ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
ಅಪಘಾತಕ್ಕೊಳಗಾದ ಮಗ ಚಿಕಿತ್ಸೆಗೆ ಸ್ಪಂದಿಸದೆ ಕೈಬಿಟ್ಟು ಹೋಗುವುದು ಖಚಿತ ಎನ್ನುವಾಗ ಮಗನ ಬಹು ಅಂಗಾಂಗ ದಾನ #Donating multiple organs ಮಾಡುವ ಮೂಲಕ ಪೋಷಕರು ಆತನನ್ನು ಜೀವಂತವಾಗಿಟ್ಟಿದ್ದಾರೆ.
ಪಟ್ಟಣದ ಆನವಟ್ಟಿ ರಸ್ತೆ ನಿವಾಸಿ ಗಿರೀಶ್(16) ಫೆ.24ರಂದು ಹಿರೇಕೇರೂರು ಸಮೀಪ ತಾವರಗಿ ಗ್ರಾಮದ ಬಳಿ ನಡೆದ ಟ್ರಾಕ್ಟರ್, ಬೈಕ್ ಡಿಕ್ಕಿಯಲ್ಲಿ ತೀವ್ರ ಗಾಯಗೊಂಡು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ #KIMS Hospital ಚಿಕಿತ್ಸೆ ಪಡೆಯುತ್ತಿರುವಾಗ ಶುಕ್ರವಾರ ಮೃತಪಟ್ಟಿದ್ದಾರೆ.
ಹದಿಹರೆಯದ ಮಗನ ಸಾವಿನ ನೋವಿನಲ್ಲೂ ಆತನ ಕಿಡ್ನಿ, ಹೃದಯ, ಲೀವರ್, ಕಣ್ಣು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದು ಆತ ಮುಂದೆಯೂ ಜೀವಂತವನ್ನಾಗಿಸಿ ಮಾನವೀಯತೆ ಮೆರೆದಿದ್ದಾರೆ.
ಶನಿವಾರ ಬಾಲಕನ ಮೃತದೇಹ ಮೆರವಣಿಗೆ ನಡೆಸಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















