ಕಲ್ಪ ಮೀಡಿಯಾ ಹೌಸ್ | ಸೊರಬ |
ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1ರಂದು ಆಚರಿಸಲಾಗುತ್ತದೆ. ಇದು ಕರ್ನಾಟಕ ರಾಜ್ಯದ ಸ್ಥಾಪನೆಯ ದಿನವಾಗಿದೆ. 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ಪುನರ್‌ವಿಂಗಡಣೆಯ ನಂತರ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯವನ್ನು ರಚಿಸಲಾಗಿದ್ದು ಆದರೆ ಶಾಶ್ವತ ಕನ್ನಡ ಹೃದಯದಲ್ಲಿರಲು ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಿಸುವಂತಾಗಬೇಕು, ಎಂದು ಕರವೇ ಗಜ ಸೇನೆ ರಾಜ್ಯ ಸಂಸ್ಥಾಪಕ ಅಧ್ಯಕ್ಷ ತಾಯ್ನಾಡು ರಾಘವೇಂದ್ರ ಅವರು ಅಭಿಪ್ರಾಯಪಟ್ಟರು.
ಅವರು ಭಾನುವಾರ ಸೊರಬ ತಾಲೂಕಿನ ಬಾಡದ ಬೈಲಿನಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದ #Kannada Rajyothsava ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ನಮ್ಮ ಕರವೇ ರಾಜ್ಯ ಗಜ ಸೇನೆ ಸಂಘಟನೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಕರ್ನಾಟಕ ರಾಜ್ಯದ ಏಕೀಕರಣ ಮತ್ತು ಅಭಿವೃದ್ಧಿಗೆ ಅನೇಕ ಹೋರಾಟಗಳನ್ನು ಮಾಡಿದೆ. ಕನ್ನಡಿಗರ ಹೆಮ್ಮೆ ಮತ್ತು ಭಾಷಾ ಪ್ರೇಮವನ್ನು ಉಳಿಸುವಲ್ಲಿ ಹೋರಾಟವನ್ನು ಮಾಡಿದ್ದೇವೆ,ಕರ್ನಾಟಕದಾದ್ಯಂತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳು ನಡೆಸಿದ್ದೇವೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಪ್ರೋತ್ಸಾಹಿಸುವ ಹೋರಾಟ ಮಾಡಿದ್ದೇವೆ ಎಂದರು.
ನಮ್ಮ ಕರವೇ ಗಜ ಸೇನೆ ಸಂಘಟನೆ ವತಿಯಿಂದ, ಕೋವಿಡ್ ಅಂತ ಸಮಯದಲ್ಲಿ ಉಚಿತ 20 ಅಂಬುಲೆನ್ಸ್ ಸೇವೆಗಳನ್ನ ನೀಡಿದ್ದೇವೆ, ರಾಜ್ಯದಲ್ಲಿ 3000 ಸಾವಿರ ವಿವಿಧ ಕಂಪನಿಗಳ ಒಡಂಬಡಿಕೆಯೊಂದಿಗೆ ಕಿದ್ವಾಯಿ,ನಿಮಾನ್ಸ್ ಸೇರಿದಂತೆ ಕೆಲವು ಆಸ್ಪತ್ರೆಗಳಿಗೂ ಸಹ ಉಚಿತ ಸೇವೆಯನ್ನು ನೀಡುತ್ತಿದ್ದೇವೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಮ್ಮ ಕರವೇ ಗಜ ಸೇನೆ ವತಿಯಿಂದ ಶ್ರೀ ಸಂತೋಷ್ ಗುರೂಜೀ ರವರ ಮಾರ್ಗದರ್ಶನದಲ್ಲಿ ನಡೆದ ಡಿಂಡಿಮ ಉತ್ಸವದಲ್ಲಿ 96 ನಿಮಿಷದಲ್ಲಿ 3000 ಜನರೊಂದಿಗೆ ಬಾರಿಸು ಕನ್ನಡ ಡಿಂಡಿಮ ಹಾಡಿಗೆ ಗಿನ್ನಿಸ್ ದಾಖಲೆ ನೋಬೆಲ್ ಪ್ರಶಸ್ತಿಯು ಸಹ ಬಂದಿದೆ, ನೊಂದವರ ನೆರವಿಗೆ ಬಂದಿದ್ದೇವೆ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದೇವೆ. ಕನ್ನಡಿಗರ ಮೇಲೆ ಅನ್ಯ ಅನ್ಯ ಬಾಷಿಕ ರಿಂದ ಆಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿದ್ದೇವೆ ಹೀಗೆ ಕನ್ನಡ ನಾಡಿನಲ್ಲಿ ಕನ್ನಡಿಗರ ಸೇವೆಗೆ ಹಗಲಿರುಳು ನಮ್ಮ ಸಂಘಟನೆ ಸೆಮಿಸುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟನೆಯನ್ನು ಡಾ. ಹೆಚ್. ವಿ. ಜ್ಞಾನೇಶ್ ನೆರವೇರಿಸಿದರು. ಈ ಸಂದರ್ಭದಲ್ಲಿ ಕನ್ನಡದಲ್ಲಿ ಐಎಎಸ್ ಬರೆದಿದ್ದ ನಿವೃತ್ತ ಐಎಎಸ್ ಅಧಿಕಾರಿ ಶಿವಪ್ಪ, ರಾಜ್ಯ ಕರವೇ ಕರವೇ ಗಜ ಸೇನೆ ಕಾರ್ಮಿಕ ಘಟಕದ ಅಧ್ಯಕ್ಷ ಕೇಶವ ಮೂರ್ತಿ ಪೆಟ್ಕರ್, ಕಾನೂನು ಘಟಕದ ಅಧ್ಯಕ್ಷ, ಜಗದೀಶ್ ಗೌಡ, ರಾಜ್ಯ ಕರವೇ ಗಜ ಸೇನೆ ಕಾರ್ಯದರ್ಶಿ ಹೆಚ್. ಆರ್. ತೀರ್ಥೇಶ್,ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್, ಗ್ರಾಮ ಪಂಚಾಯಿತಿ ಸದಸ್ಯ ತಿರುಪತಿ, ಸೊರಬ ತಾಲೂಕು ಗಜ ಸೇನೆ ಅಧ್ಯಕ್ಷ ಅಂಕಿತ್ ಗೌಡ, ಡಾ. ಪ್ರಭು ಕೆ ಸಾಹುಕಾರ್, ಡಾ. ವಾಜಿದ್, ಕರವೇ ಗಜ ಸೇನೆ ಬಾಡದ ಬೈಲು ಅಧ್ಯಕ್ಷ ಲೋಕೇಶ್ ಎಂ ಸೇರಿದಂತೆ ಪ್ರಮುಖರಿದ್ದರು.
ಈ ಸಂದರ್ಭದಲ್ಲಿ ಕರವೇ ಗಜ ಸೇನೆ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ಉಚಿತ ಪೆನ್ಸಿಲ್ ಪೆನ್ನುಗಳನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಊರಿನ ಹಿರಿಯ ನಾಗರಿಕರನ್ನ ಸನ್ಮಾನಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















