ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸನಾತನ ಸಂಸ್ಕೃತಿ ಮತ್ತು ಪರಂಪರೆಗೆ ಕಲ್ಪ ಡಿಜಿಟಲ್ ನ್ಯೂಸ್ Kalpa Digital News ಕೊಡುಗೆ ಅನನ್ಯವಾಗಿದೆ ಎಂದು ಹಿರಿಯ ವಿದ್ವಾಂಸರಾದ ಪಂಡಿತ ಹೇಮಂತ ಆಚಾರ್ಯ ಗುಡಿ ಹೇಳಿದರು.
ಮೈಸೂರಿನ ಶ್ರೀರಾಮಪುರದ ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರದ Shri Venkateshwara Dhyana Kendra ಎಂಟನೇ ವಾರ್ಷಿಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಕಲ್ಪ ಡಿಜಿಟಲ್ ನ್ಯೂಸ್ ವಿಶೇಷ ಲೇಖನವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ವೆಂಕಟೇಶ್ವರ ಧ್ಯಾನ ಕೇಂದ್ರದ ಎಂಟು ವರ್ಷಗಳ ಸಮಗ್ರ ಕ್ರಿಯಾಶೀಲ ಚಟುವಟಿಕೆಗಳನ್ನು ಒಂದೆಡೆ ಸಂಗ್ರಹಿಸಿ ಕಲ್ಪ ಡಿಜಿಟಲ್ ನ್ಯೂಸ್ ವಿಶೇಷ ಲೇಖನಮಾಲೆಯನ್ನು ಭಗವಂತನ ಸೇವೆಗೆ ಸಮರ್ಪಣೆ ಮಾಡಿದೆ. ಈ ಸಂಸ್ಥೆಯ ಸೇವಾ ಕಾರ್ಯಗಳು ಇನ್ನಷ್ಟು ಮತ್ತಷ್ಟು ವೃದ್ಧಿಯಾಗಿ ಸಮಾಜಕ್ಕೆ ಸಾತ್ವಿಕ ಸಂದೇಶಗಳನ್ನು ನೀಡುವಂತಾಗಲಿ ಎಂದು ಅವರು ಹಾರೈಸಿದರು.
ಹಿರಿಯ ಪಂಡಿತರಾದ ಬಾದರಾಯಣಚಾರ್ಯ, ದಾನಿಗಳಾದ ಎ ಎನ್. ರಮೇಶ್ ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















