ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಳಿಂಗ ಸರ್ಪ #KingCobra ವಿಶ್ವದಲ್ಲಿ ಅಪರೂಪದ ಹಾವಿನ ಪ್ರಭೇದವಾಗಿದ್ದು ಪರಿಸರ ಸ್ನೇಹಿ ಉದ್ದೇಶದಲ್ಲಿ ಸಂಶೋಧನೆ ಅವಶ್ಯಕವಾಗಿದೆ ಎಂದು ಕಾಳಿಂಗ ಸೆಂಟರ್ ಫಾರ್ ಫಾರೆಸ್ಟ್ ಎಕಾಲಜಿ, ಕಾಳಿಂಗ ಫೌಂಡೇಷನ್ ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥ ಗೌರಿಶಂಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಳಿಂಗಸರ್ಪ ಕುರಿತು ನಿಯಮಮೀರಿ ಯಾವುದೇ ರೀತಿಯಲ್ಲೂ ಸಂಶೋಧನೆ ಮಾಡಿಲ್ಲ. ಆದರೂ ಸಹ ನಮ್ಮ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಳಿಂಗ ಸೆಂಟರ್ ಫಾರ್ ಫಾರೆಸ್ಟ್ ಸಂಸ್ಥೆ 13 ವರ್ಷಗಳ ಹಿಂದೆ ಆರಂಭಗೊಂಡಿದೆ. ಕಾಳಿಂಗ ಸರ್ಪ ಸಂರಕ್ಷಣೆ ಕುರಿತು ವಿಶೇಷ ಮಾಹಿತಿ, ಅರಿವು ಮೂಡಿಸುವ ಪ್ರಯತ್ನ ಮಾಡಿದೆ. ಸಂಸ್ಥೆ ವಾಣಿಜ್ಯ ಉದ್ದೇಶದಲ್ಲಿ ಯಾವುದೇ ವಹಿವಾಟು ನಡೆಸಿಲ್ಲ ಎಂದರು.

ಕಾಳಿಂಗ ಸರ್ಪದ #KingCobra ಸಂಶೋಧನೆಯ ಮುನ್ನ ಕೇವಲ ಒಂದು ಬಗೆಯ ಸರ್ಪದ ಬಗ್ಗೆ ಮಾಹಿತಿ ಇತ್ತು. ನಮ್ಮ ಸಂಶೋಧನೆಯ ಮೂಲಕ ನಾಲ್ಕು ಪ್ರಬೇದಗಳನ್ನು ಗುರುತಿಸಿದ್ದೇವೆ. ಪಶ್ಚಿಮಘಟ್ಟದಲ್ಲಿ ನಮಗೆ ಹೊಸ ಪ್ರಬೇದ ಕಂಡುಬಂತ್ತು. ಆಗುಂಬೆಯಲ್ಲಿ ಎರಡು ಸಂಶೋಧನಾ ಸಂಸ್ಥೆಗಳಿವೆ. ನಾನು 11 ರಾಜ್ಯಗಳಲ್ಲಿ ಕಾಳಿಂಗ ಪ್ರಭೇದಗಳ ಬಗ್ಗೆ ಸಂಶೋಧನೆ ಮಾಡಿದ್ದೇನೆ. ಸಂಶೋಧನೆಗೂ ಮತ್ತು ಸಂರಕ್ಷಣೆಗೂ ಸಂಬಂಧವಿಲ್ಲ. ನಾವು ಸಂಶೋಧನೆಗೂ ಮುನ್ನ ನಮ್ಮ ವಶಕ್ಕೆ ಪಡೆದ ಕಾಳಿಂಗ ಸರ್ಪದ ತೂಕ, ಅಳತೆ ಮತ್ತು ಲೆಕ್ಕವನ್ನು ಅರಣ್ಯ ಇಲಾಖೆಗೆ ನೀಡಿದ್ದೇವೆ. 2021ರಲ್ಲಿ ಕಳಸಾ ಅರಣ್ಯ ವ್ಯಾಪ್ತಿಯಲ್ಲಿ ಕಾಳಿಂಗ ಸರ್ಪದ ಗೂಡಿನಲ್ಲಿ ತಾಯಿಯಿಂದ ಬೇರ್ಪಟ್ಟ ಮೊಟ್ಟೆಗಳಿದ್ದವು. ಅರಣ್ಯ ಇಲಾಖೆಯ ಬೇಡಿಕೆ ಮೇರೆಗೆ ನಾವು ಮೊಟ್ಟೆಗಳನ್ನು ಸಂರಕ್ಷಿಸಿ ಇನ್ಕ್ಯೂಬೇಟರ್’ನಲ್ಲಿ ಮರಿಮಾಡಿ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದೇವು. ಅದು ಹೊರತುಪಡಿಸಿ ನಾವು ಯಾವುದೇ ರೀತಿಯಲ್ಲಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿಲ್ಲ ಮತ್ತು ಯಾವುದೇ ರೀತಿಯ ಹಿಂಸೆ ನೀಡಿಲ್ಲ. ವಿಷ ತೆಗೆಯುವ ಪ್ರಾಜೆಕ್ಟ್ ಕೂಡ ನಾವು ಮಾಡುತ್ತಿಲ್ಲ. ನಮ್ಮ ಸಂಸ್ಥೆ ಅದರಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಮಲೆನಾಡಿನಲ್ಲಿ ಜನ ಹಾವು ಕೊಲ್ಲುತ್ತಾರೆ ಎಂದು ಯಾವುದೇ ಸಂಶೋಧನಾ ಲೇಖನವನ್ನು ನಾನು ಪ್ರಕಟಿಸಿಲ್ಲ. ಅವೆಲ್ಲವೂ ಉದ್ದೇಶಪೂರ್ವಕವಾಗಿ ಹಬ್ಬಿಸಿದ ಸುಳ್ಳು. ಪರಿಸರ ಸೂಕ್ಷ್ಮ ವಲಯಗಳಲ್ಲಿ ಕಾನೂನುಬಾಹಿರವಾಗಿ ಯಾವುದೇ ಚಟುವಟಿಕೆ ನಡೆಸಿಲ್ಲ ಎಂದ ಅವರು, ಕಾಳಿಂಗ ಸರ್ಪ ಕಚ್ಚಿದರೆ ಇದಕ್ಕೆ ಇದೂವರೆಗೂ ಯಾವುದೇ ಔಷಧಿ ಕಂಡು ಹಿಡಿದಿಲ್ಲ ಎಂದರು.
ಫೌಂಡೇಷನ್ನಿನ ಕಾನೂನು ಸಲಹೆಗಾರ ಶೌಕದ್ ಜಮಾಲ್, ಸಂಶೋಧಕಿ ಪ್ರಿಯಾಂಕಾಸ್ವಾಮಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post