ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಖಾಮುಖಿ (ಎಸ್‍ಟಿ) ರಂಗ ತಂಡದಿಂದ ಖ್ಯಾತ ರಂಗ ಕಲಾವಿದೆ ಉಮಾಶ್ರೀ #Umashree ಅಭಿನಯಿಸಿರುವ ಏಕವ್ಯಕ್ತಿ ಶರ್ಮಿಷ್ಠೆ ನಾಟಕವನ್ನು #one-man play Sharmishte ಜ.11ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಶರ್ಮಿಷ್ಠೆ ನಾಟಕ ಎರಡನೇ ಬಾರಿ ಪ್ರದರ್ಶನಗೊಳ್ಳುತ್ತಿದ್ದು, ಈ ನಾಟಕ ಯಾಯತಿ, ಪುರು ಮತ್ತು ಶರ್ಮಿಷ್ಠೆಯರ ಮಧ್ಯೆ ಏರ್ಪಡುವ ತ್ರಿಕೋನ ಸಂಘರ್ಷವಾಗಿದೆ. ಹಲವು ಆಯಾಮಗಳನ್ನು ಅನಾವರಣಗೊಳಿಸುತ್ತಾ ಬಿಚ್ಚಿಡುವ ಸತ್ಯಗಳನ್ನು ಅರಗಿಸಿಕೊಳ್ಳಲಾರದೇ ಅತಂತ್ರ ಮಾನಸಿಕ ಸ್ವಾಸ್ಥ್ಯದ ಸ್ಥಿತ್ಯಂತರವನ್ನು ವರ್ತಮಾನ ಸಂದರ್ಭದಲ್ಲಿ ತೆರೆದಿಡುತ್ತದೆ. ಈ ನಾಟಕ ಏಕವ್ಯಕ್ತಿಯದ್ದಾಗಿದೆ ಎಂದರು.
ಚಿದಂಬರ ರಾವ್ ಜಂಬೆ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಡಾ.ಬೇಲೂರು ರಘನಂದನ್ ರಚಿಸಿದ್ದಾರೆ. ಪ್ರವೇಶ ಶುಲ್ಕ ರೂ.200 ನಿಗದಿಪಡಿಸಲಾಗಿದ್ದು, ಬುಕ್ ಮೈ ಶೋ ಮೂಲಕವೂ ಪ್ರವೇಶ ಟಿಕೆಟ್ ಪಡೆಯಬಹುದು. ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಸಮಯಕ್ಕೆ ಸರಿಯಾಗಿ ನಾಟಕ ಪ್ರದರ್ಶನ ಆರಂಭವಾಗುತ್ತದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 9739964726/9482021074ಗೆ ಸಂಪರ್ಕಿಸಬಹುದು. ಪತ್ರಿಕಾಗೋಷ್ಠಿಯಲ್ಲಿ ಮಂಜು ರಂಗಾಯಣ, ಸಿ.ಎ.ಮಹೇಂದ್ರ, ಶಶಿಕುಮಾರ್ ಸಂದೀಪ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
















