ಕಲ್ಪ ಮೀಡಿಯಾ ಹೌಸ್ | ಮೈಸೂರು |
ಬಿಡಿಎದಿಂದ ಮೇಜರ್ ಆರ್ಟಿರಿಯಲ್ ರಸ್ತೆಯ ತ್ರಿಪಥ ಯೋಜನೆ(3-ಲೇನಿಂಗ್) ಕಾಮಗಾರಿಗೆ ಸಂಬಂಧಿಸಿದಂತೆ ಹೆಜ್ಜಾಲ ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್’ಗೆ ಅನುಮತಿ ನೀಡಿರುವುದರಿಂದ ಈ ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, #Mysore ಮೈಸೂರು-ಶಿವಮೊಗ್ಗ-ತಾಳಗುಪ್ಪ ಎಕ್ಸ್’ಪ್ರೆಸ್ ರೈಲು ಭಾಗಶಃ ರದ್ದಾಗಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SWR ಮಾಹಿತಿ ನೀಡಿದ್ದು, ಇದರಂತೆ ಡಿಸೆಂಬರ್ ಹಾಗೂ ಫೆಬ್ರವರಿ ತಿಂಗಳಿನಲ್ಲಿ ತಲಾ ಒಂದು ದಿನದಂತೆ ಮೈಸೂರು-ತಾಳಗುಪ್ಪ ನಡುವಿನ ರಾತ್ರಿ ಎಕ್ಸ್’ಪ್ರೆಸ್ ರೈಲು ಸಂಚಾರ ಮೈಸೂರು ಹಾಗೂ ಬೆಂಗಳೂರಿನ ನಡುವೆ ರದ್ದಾಗಲಿದೆ.

ಈ ರೈಲು ಮೈಸೂರು ನಿಲ್ದಾಣದ ಬದಲಾಗಿ ಕೆಎಸ್’ಆರ್ ಬೆಂಗಳೂರು ನಿಲ್ದಾಣದಿಂದ ಅದರ ನಿಗದಿತ ಸಮಯಕ್ಕೆ ಹೊರಡಲಿದೆ ಎಂದು ಇಲಾಖೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post