಂದು ಬಣ್ಣ ತುಂಬಿದ ಚಿತ್ರವಾಗಿದೆ.
ಅವರು ಕೇವಲ ನಟಿ ಮಾತ್ರ ಅಲ್ಲ, ಬಹುಮುಖ ಕಲಾವಿದೆ. ಸಹಾಯಕ ನಿರ್ದೇಶಕಿಯಾಗಿ ಮನ್ಸೋರೆ ಅವರ 19 20 21 ಹಾಗೂ ದೂರತೀರಯಾನ ಚಿತ್ರಗಳಲ್ಲಿ, ಶಿವರುದ್ರಯ್ಯ ಅವರ ಸಿಗ್ನಲ್ ಮ್ಯಾನ್ ಚಿತ್ರದಲ್ಲಿ ಹಾಗೂ ಬಿ.ಎಂ. ಗಿರಿರಾಜ್ ಅವರ ಹಿಂದಿ ವೆಬ್‌ಸೀರೀಸ್‌ನಲ್ಲಿ ತಮ್ಮ ಹಾದಿ ವಿಸ್ತರಿಸಿದ್ದಾರೆ. ನಿರ್ದೇಶಕಿಯಾಗಿಯೂ ಭರತವಾಕ್ಯ, ಸೋರುತಿದು ಸಂಬಂಧ, ವಿಗಡ ವಿಕ್ರಮರಾಯ ಮೊದಲಾದ ನಾಟಕಗಳ ಮೂಲಕ ತಮ್ಮ ದೃಷ್ಟಿಕೋನವನ್ನು ವೇದಿಕೆಯ ಮೇಲೆ ಮೂಡಿಸಿದ್ದಾರೆ. ಬರಹಗಾರ್ತಿಯಾಗಿ 2 ಪಜ್ಜೆ ಕಿರುಚಿತ್ರ ಮತ್ತು ಅವನಿಯ ಚೌರ್ಯೋನ್ಮಾದ ನಾಟಕವನ್ನು ಬರೆದಿದ್ದಾರೆ.
ರಂಗಭೂಮಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಿಲ್ಪಾ ಶೆಟ್ಟಿ, ಇತ್ತೀಚೆಗೆ ನದೃಸಾ ಎಂಬ ಕನ್ನಡ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಮಕ್ಕಳಲ್ಲಿ ಕಲೆ ಬೆಳೆಸುವುದು ಅವರ ಹೃದಯದ ಹಂಬಲ. ಬೆಂಗಳೂರಿನ ಆರ್ಕಿಡ್ಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ರಂಗಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಅನೇಕ ಮಕ್ಕಳ ಮನಸ್ಸಿನಲ್ಲಿ ಕಲೆಗೊಂದು ಹೊಸ ದಾರಿ ತೆರೆದಿದ್ದಾರೆ.
ಶಿಲ್ಪಾ ಶೆಟ್ಟಿ ಅವರ ಕಥೆ ಕೇವಲ ಸಾಧನೆಯ ಕಥೆಯಲ್ಲ. ಅದು ಕನಸಿಗೆ ಬೆಂಬಲ ನೀಡಿದ ತಾಯಿಯ ಕಥೆ, ಧೈರ್ಯದಿಂದ ಮುಂದುವರಿದ ಹೆಜ್ಜೆಯ ಕಥೆ, ಮತ್ತು ನಿರಂತರ ಶ್ರಮದ ಕಥೆ. ಇಂದು ಅವರು ಯುವ ಕಲಾವಿದರಿಗೆ “ಕಲೆ ಬದುಕಿನ ಉಸಿರು” ಎಂಬ ಸಂದೇಶವನ್ನು ನೀಡುತ್ತಾ, ತಮ್ಮದೇ ಆದ ಪ್ರೇರಣೆಯ ದೀಪವಾಗಿದ್ದಾರೆ.

ಮನೆಯಲ್ಲಿ ಆರ್ಥಿಕ ಸಂಕಷ್ಟಗಳಿದ್ದರೂ, ತಮ್ಮ ಕಲಾ ಜೀವನಕ್ಕೆ ಯಾವುದೇ ಅಡಚಣೆ ಬಾರದಂತೆ ಶಿಲ್ಪಾ ಶೆಟ್ಟಿ ಸ್ವಾವಲಂಬಿಯಾಗಿ ಬೆಂಗಳೂರಿನಲ್ಲಿ ತಮ್ಮ ಕಲಾ ಪಯಣವನ್ನು ಮುಂದುವರಿಸಿಕೊಂಡಿದ್ದಾರೆ. ದುಡಿಮೆ ಮತ್ತು ದೃಢಸಂಕಲ್ಪದ ಮೂಲಕ ಸ್ವಂತ ಮನೆಯ ಕನಸನ್ನೂ ಅವರು ನನಸಾಗಿಸಿಕೊಂಡಿದ್ದಾರೆ. ನಮ್ಮೂರಿನ ಹೆಮ್ಮೆಯ ಪ್ರತಿಭೆಯಾದ ಈ ಕಲಾಶಿಲ್ಪಾಳಿಗೆ ನಮ್ಮೆಲ್ಲರ ಪ್ರೋತ್ಸಾಹ ಅವಶ್ಯಕ. ಅವರ ಮುಂದಿನ ಕಲಾ ಪಯಣ ಇನ್ನಷ್ಟು ಯಶಸ್ಸುಗಳನ್ನು ತಂದುಕೊಡಲೆಂದು ಕಲ್ಪ ಡಿಜಿಟಲ್ ಮೀಡಿಯಾ ಕಡೆಯಿಂದ ಹಾರೈಸುತ್ತೇವೆ.

ಲೇಖನ. ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

  

Tags: Kannada NewsKannada News LiveKannada News OnlineKannada NewsWebsiteKannada WebsiteLatest News KannadaNews in KannadaNews KannadaSpecial Articleವಿಶೇಷ ಲೇಖನ
Previous Post

MEIL Energy Acquires 250 MW Lignite-Based Power Plant in Tamil Nadu

Next Post

ಕಲ್ಮನೆ ಗ್ರಾಮದಲ್ಲಿ ಕೃಷಿ ವಿಜ್ಞಾನಿಗಳ ತೋಟ ಪರಿಶೀಲನೆ | ರೈತರಿಗೆ ತಾಂತ್ರಿಕ ಮಾರ್ಗದರ್ಶನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕಲ್ಮನೆ ಗ್ರಾಮದಲ್ಲಿ ಕೃಷಿ ವಿಜ್ಞಾನಿಗಳ ತೋಟ ಪರಿಶೀಲನೆ | ರೈತರಿಗೆ ತಾಂತ್ರಿಕ ಮಾರ್ಗದರ್ಶನ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಉಡುಪಿ ಭೇಟಿಗೂ ಮುನ್ನಾ ದಿನ ಪ್ರಧಾನಿ ಮೋದಿ ಕನ್ನಡದಲ್ಲಿ ಎಕ್ಸ್’ನಲ್ಲಿ ಹೇಳಿದ್ದೇನು?

November 27, 2025

ಮೈಸೂರು-ಅಜ್ಮೀರ್, ಸಂತ್ರಾಗಾಚಿ-ಯಲಹಂಕ ಸ್ಪೆಷಲ್ ರೈಲು ಸೇವೆ ವಿಸ್ತರಣೆ | ಎಲ್ಲಿಯವರೆಗೂ?

November 27, 2025

ಇದು ವಿಶ್ವದಲ್ಲೇ ಪ್ರಥಮ | ನಾರಾಯಣ ಹೆಲ್ತ್’ನಿಂದ ಅತ್ಯಂತ ಕ್ಲಿಷ್ಟಕರ ಸರ್ಜರಿ ಯಶಸ್ವಿ

November 27, 2025
File Image

ಉಡುಪಿ | ಪ್ರಧಾನಿಯವರ ಕಾರ್ಯಕ್ರಮಕ್ಕೆ ಹೋಗ್ತೀರಾ? ಹಾಗಾದ್ರೆ ಜಿಲ್ಲಾಡಳಿತದ ಎಚ್ಚರಿಕೆ ಪಾಲಿಸಿ

November 27, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಉಡುಪಿ ಭೇಟಿಗೂ ಮುನ್ನಾ ದಿನ ಪ್ರಧಾನಿ ಮೋದಿ ಕನ್ನಡದಲ್ಲಿ ಎಕ್ಸ್’ನಲ್ಲಿ ಹೇಳಿದ್ದೇನು?

November 27, 2025

ಮೈಸೂರು-ಅಜ್ಮೀರ್, ಸಂತ್ರಾಗಾಚಿ-ಯಲಹಂಕ ಸ್ಪೆಷಲ್ ರೈಲು ಸೇವೆ ವಿಸ್ತರಣೆ | ಎಲ್ಲಿಯವರೆಗೂ?

November 27, 2025

ಇದು ವಿಶ್ವದಲ್ಲೇ ಪ್ರಥಮ | ನಾರಾಯಣ ಹೆಲ್ತ್’ನಿಂದ ಅತ್ಯಂತ ಕ್ಲಿಷ್ಟಕರ ಸರ್ಜರಿ ಯಶಸ್ವಿ

November 27, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!