ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಿಕಾರಿಪುರ ಪಟ್ಟಣದ ಗ್ರಾಮದೇವರೆಂದೇ ಪ್ರಸಿದ್ಧವಾಗಿರುವ ನಾಡಿನ ಉದ್ದಗಲಕ್ಕೂ ಅಪಾರ ಭಕ್ತರನ್ನೊಳಗೊಂಡಿರುವ ಹುಚ್ಚರಾಯಸ್ವಾಮಿಯ ಬ್ರಹ್ಮ ರಥೋತ್ಸವವು Huchcharayaswamy fair ಗುರುವಾರದ ಅತ್ಯಂತ ಸಂಭ್ರಮ ಸಡಗರದಿಂದ ಜರುಗಿತು.
ಬೆಳಗ್ಗೆ 7-05 ರಿಂದ 7-20ರವರೆಗೆ ನಿಗದಿತ ಸಮಯಕ್ಕೆ ಆರಂಭಗೊಂಡ ರಥೋತ್ಸವ ಅಪಾರ ಭಕ್ತರು ಹರ್ಷೋದ್ಘಾರದಿಂದ ಶ್ರೀ ಹುಚ್ಚರಾಯ ಸ್ವಾಮಿ ಗೋವಿಂದ ಗೋವಿಂದ ಶ್ರೀ ರಾಮ ಗೋವಿಂದ ಗೋವಿಂದ ಎಂದು ಘೋಷಣೆ ಕೂಗುತ್ತ ತಮ್ಮ ಭಕ್ತಿ ಸಮರ್ಪಿಸಿದರು.
ರಥೋತ್ಸವಕ್ಕೆ ಶ್ರೀಹರಿಯ ವಾಹನವಾಗಿ ಪುರಾಣಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಗುರುತಿಸಿಕೊಂಡ ಗರುಡ ಮೂರು ಪ್ರದಕ್ಷಿಣೆ ಮೂಲಕ ನೆರೆದಿದ್ದ ಭಕ್ತಾಧಿಗಳಿಗೆ ಅಚ್ಚರಿಯನ್ನು ಉಂಟು ಮಾಡಿತು! ಕಳೆದ ಹಲವು ವರ್ಷಗಳಿಂದ ಗರುಡ ಪ್ರದಕ್ಷಿಣೆ ಮೂಲಕ ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದು, ಈ ಬಾರಿ ಸಹ ಪುನರಾವರ್ತನೆಯಾಗಿದೆ.
ಸಾಂಪ್ರದಾಯಿಕ ರಥೋತ್ಸವದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ .ಬಿ.ವೈ. ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತಮ್ಮ ಕುಟುಂಬಸ್ಥರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಪಾಲ್ಗೊಂಡರೆ, ರಾಜ್ಯ ಕೃಷಿಕ್ ಸಮಾಜದ ಅಧ್ಯಕ್ಷ ನಗರದ ಮಹಾದೇವಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ನಾಗರಾಜಗೌಡ, ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ವಿವಿಧೆಡೆಯಿಂದ ಆಗಮಿಸಿದ ಅಪಾರ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















