No Result
View All Result
SWR hubballi-railway-fire-safety-training-emergency
English Articles

Fire Safety Training Held for Railway Officials and Staff in Hubballi

by kalpa News
September 10, 2026
0

Kalpa Media House  |  Hubballi | A practical training programme on Fire Safety and Emergency Management was organised for railway...

Read moreDetails
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
  • Advertise With Us
  • Grievances
  • About Us
  • Contact Us
Thursday, September 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಬೆಂಗಳೂರು | ‘ಮ್ಯಾಚ್ ಡೇ 2026’ ವಿನೂತನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

'ಗೋಯಿಂಗ್ ಟು ಸ್ಕೂಲ್' ಸಂಸ್ಥೆ, ಕರ್ನಾಟಕ ಸರ್ಕಾರ, ಒರಾಕಲ್, ಬಿಟಿ ಗ್ರೂಪ್, ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮತ್ತು ಬೆಂಗಳೂರು ಎಫ್‌ಸಿ ಸಾಕರ್ ಸ್ಕೂಲ್ಸ್ ಸಹಯೋಗ

kalpa News by kalpa News
February 28, 2026
in Special Articles
0
ಬೆಂಗಳೂರು | ‘ಮ್ಯಾಚ್ ಡೇ 2026’ ವಿನೂತನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಸೃಜನಶೀಲ ಲಾಭರಹಿತ ಸಂಸ್ಥೆ ಆಗಿರುವ ‘ಗೋಯಿಂಗ್ ಟು ಸ್ಕೂಲ್’ #Going to School ಸಂಸ್ಥೆಯು ಕರ್ನಾಟಕ ಸರ್ಕಾರ, ಒರಾಕಲ್, ಬ್ರಿಟಿಷ್ ಟೆಲಿಕಾಂ (ಬಿಟಿ) ಗ್ರೂಪ್, ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮತ್ತು ಬೆಂಗಳೂರು ಎಫ್‌ಸಿ ಸಹಭಾಗಿತ್ವದಲ್ಲಿ ವಿನೂತನ ಕಾರ್ಯಕ್ರಮವಾದ ‘ಮ್ಯಾಚ್ ಡೇ’ಯನ್ನು #Match Day 2026 ಅದ್ದೂರಿಯಾಗಿ ಆಯೋಜಿಸಿದೆ. ಬೆಂಗಳೂರಿನ ಜೆ.ಪಿ. ನಗರದ ಜಯಪ್ರಕಾಶ್ ನಾರಾಯಣ್ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

‘ಮ್ಯಾಚ್ ಡೇ’ ಕಾರ್ಯಕ್ರಮದಲ್ಲಿ 2,000 ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಅವರ ಶಿಕ್ಷಕರು ಹಾಗೂ ಪಾಲುದಾರ ಸಂಸ್ಥೆಗಳ 100 ಸ್ವಯಂಸೇವಕರು ಪಾಲ್ಗೊಂಡರು. ಗುಲಾಬಿ ಮತ್ತು ಹಸಿರು ಬಣ್ಣದ ಫುಟ್‌ಬಾಲ್ ವೇದಿಕೆಯಲ್ಲಿ ನಡೆದ ಪ್ರಶ್ನೋತ್ತರ ಕಾರ್ಯಕ್ರಮಗಳಿಂದ ಹಿಡಿದು, ಒರಾಕಲ್ ಮತ್ತು ಬಿಟಿ ಗ್ರೂಪ್ ಸ್ವಯಂಸೇವಕರು ಮುನ್ನಡೆಸಿದ ಒಂಬತ್ತು ಕೋಡಿಂಗ್ ಸವಾಲುಗಳ ಟೆಂಟ್‌ ಗಳವರೆಗೆ ವಿವಿಧ ಕಾರ್ಯಕ್ರಮಗಳು ನಡೆದುವು. ಈ ಸಂದರ್ಭದಲ್ಲಿ ಎಲ್ಲಾ ಪಾಲುದಾರರು ಯುವಜನರೊಂದಿಗೆ ಸಂವಾದ ನಡೆಸಿದರು. ಬೆಂಗಳೂರು ಎಫ್‌ಸಿ ಮಹಿಳಾ ತಂಡವು ಕ್ರೀಡಾ ಶಕ್ತಿಯನ್ನು ಪ್ರದರ್ಶಿಸಿತು; ಇದು ನಮ್ಮೆಲ್ಲರನ್ನು ಒಟ್ಟಾಗಿ ಆಟವಾಡಲು, ಕಲಿಯಲು ಮತ್ತು ನಗರ ಮಟ್ಟದಲ್ಲಿ ಸಮಾನತೆ ಹೊಂದಲು ಹಾಗೂ ಬದಲಾವಣೆಗಾಗಿ ಸಿದ್ಧರಾಗಲು ಪ್ರೇರೇಪಿಸಿತು.
ಈ ಕಾರ್ಯಕ್ರಮವು ಹೆಣ್ಣುಮಕ್ಕಳು, ಅವರಿಗೆ ಬೆಂಬಲವಾಗಿ ನಿಲ್ಲುವ ಗಂಡುಮಕ್ಕಳು, ಜೀವನ ಕೌಶಲ್ಯಗಳು, ಡಿಜಿಟಲ್ ಕೌಶಲ್ಯಗಳು, ಶಿಕ್ಷಣ, ಕ್ರೀಡೆ, ನಗರದ ಅಭಿವೃದ್ಧಿ, ಹವಾಮಾನ ಬದಲಾವಣೆ ಮತ್ತು ತಂತ್ರಜ್ಞಾನದ ಸಮಾಗಮವಾಗಿರುವ ಅಪೂರ್ವ ಕಾರ್ಯಕ್ರಮವಾಗಿ ಮೂಡಿಬಂದಿತು.

‘ಗೋಯಿಂಗ್ ಟು ಸ್ಕೂಲ್’ ಸಂಸ್ಥೆಯು ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡಿರುವ ತಿಳಿವಳಿಕಾ ಒಪ್ಪಂದದ ಭಾಗವಾಗಿ ಕರ್ನಾಟಕದ ಸರ್ಕಾರಿ ಶಾಲೆಗಳ 5 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗಾಗಿ ಭವಿಷ್ಯಕ್ಕೆ ಒದಗುವ ಕ್ರಿಯಾತ್ಮಕ ಕೌಶಲ್ಯಗಳನ್ನು ಕಲಿಸುತ್ತಿದೆ. ಈ ಯೋಜನೆಯ ಭಾಗವಾಗಿ ಒರಾಕಲ್, ಬಿಟಿ ಗ್ರೂಪ್, ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮತ್ತು ಬೆಂಗಳೂರು ಎಫ್‌ಸಿ ಸಹಭಾಗಿತ್ವದಲ್ಲಿ ‘ಹೆಣ್ಣುಮಕ್ಕಳಿಗಾಗಿ (ಗಂಡು ಮಕ್ಕಳಿಗೂ) ಹೊರಾಂಗಣ ಶಾಲೆ’ ಎಂಬ ಅಪೂರ್ವವಾದ ಕಾರ್ಯಕ್ರಮವನ್ನು ನಡೆಸುತ್ತಿದೆ.

ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರು ಒಂದು ತರಗತಿಯಿಂದ ಇನ್ನೊಂದಕ್ಕೆ ಯಶಸ್ವಿಯಾಗಿ ಮುನ್ನಡೆಯಲು ಅಗತ್ಯವಿರುವ ಕೌಶಲ್ಯಗಳನ್ನು ಕಲಿಸಲು ವಿನ್ಯಾಸಗೊಳಿಸಲಾಗಿದೆ. ಇದು ಅವರು ಶಾಲಾ ಶಿಕ್ಷಣದ ನಂತರ ಉದ್ಯೋಗಾವಕಾಶ ಹೊಂದಲು ಅಥವಾ ನಗರದಲ್ಲಿ ತಮ್ಮದೇ ಆದ ಸುಸ್ಥಿರ ಉದ್ಯಮಗಳನ್ನು (ಸ್ಟಾರ್ಟಪ್) ಪ್ರಾರಂಭಿಸಲು ನೆರವಾಗಲಿದೆ.
ವಿನ್ಯಾಸ ಆಧಾರಿತ ಕಥೆಗಳು, ಆಟಗಳು, ಫುಟ್‌ ಬಾಲ್ ಮತ್ತು ತಂತ್ರಜ್ಞಾನದ ಮೂಲಕ ಯುವಪೀಳಿಗೆ ಹೊಸ ‘ಗ್ರೀನ್ ಜಾಬ್ಸ್’ (ಪರಿಸರ ಪೂರಕ ಉದ್ಯೋಗಗಳು) ಪಡೆಯಲು ಹಾಗೂ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವ ಸುಸ್ಥಿರ ಸ್ಟಾರ್ಟ್ ಅಪ್‌ಗಳನ್ನು ರೂಪಿಸಲು ಅಗತ್ಯವಿರುವ ಕೌಶಲ್ಯಗಳನ್ನು ಇಲ್ಲಿ ಕಲಿಯಲಿದ್ದಾರೆ.

ಇದಕ್ಕೆ ಪೂರಕವಾಗಿ ‘ಮ್ಯಾಚ್ ಡೇ’ ಕಾರ್ಯಕ್ರಮವು ಅದ್ದೂರಿಯಾಗಿ ನಡೆದಿದೆ. ನಾವೆಲ್ಲರೂ ಹೊರಗೆ ಬಂದು ಒಟ್ಟಾಗಿ ಆಟವಾಡುವ ಅವಕಾಶ ಸಿಕ್ಕಾಗ ಅದು ಯಾವಾಗಲೂ ಸುಂದರ ದಿನವಾಗಿರುತ್ತದೆ. ಬೆಂಗಳೂರಿನ ಜೆ.ಪಿ. ನಗರದ ಜಯಪ್ರಕಾಶ್ ನಾರಾಯಣ್ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 18 ಸರ್ಕಾರಿ ಶಾಲೆಗಳ 2,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಹೆಣ್ಣುಮಕ್ಕಳನ್ನೇ ಕೇಂದ್ರಬಿಂದುವಾಗಿಸಿಕೊಂಡ ಈ ಕಾರ್ಯಕ್ರಮವು ಕ್ರೀಡೆ ಮತ್ತು ತಂತ್ರಜ್ಞಾನದ ಅಪೂರ್ವ ಮಿಶ್ರಣಕ್ಕೆ ಸಾಕ್ಷಿಯಾಯಿತು. ಒರಾಕಲ್, ಬಿಟಿ, ಬೆಂಗಳೂರು ಎಫ್‌ಸಿ ಮತ್ತು ಕರ್ನಾಟಕ ಸರ್ಕಾರದ ಪ್ರಮುಖ ಪ್ರತಿನಿಧಿಗಳು ವೇದಿಕೆಯ ಮೇಲೆ ಮಕ್ಕಳ ಪ್ರಶ್ನೆಗಳಿಗೆ ಸಂವಾದದ ಮೂಲಕ ಉತ್ತರಿಸಿದರು. ನಂತರ, ಎಲ್ಲರೂ ಮೈದಾನಕ್ಕಿಳಿದು ಒಂಬತ್ತು ಟೆಂಟ್‌ ಗಳಲ್ಲಿ ಕೋಡಿಂಗ್ ಸವಾಲುಗಳನ್ನು ಎದುರಿಸಿದರು ಮತ್ತು ಪ್ರತಿ 15 ನಿಮಿಷಕ್ಕೊಮ್ಮೆ ಫುಟ್‌ ಬಾಲ್ ಆಟಕ್ಕೆ ಆಡುತ್ತಾ ಸಂಭ್ರಮಿಸಿದರು.

ಮಕ್ಕಳ 36 ತಂಡಗಳು, ಆ ತಂಡಗಳೊಂದಿಗೆ ಇದ್ದ ಸ್ವಯಂಸೇವಕರೊಂದಿಗೆ ಡಿಜೆ, ಇಬ್ಬರು ನಿರೂಪಕರು ಮತ್ತು ಆಯಾ ಸುತ್ತಿನಲ್ಲಿ ಯಾವ ತಂಡ ಗೆದ್ದಿದೆ ಎಂದು ತೋರಿಸುವ ಎರಡು ಬೃಹತ್ ಲೀಡರ್‌ ಬೋರ್ಡ್‌ಗಳ ಸಮ್ಮುಖದಲ್ಲಿ ತಾಂತ್ರಿಕ ಮತ್ತು ಫುಟ್‌ ಬಾಲ್ ಸವಾಲುಗಳಲ್ಲಿ ಪಾಲ್ಗೊಂಡವು.
ಆರಂಭಿಕ ಪ್ರಶ್ನೋತ್ತರ ಅವಧಿಯ ನಂತರ, “ಗೇಮ್ ಆನ್: ಹವಾಮಾನ ಬದಲಾವಣೆ ಆಟಗಳು” ಪ್ರಾರಂಭವಾದವು. ಯುವಜನರು ಬಿಎಫ್‌ಸಿ ತರಬೇತುದಾರರು ನಡೆಸಿಕೊಟ್ಟ ಮಿನಿ ಫುಟ್‌ ಬಾಲ್ ಪಂದ್ಯಗಳು ಹಾಗೂ ಒರಾಕಲ್ ಮತ್ತು ಬಿಟಿ ಸ್ವಯಂಸೇವಕರು ನಡೆಸಿಕೊಟ್ಟ ಕೋಡಿಂಗ್ ಸವಾಲುಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದರು. ಕೋಡಿಂಗ್ ಕೇಂದ್ರಗಳಲ್ಲಿ ಮಕ್ಕಳು ಕೃತಕ ಬುದ್ಧಿಮತ್ತೆಯನ್ನು ಬಳಸಿ ಕ್ಯಾಲ್ಕುಲೇಟರ್‌ ಗಳನ್ನು ತಯಾರಿಸುವುದು ಮತ್ತು ಹವಾಮಾನ ಹಾಗೂ ಸ್ಮಾರ್ಟ್ ಸಿಟಿ ಪರಿಹಾರಗಳಿಗಾಗಿ ರಸಪ್ರಶ್ನೆಗಳನ್ನು ವಿನ್ಯಾಸಗೊಳಿಸುವುದನ್ನು ಪ್ರಾಯೋಗಿಕವಾಗಿ ಕಲಿತರು.

ತನ್ನ ಆಶಯಕ್ಕೆ ಅನುಗುಣವಾಗಿ, ‘ಮ್ಯಾಚ್ ಡೇ 2026’ ಒಂದು ‘ಶೂನ್ಯ-ಪ್ಲಾಸ್ಟಿಕ್’ ಕಾರ್ಯಕ್ರಮವಾಗಿ ಮೂಡಿಬಂದಿತು. ಸ್ಥಳೀಯವಾಗಿ ಸಿಗುವ ಪದಾರ್ಥಗಳಿಂದ ಸಿದ್ಧಪಡಿಸಿದ ಸುಸ್ಥಿರ ಮಧ್ಯಾಹ್ನದ ಊಟವನ್ನು ಎಲೆಗಳ ತಟ್ಟೆಯಲ್ಲಿ ಬಡಿಸಲಾಯಿತು ಮತ್ತು ಕಾರ್ಯಕ್ರಮದ ಉದ್ದಕ್ಕೂ ಹವಾಮಾನ ಸಂರಕ್ಷಣೆಯ ಸಂದೇಶಗಳನ್ನು ನೀಡಲಾಯಿತು.

‘ಮ್ಯಾಚ್ ಡೇ’ ಆಚರಿಸುವ ‘ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳಿಗಾಗಿ ಹೊರಾಂಗಣ ಶಾಲೆ’ ಕಾರ್ಯಕ್ರಮವು, 5 ರಿಂದ 10ನೇ ತರಗತಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗಾಗಿ ಕ್ರೀಡೆ (ಫುಟ್‌ಬಾಲ್) ಜೊತೆಗೆ ಡಿಜಿಟಲ್, ಜೀವನ ಕೌಶಲ್ಯ, ಸ್ಟೆಮ್ ಶಿಕ್ಷಣ ಮತ್ತು ಸುಸ್ಥಿರ ಉದ್ಯಮಶೀಲತಾ ಕೌಶಲ್ಯಗಳನ್ನು ಒಳಗೊಂಡ ಸಮಗ್ರ ಪಠ್ಯಕ್ರಮವನ್ನು ಒದಗಿಸುತ್ತದೆ. ಹೆಣ್ಣುಮಕ್ಕಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವ ಹಾಗೂ ನಗರದಲ್ಲಿ ಪರಿಸರ ಪೂರಕ ಉದ್ಯೋಗಗಳನ್ನು ಸೃಷ್ಟಿಸುವ ಸುಸ್ಥಿರ ಉದ್ಯಮಗಳನ್ನು ಪ್ರಾರಂಭಿಸಲು ಅಗತ್ಯವಿರುವ ಕೌಶಲ್ಯಗಳನ್ನು ನೀಡುವಂತೆ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.

ಈ ಕುರಿತು ಮಾತನಾಡಿದ ಬಿಟಿ ಗ್ರೂಪ್ ಇಂಡಿಯಾದ ಸಾಮಾಜಿಕ ಪ್ರಭಾವ ವಿಭಾಗದ ಮುಖ್ಯಸ್ಥರಾದ ಇಯಾನ್ ಮೆಕ್‌ ಬ್ರೈಡ್ ಅವರು, “ಗೋಯಿಂಗ್ ಟು ಸ್ಕೂಲ್ ಸಂಸ್ಥೆಯೊಂದಿಗೆ ಬಿಟಿ ಹೊಂದಿರುವ ದೀರ್ಘಕಾಲದ ಪಾಲುದಾರಿಕೆಯು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ನಮ್ಮ ಸ್ವಯಂಸೇವಕರು ನಿಯಮಿತವಾಗಿ ‘ಹೆಣ್ಣುಮಕ್ಕಳಿಗಾಗಿ ಹೊರಾಂಗಣ ಶಾಲೆ’ ಕಾರ್ಯಕ್ರಮಕ್ಕೆ ತಮ್ಮ ಕೌಶಲ್ಯಗಳನ್ನು ಧಾರೆ ಎರೆಯುತ್ತಿರುವುದು ನಮಗೆ ಸಂತೋಷ ತಂದಿದೆ. ಕ್ರೀಡೆಯ ಮೂಲಕ ಡಿಜಿಟಲ್ ಕೌಶಲ್ಯಗಳನ್ನು ಕಲಿಸಲು ಅವರು ಶ್ರಮಿಸುತ್ತಿದ್ದಾರೆ, ಇದು ಎಲ್ಲರಿಗೂ ಡಿಜಿಟಲ್ ಒಳಗೊಳ್ಳುವಿಕೆಯನ್ನು ಒದಗಿಸುವ ಬಿಟಿಯ ಗುರಿಯನ್ನು ಸಾಕಾರಗೊಳಿಸುತ್ತಿದೆ” ಎಂದು ತಿಳಿಸಿದ್ದಾರೆ.
ಗೋಯಿಂಗ್ ಟು ಸ್ಕೂಲ್ ಸಂಸ್ಥೆಯ ಸಿಇಓ ಲಿಸಾ ಹೈಡ್ಲಾಫ್ ಈ ಕುರಿತು ಮಾತನಾಡಿ, “ಮ್ಯಾಚ್ ಡೇ ಯಾವಾಗಲೂ ಅದ್ಭುತ ದಿನ. ನಾವೆಲ್ಲರೂ ಹೊರಗಡೆ, ಆಫ್‌ ಲೈನ್‌ ನಲ್ಲಿ ಒಟ್ಟಾಗಿ ಸೇರಲು, ನಮ್ಮ ಮತ್ತು ಯುವಜನರ ಭವಿಷ್ಯಕ್ಕೆ ಅಗತ್ಯವಿರುವ ಕೌಶಲ್ಯಗಳ ಬಗ್ಗೆ ಮಾತನಾಡಲು, ಆಟವಾಡಲು, ಕಲಿಯಲು, ಮನಸಾರೆ ನಗಲು ಮತ್ತು ನಗುಮೊಗದಿಂದ ಇರುವ ಒಂದು ಸೊಗಸಾದ ಅವಕಾಶವಿದು. ಜೀವನ ಕೌಶಲ್ಯ, ಡಿಜಿಟಲ್ ಕೌಶಲ್ಯ, ಫುಟ್‌ಬಾಲ್, ತಂತ್ರಜ್ಞಾನ, ಎಐ, ಹವಾಮಾನ ಬದಲಾವಣೆ, ಶಿಕ್ಷಣ – ಇವೆಲ್ಲವೂ ಒಟ್ಟಾಗಿ ಬಂದಾಗ ನಾವು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದನ್ನು ಕಂಡುಕೊಳ್ಳಲು ಮ್ಯಾಚ್ ಡೇ ನಮಗೆ ದಾರಿ ಮಾಡಿಕೊಡುತ್ತದೆ.

ಹೆಣ್ಣುಮಕ್ಕಳು ಶಾಲಾ ಶಿಕ್ಷಣ ಮುಗಿಸಿ, ನಗರವನ್ನೇ ಬದಲಿಸಬಲ್ಲ ಉದ್ಯಮಿಗಳಾಗುವಂತೆ ಪ್ರೇರೇಪಿಸುವುದು ನಮ್ಮ ಗುರಿಯಾಗಿದೆ. ಕರ್ನಾಟಕ ಸರ್ಕಾರ, ಒರಾಕಲ್, ಬಿಟಿ ಗ್ರೂಪ್, ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮತ್ತು ಬೆಂಗಳೂರು ಎಫ್‌ಸಿ ಜೊತೆ ಕೈಜೋಡಿಸಿರುವುದು ನಮಗೆ ತುಂಬಾ ಸಂತೋಷ ತಂದಿದೆ. ನಿಮ್ಮ ಅಚಲ ಬೆಂಬಲವಿಲ್ಲದೆ ಇದನ್ನು ಮಾಡಲು ಸಾಧ್ಯವಿರಲಿಲ್ಲ, ಈ ದಿನ ನಮ್ಮೊಂದಿಗೆ ಆಟವಾಡಲು ಬಂದಿದ್ದಕ್ಕಾಗಿ ಧನ್ಯವಾದಗಳು” ಎಂದು ಹೇಳಿದರು.

“ಹೆಣ್ಣುಮಕ್ಕಳಿಗಾಗಿ ಹೊರಾಂಗಣ ಶಾಲೆ” ಪ್ರಸ್ತುತ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ರಾಯಚೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಂದು ವಿಶೇಷವಾದ ತಿಳುವಳಿಕಾ ಒಪ್ಪಂದದ ಮೂಲಕ ಶಾಲಾ ಅವಧಿಯಲ್ಲೇ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳಿಗೆ ಫುಟ್‌ ಬಾಲ್ ಸೇರಿದಂತೆ ಕ್ರಿಯಾತ್ಮಕ ಕೌಶಲ್ಯಗಳನ್ನು ಈ ಯೋಜನೆಯು ಕಲಿಸುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕದ ಐದು ಗ್ರಾಮೀಣ ಜಿಲ್ಲೆಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: 'ಗೋಯಿಂಗ್ ಟು ಸ್ಕೂಲ್'BENGALURUGoing to SchoolKannada NewsKannada News LiveKannada News OnlineKannada News WebsiteKannada WebsiteLatest News KannadaMatch Day 2026News in KannadaNews Kannadaಬೆಂಗಳೂರುಮ್ಯಾಚ್ ಡೇ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಪ್ರೇರಣ ಪಬ್ಲಿಕ್ ಶಾಲೆ ನಾವಿನ್ಯಯುತ ಚಿಂತನಾತ್ಮಕ ಕಲಿಕೆಗೆ ವೇದಿಕೆ: ಸೋಮಶೇಖರಯ್ಯ

Next Post

ರಕ್ತದಾನದಿಂದ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು: ಡಾ. ನಾಗರಾಜ ಅಭಿಪ್ರಾಯ

kalpa News

kalpa News

Next Post
ರಕ್ತದಾನದಿಂದ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು: ಡಾ. ನಾಗರಾಜ ಅಭಿಪ್ರಾಯ

ರಕ್ತದಾನದಿಂದ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು: ಡಾ. ನಾಗರಾಜ ಅಭಿಪ್ರಾಯ

Leave a Reply Cancel reply

Your email address will not be published. Required fields are marked *

No Result
View All Result
SWR hubballi-railway-fire-safety-training-emergency
English Articles

Fire Safety Training Held for Railway Officials and Staff in Hubballi

by kalpa News
September 10, 2026
0

Kalpa Media House  |  Hubballi | A practical training programme on Fire Safety and Emergency Management was organised for railway...

Read moreDetails
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL