ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದಾದ್ಯಂತ ಇಂಡಿಗೋ ವಿಮಾನಗಳ ಹಾರಾಟ ರದ್ದು, #Flight cancellations ವಿವಿಧ ವಿಮಾನಗಳ ಹಾರಾಟ ಸಮಸ್ಯೆ ಬಿಗಡಾಯಿಸಿದ ಬೆನ್ನಲ್ಲೇ, ಸಮಸ್ಯೆಗೆ ಸಿಲುಕಿರುವ ಪ್ರಯಾಣಿಕರ ತುರ್ತು ನೆರವಿಗೆ ಭಾರತೀಯ ರೈಲ್ವೆ ಧಾವಿಸಿದೆ.
ವಿಮಾನ ಹಾರಾಟಗಳು ರದ್ದುಗೊಂಡು ಲಕ್ಷಾಂತರ ಪ್ರಯಾಣಿಕರ ಸಂಕಷ್ಟದಲ್ಲಿರುವ ವೇಳೆ ನೆರವಿಗೆ ಧಾವಿಸಿರುವ ಭಾರತೀಯ ರೈಲ್ವೆ, #Indian Railway ಹಲವು ರೈಲುಗಳಿಗೆ ಹೆಚ್ಚುವರಿ ಬೋಗಿ, ಹಲವು ಮಾರ್ಗಗಳಲ್ಲಿ ವಿಶೇಷ ರೈಲು ಸಂಚಾರವನ್ನು ಘೋಷಿಸಿದೆ.
ವಿಮಾನ ಹಾರಾಟ ರದ್ದುಗೊಂಡ ನಂತರ ಸಾವಿರಾರು ಪ್ರಯಾಣಿಕರು ರೈಲು ಪ್ರಯಾಣದ ಕಡೆ ಮುಖ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ರೈಲ್ವೆ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ.
ದಕ್ಷಿಣ ಭಾರತದಲ್ಲಿ ವಿಮಾನ ರದ್ದತಿಯ ಪರಿಣಾಮ ಹೆಚ್ಚಾಗಿ ಕಂಡುಬಂದಿದ್ದು, ರೈಲ್ವೆ ಸಾಮರ್ಥ್ಯವನ್ನು ಹೆಚ್ಚಿಸಲು ರೈಲ್ವೇ ಇಲಾಖೆ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ.
ದಕ್ಷಿಣ ರೈಲ್ವೆ 18 ರೈಲುಗಳಿಗೆ ಹೊಸ ಬೋಗಿಗಳನ್ನು ಸೇರಿಸಿದೆ. ಹಲವಾರು ಜನಪ್ರಿಯ ಮಾರ್ಗಗಳಲ್ಲಿ ಸ್ಲೀಪರ್ ಮತ್ತು ಚೇರ್ ಕಾರ್ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಪ್ರಯಾಣಿಕರಿಗೆ ಹೆಚ್ಚುವರಿ ಸೀಟುಗಳು ಲಭ್ಯವಾಗುವಂತೆ ಮಾಡಲಾಗಿದೆ.
ಇದು ಬೆಂಗಳೂರು, ಚೆನ್ನೈ, ಕೊಯಮತ್ತೂರು ಮತ್ತು ತಿರುವನಂತಪುರಂನಂತಹ ನಗರಗಳಿಗೆ ಪ್ರಯಾಣ ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿದೆ.
ಇನ್ನು ದೆಹಲಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಉತ್ತರ ರೈಲ್ವೆ 8 ಮುಖ್ಯ ರೈಲುಗಳಿಗೆ ಹೆಚ್ಚುವರಿ ಎಸಿ ಮತ್ತು ಚೇರ್ ಕಾರ್ಗಳನ್ನು ಸೇರಿಸಿದೆ. ಈ ಬದಲಾವಣೆ ತಕ್ಷಣದಿಂದ ಜಾರಿಗೆ ಬರಲಿದೆ.
ಉತ್ತರ ಭಾರತದಲ್ಲೂ ಸಹ ಹಲವು ಕ್ರಮ
ಇನ್ನು ಉತ್ತರ ಭಾರತಕ್ಕೆ ಸಂಬಂಧಿಸಿದಂತೆ ಪಂಜಾಬ್, ಹರಿಯಾಣ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಿಂದ ಬರುವ ಪ್ರಯಾಣಿಕರಿಗೆ ಇದು ದೊಡ್ಡ ರಿಲೀಫ್ ನೀಡಿದಂತಾಗಿವೆ.
ವಿಮಾನ ರದ್ದತಿಯಿಂದಾಗಿ ದೆಹಲಿ ಮತ್ತು ಮುಂಬೈ ನಡುವಿನ ಪ್ರಯಾಣವು ತುಂಬಾ ಕಷ್ಟಕರವಾಗಿದೆ. ಇದನ್ನು ಪರಿಹರಿಸಲು, ಪಶ್ಚಿಮ ರೈಲ್ವೆ ನಾಲ್ಕು ಮುಖ್ಯ ರೈಲುಗಳಲ್ಲಿ 3 ಎಸಿ ಮತ್ತು 2 ಎಸಿ ಕೋಚ್’ಗಳನ್ನು ಸೇರಿಸಿದೆ.
ಡಿ. 6ರ ಇಂದಿನಿಂದ ರಿಂದ 10 ರವರೆಗೆ ರಾಜೇಂದ್ರ ನಗರ-ನವದೆಹಲಿ ರಾಜಧಾನಿ ಎಕ್ಸ್’ಪ್ರೆಸ್’ನಲ್ಲಿ ಐದು ಹೆಚ್ಚುವರಿ ಟ್ರಿಪ್’ಗಳನ್ನು ಓಡಿಸಲಾಗುತ್ತಿದೆ. 2ಎಸಿ ಕೋಚ್’ಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗಿದೆ. ಇದು ಪಾಟ್ನಾ-ದೆಹಲಿ ಮಾರ್ಗದಲ್ಲಿ ಆಸನ ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಒಡಿಶಾದಿಂದ ದೆಹಲಿಗೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ, ಪೂರ್ವ ಕರಾವಳಿ ರೈಲ್ವೆ 20817, 20811 ಮತ್ತು 20823 ಸಂಖ್ಯೆಯ ರೈಲುಗಳಲ್ಲಿ ಐದು ಟ್ರಿಪ್’ಗಳಲ್ಲಿ 2ಎಸಿ ಕೋಚ್’ಗಳನ್ನು ಸೇರಿಸಿದೆ.
ಇದರೊಟ್ಟಿಗೆ, ಈಶಾನ್ಯ ಗಡಿನಾಡು, ಗೋರಖ್ಪರ, ಆನಂದ ವಿಹಾರ್ ವಿಶೇಷ ರೈಲು. ನವದೆಹಲಿ-ಮುಂಬೈ ಸೆಂಟ್ರಲ್ ವಿಶೇಷ ರೈಲು, ನವದೆಹಲಿ-ಶ್ರೀನಗರಗಳಿವೆ ವಂದೇ ಭಾರತ್ ವಿಶೇಷ ರೈಲುಗಳನ್ನು #Vande Bharat Special Train ಓಡಿಸುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
















