ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮಂದಗೆರೆ ಮತ್ತು ಹೊಳೆನರಸೀಪುರ ರೈಲ್ವೆ ನಿಲ್ದಾಣಗಳ ನಡುವಿನ ಸೇತುವೆ ಕಾಮಗಾರಿಯ ಹಿನ್ನೆಲೆಯಲ್ಲಿ, ಲೈನ್ ಬ್ಲಾಕ್ ಹಾಗೂ ಪರ್ವ ಬ್ಲಾಕ್ ಇರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
Also Read>> ಕುವೆಂಪು ವಿವಿ ಕುಲಪತಿ ಕಚೇರಿ ಧ್ವಂಸ! ವಿದ್ಯಾರ್ಥಿ ವಿರೋಧಿ ನೀತಿಗೆ NSUI ಆಕ್ರೋಶ
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಈ ಕೆಳಕಂಡ ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಮೇ 4ರಂದು 56266 ಸಂಖ್ಯೆಯ #Mysore ಮೈಸೂರು – ಅರಸೀಕೆರೆ ಪ್ಯಾಸೆಂಜರ್, 56265 ಸಂಖ್ಯೆಯ #Arsikere ಅರಸೀಕೆರೆ – ಮೈಸೂರು ಪ್ಯಾಸೆಂಜರ್ ಹಾಗೂ 06269 ಸಂಖ್ಯೆಯ ಮೈಸೂರು – ಎಸ್’ಎಂವಿಟಿ ಬೆಂಗಳೂರು ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಇನ್ನು, ಮೇ 4 ರಂದು ಮೈಸೂರಿನಿಂದ ಹೊರಡುವ 16208 ಸಂಖ್ಯೆಯ ಮೈಸೂರು – ಯಶವಂತಪುರ ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ ಸುಮಾರು 150 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಎಪ್ರಿಲ್ 29ರ ಇಂದಿನಿಂದ ಮತ್ತು ಮೇ 6ರಂದು ಅರಸೀಕೆರೆ – ಮೈಸೂರು ಎಕ್ಸ್’ಪ್ರೆಸ್ (56265) ರೈಲು ಅರಸೀಕೆರೆಯಿಂದ ಹಾಗೂ ಮೈಸೂರು – ಎಸ್’ಎಂವಿಟಿ ಬೆಂಗಳೂರು ಪ್ಯಾಸೆಂಜರ್ (06269) ರೈಲು ಮೈಸೂರಿನಿಂದ ನಿಗದಿತ ಸಮಯಕ್ಕಿಂತ 150 ನಿಮಿಷ ತಡವಾಗಿ ಹೊರಡಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















