ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀಗಂಧ ಸಂಸ್ಥೆಯಿಂದ ವಿಷ್ಣು ಸಹಸ್ರನಾಮ ಗ್ಲೋಬಲ್ ಟ್ರಸ್ಟ್, ಬೆಂಗಳೂರು ಹಾಗೂ ಭಜನಾ ಪರಿಷತ್, ಶಿವಮೊಗ್ಗ ಇವರ ಸಹಯೋಗದಲ್ಲಿ ಮಾ.31ರ ಮಂಗಳವಾರ ಸಂಜೆ 4ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಹಾಗೂ ಬಾಳಗಾರು ಮಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀಪಾದರು ದಿವ್ಯಸಾನಿಧ್ಯ ವಹಿಸಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ವಿಷ್ಣು ಸಹಸ್ರನಾಮ ಗ್ಲೋಬಲ್ ಟ್ರಸ್ಟ್’ನ ಶಿವಮೊಗ್ಗ ಘಟಕದ ಅಧ್ಯಕ್ಷ ಜೋಯಿಸ್ ರಾಮಾಚಾರ್, ಜಿಪಂಮಾಜಿ ಸದಸ್ಯ ಹಾಗೂ ಶ್ರೀಗಂಧ ಸಂಸ್ಥೆಯ ಖಜಾಂಚಿ ಕೆ.ಈ. ಕಾಂತೇಶ್, ಭಜನಾ ಪರಿಷತ್ ಅಧ್ಯಕ್ಷ ಸಂದೇಶ್ ಉಪಾಧ್ಯ ಉಪಸ್ಥಿತರಿದ್ದು, ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಆಧ್ಯಾತ್ಮ ಮತ್ತು ಸಂಸ್ಕøತಿಯ ಪ್ರಸಾರಕ್ಕಾಗಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮಕ್ಕೆ ಭಜನಾ ಮಂಡಳಿಗಳ ಮಾತೆಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಆಸಕ್ತರು ಸೇರುವ ನಿರೀಕ್ಷೆ ಇದೆ. ಮಾ.13,14,15ರಂದು ಸಂಜೆ 4ಗಂಟೆಗೆ ಶುಭಮಂಗಳ ಸಮುದಾಯ ಭವನದಲ್ಲಿ ವಿಷ್ಣು ಸಹಸ್ರನಾಮ, ಕಲಿಕಾ ಶಿಬಿರ ನಡೆಯಲಿದೆ. ಅಲ್ಲಿ ಕಲಿತ ಮಾತೆಯರು ಮಾ.31ರ ಕಾರ್ಯಕ್ರಮದಲ್ಲಿ ಸಂಜೆ ವಿಷ್ಣುಸಹಸ್ರನಾಮ ಪಾರಾಯಣ #Vishnusahasranaama Parayana ಮಾಡಲಿದ್ದಾರೆ. ಸುಮಾರು 2000ಕ್ಕೂ ಹೆಚ್ಚು ಜನರಿಂದ ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ ಎಂದರು.
ವಿಷ್ಣು ಸಹಸ್ರನಾಮ ಯಾವುದೇ ಒಂದು ಸಮಾಜಕ್ಕೆ ಸೀಮಿತವಲ್ಲ, ಎಲ್ಲಾ ಸಮಾಜದವರು ಇದನ್ನು ಪಠಿಸಿ ನೆಮ್ಮದಿ ಪಡೆಯುತ್ತಿದ್ದಾರೆ. ಮೂರು ದಿನಗಳ ಕಲಿಕಾ ಶಿಬಿರದಲ್ಲಿ ಹೊಸಬರಿಗೆ ಅವಕಾಶವಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ 9886177311, 9964597654ರಲ್ಲಿ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೋಯಿಸ್ ರಾಮಾಚಾರ್, ಸಂದೇಶ್ ಉಪಾಧ್ಯ, ಉಮೇಶ್ ಆರಾಧ್ಯ, ಕೆ.ಈ. ಕುಮಾರಶಾಸ್ತ್ರಿ, ರಾಧಿಕಾ ರಾಮಾಚಾರ್, ಶ್ರೀಕಾಂತ್, ಅಚ್ಚುತ್‍ರಾವ್ ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















