ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿ ಕೆಎಫ್‍ಡಿ(ಮಂಗನ ಖಾಯಿಲೆ)ಗಾಗಿ Monkeypox ನಾಲ್ಕು ಜನರು ಬಲಿಯಾಗಿದ್ದಾರೆ. ಅದರಲ್ಲಿ ಹೊಸನಗರ-ಸಾಗರದಲ್ಲಿ ತಲಾ ಒಂದು, ತೀರ್ಥಹಳ್ಳಿಯಲ್ಲಿ ಇಬ್ಬರು ಸಾವು ಕಂಡಿದ್ದಾರೆ. ಈಗಾಗಲೇ ಆರೋಗ್ಯ ಸಚಿವರು, ಜಿಲ್ಲೆಗೆ ಭೇಟಿನೀಡಿ ಕೆಎಫ್‍ಡಿ ಬಗ್ಗೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಸಭೆಮಾಡಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಎಲ್ಲಾ ತಾಲ್ಲೂಕು ಗಳಲ್ಲಿಯೂ ತಹಶೀಲ್ದಾರ್ ಅಧ್ಯಕ್ಷತೆಯನ್ನು ಸಮನ್ವಯ ಸಮಿತಿಯನ್ನು ರಚಿಸಲಾಗಿದೆ ಎಂದು ಸಚಿವ ಮಧುಬಂಗಾರಪ್ಪ Minister Madhu Bangarappa ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗನ ಕಾಯಿಲೆ ಕುರಿತು ಜ್ವರ ಸಮೀಕ್ಷೆ ಮಾಡಲಾಗುತ್ತಿದೆ. ಮಂಗಗಳ ಅಸಹಜ ಸಾವಿನ ಬಗ್ಗೆಯೂ ಸಮೀಕ್ಷೆ ನಡೆಸಲಾಗುತ್ತದೆ. ಇದಕ್ಕೆ ಔಷಧಿ ಇಲ್ಲ. ಆದರೂ ಕೂಡ ಕಾಡಿಗೆ ಮತ್ತು ತೋಟಗಳಿಗೆ ತೆರಳುವವರಿಗೆ ಡೇಪಾ ತೈಲ ವಿತರಿಸಲಾಗಿದೆ. ಇದರ ಜೊತೆಗೆ ಜ್ವರ ಪರೀಕ್ಷೆಯನ್ನು ಕೂಡ ಜಿಲ್ಲಾದ್ಯಂತ ಮಾಡಲಾಗಿದೆ ಎಂದರು.
ಹೊಸನಗರ ತಾಲ್ಲೂಕಿನಲ್ಲಿ 1488 ರಕ್ತ ಮಾದರಿಯನ್ನ, ಸಾಗರ ತಾಲ್ಲೂಕಿನಲ್ಲಿ 2640, ತೀರ್ಥಹಳ್ಳಿಯಲ್ಲಿ 2451, ಶಿಕಾರಿಪುರದಲ್ಲಿ 266, ಭದ್ರಾವತಿಯಲ್ಲಿ 147, ಸೊರಬದಲ್ಲಿ 256, ಶಿವಮೊಗ್ಗ ತಾಲ್ಲೂಕಿನಲ್ಲಿ 110 ಪರೀಕ್ಷೆಯನ್ನು ಮಾಡಲಾಗಿದ್ದು, ಒಟ್ಟು 104 ಜನರಿಗೆ ಪಾಸಿಟಿವ್ ಎಂದು ಗೊತ್ತಾಗಿದೆ. 81 ಜನರು ಗುಣಮುಖರಾಗಿದ್ದಾರೆ. ಇನ್ನೂ 19ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ, ಸೊರಬ, ಭದ್ರಾವತಿ ತಾಲ್ಲೂಕುಗಳಲ್ಲಿ ಯಾರಿಗೂ ಪಾಸಿಟಿವ್ ಇಲ್ಲ ಎಂದು ವಿವರ ನೀಡಿದರು.
ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ 2023ರಲ್ಲಿಯೇ ಮೀಸಲಾತಿಗೆ ಒಪ್ಪಿಗೆ ಸಿಕ್ಕಿತ್ತು. ರಾಷ್ಟ್ರಪತಿಗಳ ಅಂಕಿತವಾಗಿತ್ತು. ಆದರೂ ಕೂಡ ಏಕೆ ಜಾರಿಗೆ ತರಲಿಲ್ಲ ? ಇದರ ಹಿಂದೆ ರಾಜಕೀಯ ಹಿತಾಸಕ್ತಿ ಇದೆ ಅಷ್ಟೇ ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್‍ಗೆ ಸಂಬಂಧಿಸಿದಂತೆ ಕಾಮಗಾರಿ ಕಾರ್ಯಗಳು ಚುರುಕಾಗಿವೆ. ಆಗಷ್ಟ್ ತಿಂಗಳೊಳಗೆ ಮುಗಿಯಲಿದ್ದು ಇಂಡಿಗೂ ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಸಂಚಾರ ಮುಂದುವರಿಸುವಂತೆ ರಾಜ್ಯ ಕೈಗಾರಿಕಾ ಸಚಿವರಿಗೆ ಮನವಿ ಮಾಡಿದ್ದೇನೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಜವಳಿ ಅಭಿವೃದ್ಧಿ ನಿಗಮದ ಕೆ.ಚೇತನ್‍ಗೌಡ, ಜಿಲ್ಲಾ ವಕ್ತಾರ ಜಿ.ಡಿ. ಮಂಜುನಾಥ್, ಪ್ರಮುಖರಾದ ಕಲಿಂಪಾಷಾ, ಶಿವಕುಮಾರ್, ಶಿವಣ್ಣ, ಸಿದ್ಧಪ್ಪ, ಗಿತೇಂದ್ರ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















