ಕಲ್ಪ ಮೀಡಿಯಾ ಹೌಸ್ | ಮೈಸೂರು |
ದಕ್ಷಿಣ ರೈಲ್ವೆಯ #Southern Railway ಮಿಲವಿಟ್ಟಾನ ಮತ್ತು ಟ್ಯುಟಿಕೊರಿನ್ ಯಾರ್ಡ್ ಮರು ವಿನ್ಯಾಸ ಕೆಲಸದ ಹಿನ್ನೆಲೆಯಲ್ಲಿ, ಮಧುರೈ ವಿಭಾಗದಲ್ಲಿ ಕೆಳಗಿನ ರೈಲುಗಳು ಭಾಗಶಃ ರದ್ದುಪಡಿಸಲಾಗುತ್ತದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ರದ್ದಾದ ರೈಲಿನ ವಿವರ ಹೀಗಿದೆ.
- 16235 ಸಂಖ್ಯೆಯ ಟ್ಯುಟಿಕೊರಿನ್ – ಮೈಸೂರು ಎಕ್ಸ್’ಪ್ರೆಸ್ #Tuticorin – Mysore Express 2025ರ ಡಿಸೆಂಬರ್ 21, 22 ಮತ್ತು 23ರಂದು ಟ್ಯುಟಿಕೊರಿನ್ ಮತ್ತು ವಾಂಚಿ ಮನಿಯಚ್ಚಿ ಜಂಕ್ಷನ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಈ ರೈಲು ಟ್ಯುಟಿಕೊರಿನ್ ನಿಲ್ದಾಣದ ಬದಲಾಗಿ ವಾಂಚಿ ಮನಿಯಚ್ಚಿ ನಿಲ್ದಾಣದಿಂದ ಅದರ ನಿಗದಿತ ಸಮಯಕ್ಕೆ ಹೊರಡುತ್ತದೆ.
- 16236 ಸಂಖ್ಯೆಯ ಮೈಸೂರು – ಟ್ಯುಟಿಕೊರಿನ್ ಎಕ್ಸ್’ಪ್ರೆಸ್ 2025ರ ಡಿಸೆಂಬರ್ 20, 21 ಮತ್ತು 22ರಂದು ವಾಂಚಿ ಮನಿಯಚ್ಚಿ ಜಂಕ್ಷನ್ ಮತ್ತು ಟ್ಯುಟಿಕೊರಿನ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಈ ರೈಲು ಟ್ಯುಟಿಕೊರಿನ್ ನಿಲ್ದಾಣದ ಬದಲಾಗಿ ವಾಂಚಿ ಮನಿಯಚ್ಚಿ ನಿಲ್ದಾಣದಿಂದ ಅದರ ನಿಗದಿತ ಸಮಯಕ್ಕೆ ಹೊರಡುತ್ತದೆ.

- 19567 ಸಂಖ್ಯೆಯ ಟ್ಯುಟಿಕೊರಿನ್ – ಓಖಾ ಎಕ್ಸ್’ಪ್ರೆಸ್ 2025ರ ಡಿಸೆಂಬರ್ 21ರಂದು ಟ್ಯುಟಿಕೊರಿನ್ ಮತ್ತು ಕೋವಿಲಪಟ್ಟಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಈ ರೈಲು ಟ್ಯುಟಿಕೊರಿನ್ ನಿಲ್ದಾಣದ ಬದಲಾಗಿ ಕೋವಿಲಪಟ್ಟಿಯಿಂದ ನಿಲ್ದಾಣದಿಂದ ಅದರ ನಿಗದಿತ ಸಮಯಕ್ಕೆ ಹೊರಡುತ್ತದೆ.
- 19568 ಸಂಖ್ಯೆಯ ಓಖಾ – ಟ್ಯುಟಿಕೊರಿನ್ ಎಕ್ಸ್’ಪ್ರೆಸ್ 2025ರ ಡಿಸೆಂಬರ್ 19ರಂದು ಕೋವಿಲಪಟ್ಟಿ ಮತ್ತು ಟ್ಯುಟಿಕೊರಿನ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಈ ರೈಲು ಟ್ಯುಟಿಕೊರಿನ್ ನಿಲ್ದಾಣದ ಬದಲಾಗಿ ಕೋವಿಲಪಟ್ಟಿಯಲ್ಲಿ ನಿಲ್ದಾಣದಿಂದ ಅದರ ನಿಗದಿತ ಸಮಯಕ್ಕೆ ಹೊರಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















