ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಂಬರುವ ಬಜೆಟ್‍ನಲ್ಲಿ #Budget ಶಿವಮೊಗ್ಗ ನಗರಕ್ಕೆ ತುರ್ತು ಯೋಜನೆಗಳಿಗೆ ಸಾಕಷ್ಟು ಹಣ ಒದಗಿಸಬೇಕು ಎಂದು ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ #Chief Minister ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ನಗರದಲ್ಲಿ ಅನೇಕ ಸಮಸ್ಯೆಗಳಿವೆ. ಮೂಲಭೂತ ಸೌಲಭ್ಯಗಳೇ ಇಲ್ಲವಾಗಿದೆ. ತುರ್ತಾಗಿ ಮೂಲಭೂತ ಸೌಲಭ್ಯಗಳ ಯೋಜನೆಗಾಗಿ ಹಣ ಬೇಕಾಗಿದೆ. ಈ ಬಾರಿಯ ಬಜೆಟ್‍ನಲ್ಲಿ ಇದಕ್ಕಾಗಿ ಹಣವನ್ನು ಮಿಸಲಾಗಿಟ್ಟು ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ ನಗರದ ನೀರು ಸರಬರಾಜು ಘಟಕ ಹಳೆಯದಾಗಿದ್ದು ಶಿಥಿಲವಾಗಿದೆ. ಜನಸಂಖ್ಯೆಗೆ ಅನುಗುಣವಾಗುವಂತೆ ನೀರಿನ ಪೂರೈಕೆ ಈ ಘಟಕದಿಂದ ಪೂರೈಸಲು ಆಗುವುದಿಲ್ಲ. ಆದ್ದರಿಂದ ಹೊಸನೀರು ಸರಬರಾಜು ಘಟಕ ಬೇಕಾಗಿದೆ. ಮತ್ತು ನಗರದ ಯುಜಿಡಿಯ ಕೊಳಕುನೀರು ನದಿಗೆ ಸೇರುತ್ತಿದೆ. ಇದನ್ನು ತಡೆಯಲು ಅಗತ್ಯಹಣ ಬೇಕಾಗಿದೆ. ರಸ್ತೆಗಳ ಅಗಲೀಕರಣ ಹಲವು ಬಡಾವಣೆಗಳಲ್ಲಿ ಮತ್ತು ಮುಖ್ಯ ರಸ್ತೆಗಳಲ್ಲಿ ಆಗಬೇಕಾಗಿದೆ. ಬೊಮ್ಮನಕಟ್ಟೆ ರಸ್ತೆಯಲ್ಲಿ ರೈಲು ಕೆಳಸೇತುವೆ ಆಗಬೇಕಾಗಿದೆ. ನಗರದಲ್ಲಿ ವಾಹನದಟ್ಟಣೆ ಹೆಚ್ಚಾಗಿದ್ದು, ಸುಗಮ ಸಂಚಾರಕ್ಕಾಗಿ ಬಸ್ ನಿಲ್ದಾಣದ ಬಳಿ ಎಲಿವೇಟರ್‍ಗಳೊಂದಿಗೆ ಮೇಲು ಸೇತುವೆ ಆಗಬೇಕಾಗಿದೆ ಎಂದು ಮನವಿದಾರರು ತಿಳಿಸಿದರು.
ಈ ಎಲ್ಲಾ ಕಾಮಗಾರಿಗಳು ತುರ್ತಾಗಿ ಆಗಬೇಕಾಗಿರುವುದರಿಂದ ನಗರದ ಅಭಿವೃದ್ಧಿಗೆ 2026-27ರ ಬಜೆಟ್‍ನಲ್ಲಿ ಅಗತ್ಯಹಣ ಒದಗಿಸಿ, ಶಿವಮೊಗ್ಗದ ಅಭಿವೃದ್ದಿಗೆ ಸಹಕರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ್‍ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ.ಎ.ಸತೀಶ್‍ಕುಮಾರ್‍ಶೆಟ್ಟಿ, ಪ್ರಮುಖರಾದ ಎಸ್.ಬಿ. ಅಶೋಕ್‍ಕುಮಾರ್, ರಾಜಮ್ಮ, ಪರಿಸರ ರಮೇಶ್, ಜನಮೇಜಿರಾವ್, ದೇವೇಂದ್ರಪ್ಪ, ಸೀತಾರಾಮ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















