ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಿ. ಮಣೂರ್ ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾ.14ರಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ದಾಸ ಪರಂಪರೆಯ ಆಯ್ದ ಶ್ರೇಷ್ಠ ಕೃತಿಗಳ ಗಾನೋತ್ಸವ, ಭಕ್ತಿ-ಭಾವ ಕುಸುಮಾಂಜಲಿ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶಿವಮೊಗ್ಗ ವಿನಯ್ ಹೇಳಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲಿಯುಗದಲ್ಲಿ ನಾಮ ಸಂಕೀರ್ತನೆಯೇ ಪರಮಪದಕ್ಕೆ ಸೋಪಾನವಾಗಿದ್ದು, ಈ ನಿಟ್ಟಿನಲ್ಲಿ ದಿ ಮಣೂರ್ ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್ ಅನೇಕ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಯುಗಾದಿಯ ಹೊಸವರ್ಷವನ್ನು ಸ್ವಾಗತಿಸುವ ಹಿನ್ನಲೆಯಲ್ಲಿ ಭಕ್ತಿ-ಭಾವ ಕುಸುಮಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪಂಡಿತ್ ಶಿವಕುಮಾರ್ ಜಿ. ಮಹಾಂತ ವಿನೂತನ ಭಕ್ತಿ ಸಂಗೀತವನ್ನು ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪಂಡಿತ್ ಉದಯ್‍ರಾಜ್ ಕರ್ಪೂರ ತಬಲಾದಲ್ಲಿ, ಶ್ರೀವಿಜಯ್ ಪಖಾವಜ್ ಮತ್ತು ಕಿರಣ್ ಪೈ ತಾಳದಲ್ಲಿ ಸಾಥ್ ನೀಡಲಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ವಿನಯ್ ಶಿವಮೊಗ್ಗ ನಿರ್ವಹಿಸಲಿದ್ದಾರೆ.
ಈ ಕಾರ್ಯಕ್ರಮ ಪ್ರವೇಶ ಉಚಿತವಾಗಿದ್ದು, ಈ ಸದಭಿರುಚಿಯ ಸಂಗೀತ ಕಾರ್ಯಕ್ರಮಕ್ಕೆ ನಗರದ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟಿನ ಮುಖ್ಯಸ್ಥರಾದ ಪಂಚತಾರ ಐಸ್‍ಕ್ರೀಮ್ಸ್ ಮಾಲೀಕರಾದ ಮಣೂರ್ ಪ್ರಕಾಶ್ ಪ್ರಭು ಹಾಗೂ ರೀತಾಪ್ರಭು ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















