ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರಿನ ಕೋಗಿಲುನಲ್ಲಿ ಅಕ್ರಮ ನಿವಾಸಿಗಳಿಗೆ #Illegal residents of Kogilu ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ವಸತಿ ಸಮುಚ್ಚಯದಲ್ಲಿ ಕಾಂಗ್ರೆಸ್ ಸರ್ಕಾರ ನಿವೇಶನ ನೀಡುತ್ತಿರುವುದು ಸಂವಿಧಾನ ಬಾಹಿರವಾಗಿದೆ. ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ #MLA Channabasappa ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಸೇರಿದಂತೆ ಕಳೆದ 30-40 ವರ್ಷಗಳಿಂದ ರಾಜ್ಯದ ಅನೇಕ ಕಡೆ ಬಡವರು ಕಂದಾಯ, ಗಾಂವ್‍ಠಾಣಾಗಳಲ್ಲಿ ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಬಿಜೆಪಿ ಅವರಿಗೆ ಹಕ್ಕುಪತ್ರಕ್ಕಾಗಿ ಹೋರಾಡುತ್ತಾ ಬಂದಿದೆ. ಸರ್ಕಾರದ ವಿವಿಧ ಕಾಯಿದೆ, ಕಾನೂನು ನಿಯಮಗಳ ತೊಡಕು ಇದ್ದಿದ್ದರಿಂದ ಇನ್ನೂ ಅವರಿಗೆ ಹಕ್ಕುಪತ್ರ ನೀಡಲಾಗಲಿಲ್ಲ. ಆದರೆ ಕೇರಳದಿಂದ ವಲಸೆ ಬಂದು ಕೋಗಿಲುನಲ್ಲಿ ಅಕ್ರಮ ನಿವೇಶನ ನಿರ್ಮಿಸಿ ವಾಸಿಸುತ್ತಿದ್ದ ಮುಸ್ಲಿಂಮರಿಗೆ ಬಯಪ್ಪನಹಳ್ಳಿಯಲ್ಲಿ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ವಸತಿ ಸಮುಚ್ಚಯದಲ್ಲಿ ಮನೆ ಕೊಡುತ್ತಿರುವುದು ಮತಬ್ಯಾಂಕ್ ರಾಜಕಾರಣವಲ್ಲದೆ ಮತ್ತೇನು ಅಲ್ಲ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಒಂದು ಟ್ವಿಟ್‍ಗೆ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ಒಂದು ದೂರವಾಣಿಗೆ ಥಟ್ ಅಂಥ ಎದ್ದುನಿಂತು ಅತಿಕ್ರಮಣದಾರರಿಗೆ ತಲಾ 11.20 ಲಕ್ಷ ರೂಪಾಯಿ ವೆಚ್ಚದ ಮನೆಯನ್ನು ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕಳೆದ ಹಲವಾರು ವರ್ಷಗಳಿಂದ ವಾಸಿಸುತ್ತಿರುವವರಿಗೆ ಒಂದು ಕಾನೂನು. ಸರ್ಕಾರಿ ಜಾಗದಲ್ಲಿ ಅತಿಕ್ರಮಣ ಮಾಡುವವರಿಗೆ ಇನ್ನೊಂದು ಕಾನೂನು ಮಾಡುತ್ತಿರುವ ಕಾಂಗ್ರೆಸ್‍ಗೆ ಬಡವರ ಶಾಪ ತಟ್ಟಿದೆ. ಕೋಗಿಲುನಲ್ಲಿ ಅಕ್ರಮ ವಾಸಿಗಳಾಗಿರುವ 187 ಕುಟುಂಬಗಳು ನಿಮ್ಮ ಮೊಮ್ಮಕ್ಕಳಾ ಅಥವಾ ಸರ್ಕಾರದ ಮಕ್ಕಳಾ ಎಂದು ಕಟುವಾಗಿ ಟೀಕಿಸಿದ ಅವರು, ಶಿವಮೊಗ್ಗದಲ್ಲಿ ಬಡವರಿಗೆ , ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮನೆ ಕೊಡಬೇಕು ಎಂದು ವಸತಿ ಸಚಿವ ಜಮೀರ್ ಅಹ್ಮದ್‍ಖಾನ್ ಮತ್ತು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಲ್ಲಿ ಭಿಕ್ಷೆ ಬೇಡಿದರೂ ಕೂಡ ಇಲ್ಲಿಯವರೆಗೂ 10 ಕೋಟಿ ರೂಪಾಯಿ ಕೊಡಲು ಹಣವಿಲ್ಲ. ಇವರು ದ್ವಂದ್ವನೀತಿ ಅನುಸರಿಸುತ್ತಿದ್ದಾರೆ. ಆದರೆ ಕೋಗಿಲು ಅಕ್ರಮ ನಿವಾಸಿಗಳಿಗೆ ಥಟ್ ಅಂತ ಸಿದ್ಧವಾದ ಮನೆಯನ್ನೇ ಕೊಡುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ. ಮೊದಲು ಶಿವಮೊಗ್ಗದವರಿಗೆ ಹಕ್ಕುಪತ್ರ ಕೊಡಲಿ. ನಂತರ ನಿಮ್ಮ ಕೆಲಸ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಮೋಹನ್‍ರೆಡ್ಡಿ, ಪ್ರಮುಖರಾದ ಜ್ಞಾನೇಶ್ವರ, ದೀನ್‍ದಯಾಳ್, ಶ್ರೀನಾಗ, ಮುರಳಿ, ವಿಶ್ವನಾಥ್, ಎನ್.ಜೆ. ನಾಗರಾಜ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
















