ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಬೇಸಿಗೆ ರಜೆಯ #SummerHoliday ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಹುಬ್ಬಳ್ಳಿಯಿಂದ ತಮಿಳುನಾಡಿನ ರಾಮೇಶ್ವರಂಗೆ 9 ಟ್ರಿಪ್ ವಿಶೇಷ ರೈಲುಗಳು ಸಂಚಾರ ಘೋಷಣೆಯಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SouthWesternRailway ಮಾಹಿತಿ ನೀಡಿದ್ದು, ಬೇಸಿಗೆ ರಜೆಯ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಒಟ್ಟಾರೆಯಾಗಿ 9 ಟ್ರಿಪ್ ವಿಶೇಷ ರೈಲು ಸಂಚಾರ ನಡೆಸುವುದಾಗಿ ತಿಳಿಸಿದೆ. ವಿವರಗಳು ಹೀಗಿವೆ.
07355 ಸಂಖ್ಯೆಯ ಎಸ್’ಎಸ್’ಎಸ್ ಹುಬ್ಬಳ್ಳಿ-ರಾಮೇಶ್ವರಂ #Rameshwaram ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು ಏಪ್ರಿಲ್ 5, 12, 19, 26 ಹಾಗೂ ಮೇ 3, 10, 17, 24 ಮತ್ತು 31ರಂದು (ಭಾನುವಾರ) ಬೆಳಿಗ್ಗೆ 06:50ಕ್ಕೆ ಹುಬ್ಬಳ್ಳಿಯಿಂದ ಹೊರಟು, ಮರುದಿನ ಬೆಳಿಗ್ಗೆ 05:20ಕ್ಕೆ ರಾಮೇಶ್ವರಂ ತಲುಪಲಿದೆ.
ಮರು ಪ್ರಯಾಣದಲ್ಲಿ, 07356 ಸಂಖ್ಯೆಯ ರಾಮೇಶ್ವರಂ-ಎಸ್’ಎಸ್’ಎಸ್ ಹುಬ್ಬಳ್ಳಿ #Hubli ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು ಏಪ್ರಿಲ್ 6, 13, 20, 27 ಹಾಗೂ ಮೇ 4, 11, 18, 25 ಮತ್ತು ಜೂನ್ 1ರಂದು (ಸೋಮವಾರ) ರಾತ್ರಿ 08:00ಕ್ಕೆ ರಾಮೇಶ್ವರಂನಿಂದ ಹೊರಟು, ಮರುದಿನ ರಾತ್ರಿ 07:40ಕ್ಕೆ ಹುಬ್ಬಳ್ಳಿ ಆಗಮಿಸಲಿದೆ.
ಎಲ್ಲೆಲ್ಲಿ ನಿಲುಗಡೆ?
ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ಶ್ರೀ ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣ (ಹಾವೇರಿ), ರಾಣಿಬೆನ್ನೂರು, ಹರಿಹರ, ದಾವಣಗೆರೆ, #Davanagere ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಬಾಣಸವಾಡಿ, ಹೊಸೂರು, ಧರ್ಮಪುರಿ, ಸೇಲಂ, ನಾಮಕ್ಕಲ್, ಕರೂರು, ತಿರುಚ್ಚಿರಾಪಳ್ಳಿ, ಪುದುಕ್ಕೊಟ್ಟೈ, ಕಾರೈಕುಡಿ, ಶಿವಗಂಗಾ, ಮನಮಧುರೈ ಮತ್ತು ರಾಮನಾಥಪುರಂ #Ramanathapuram ನಿಲ್ದಾಣಗಳಲ್ಲಿ ನಿಲ್ಲಲಿವೆ.
ಯಾವೆಲ್ಲಾ ಬೋಗಿಗಳು ಇರಲಿವೆ?
ಈ ವಿಶೇಷ ರೈಲು ಒಂದು ಎಸಿ ಫಸ್ಟ್ ಕ್ಲಾಸ್, ಎರಡು ಎಸಿ ಟು ಟೈರ್, ಮೂರು ಎಸಿ ತ್ರೀ ಟೈರ್, ಆರು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ, ಒಂದು ಪ್ಯಾಂಟ್ರಿ ಕಾರ್, ಒಂದು ಜನರೇಟರ್-ಕಮ್-ಬ್ರೇಕ್ ವ್ಯಾನ್ ಮತ್ತು ಒಂದು ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್/ದಿವ್ಯಾಂಗ ಸ್ನೇಹಿ ಬೋಗಿಗಳನ್ನು ಹೊಂದಿರಲಿದೆ. ಈ ವಿಶೇಷ ರೈಲುಗಳ ಮುಂಗಡ ಕಾಯ್ದಿರಿಸುವಿಕೆ ಆರಂಭವಾಗಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















