ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದ ಶೇಷಾದ್ರಿ ಪುರಂ ನಿವಾಸಿ ಹಾಗೂ ವಿಐಎಸ್ ಎಲ್ ಆಸ್ಪತ್ರೆಯ ಪಾರ್ಮಸಿ ಅಧಿಕಾರಿಯಾಗಿ ನಿವೃತ್ತರಾಗಿದ್ದ ಎಂ. ಶಿವಮೂರ್ತಿ ಅವರು ನಿಧನಹೊಂದಿದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮೃತರು ಭದ್ರಾವತಿ ತಾಲ್ಲೂಕು ಅರಹತೊಳಲು ಮೂಲದವರಾಗಿದ್ದು, ಅವರು ಪತ್ನಿ, ಸಹೋದರಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಬಿಟ್ಟು ಅಗಲಿದ್ದಾರೆ.
ಅವರ ಓರ್ವ ಪುತ್ರಿ ಅಮೇರಿಕಾದಲ್ಲಿದ್ದು ಅವರು ಬಂದ ನಂತರ ಅರಹತೊಳಲಿನ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಮೂಲಗಳು ತಿಳಿಸಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















