ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಗಳ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ ಪ್ರತಿಷ್ಠಿತ ಮಾನಸ ಟ್ರಸ್ಟ್’ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ #KateelAshokPaiCollege ಮೂವರ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಲಭಿಸಿದೆ.
2023-24ನೇ ಸಾಲಿನ ಸ್ನಾತಕೋತ್ತರ ಮನಃಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಕಾಲೇಜಿನ ಎಲ್. ಭೂಮಿಕಾ ಅವರಿಗೆ ಕುವೆಂಪು ವಿಶ್ವವಿದ್ಯಾಲಯ #KuvempuUniversity ಮಟ್ಟದ ರ‍್ಯಾಂಕ್ ಹಾಗೂ ವೈ.ಎಸ್. ಹರ್ಷಿತ ಅವರಿಗೆ ದ್ವಿತೀಯ ರ‍್ಯಾಂಕ್ ಲಭಿಸಿದೆ.
Also Read>> ಶ್ಯಾಮಪ್ರಸಾದ್ ಮುಖರ್ಜಿ ಹಾಕಿದ ಭದ್ರ ಬುನಾದಿಯೇ 21 ರಾಜ್ಯಗಳ NDA ಆಡಳಿತ | MLC ಡಾ.ಸರ್ಜಿ
ಇನ್ನು, ಕಾಲೇಜಿನ ಬಿಎಸ್’ಡಬ್ಲ್ಯು ವಿದ್ಯಾರ್ಥಿನಿ ಡಿ. ಪ್ರೀತಿ ಅವರಿಗೆ ಇದೇ ಸಾಲಿನ 4ನೇ ರ‍್ಯಾಂಕ್ ಲಭಿಸಿದೆ.
ಕುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವದಲ್ಲಿ ಈ ವಿದ್ಯಾರ್ಥಿನಿಯರು ಪ್ರಶಸ್ತಿ ಪತ್ರವನ್ನು ಪಡೆಯಲಿದ್ದಾರೆ.
ಮಾನಸ ಟ್ರಸ್ಟ್’ನ ನಿರ್ದೇಶಕಿ ಡಾ. ರಜನಿ ಎ. ಪೈ, ಶೈಕ್ಷಣಿಕ ನಿರ್ದೇಶಕರಾದ ಡಾ ಪ್ರೀತಿ ವಿ. ಶಾನ್‌ಭಾಗ್, ಡಾ. ವಾಮನ್ ಎಂ. ಶಾನ್‌ಭಾಗ್ ಹಾಗೂ ಡಾ. ರಾಜೇಂದ್ರ ಚೆನ್ನಿರವರು ಈ ಮೂವರು ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಪ್ರೊ. ರಾಮಚಂದ್ರ ಬಾಳಿಗ, ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅರ್ಚನಾ ಭಟ್ ಕೆ ಹಾಗೂ ಅಧ್ಯಾಪಕರೆಲ್ಲರೂ ವಿದ್ಯಾರ್ಥಿನಿಯರ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.
Also Read>> ತಮಿಳುನಾಡು ಚುನಾವಣೆಗೆ | ಡಿಎಂಕೆ ಪಕ್ಷಕ್ಕೆ ಹಿನ್ನಡೆ | ಸನ್ ನೆಟ್ವರ್ಕ್ ಷೇರುಗಳ ಕುಸಿತ
ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿಯವರು ಮಾತನಾಡಿ, 35ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಮನಃಶಾಸ್ತ್ರದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಭೂಮಿಕ ಹಾಗೂ ದ್ವಿತೀಯ ರ‍್ಯಾಂಕ್ ಪಡೆದ ಹರ್ಷಿತ ಇಬ್ಬರೂ ಹಾಗೂ ಬಿಎಸ್’ಡಬ್ಲ್ಯು ಪದವಿಯಲ್ಲಿ ಪ್ರೀತಿ ಅವರು ವಿಶ್ವವಿದ್ಯಾಲಯದ ಘಟಿಕೋತ್ಸವ ವೇದಿಕೆಯಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಸಂಸ್ಥೆಗೆ ಹೆಮ್ಮೆಯನ್ನು ತಂದಿದೆ ಎಂದರು.
ಈ ಪ್ರತಿಭಾನ್ವಿಯ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ಅಭಿನಂದಿಸಿ ಶುಭ ಹಾರೈಸಿದರು. ರ‍್ಯಾಂಕ್ ಪಡೆದ ವಿದ್ಯಾರ್ಥಿನಿಯರು ತಾವುಗಳು ರ‍್ಯಾಂಕ್ ಪಡೆದಿರುವುದಕ್ಕೆ ತನ್ನ ತಂದೆ-ತಾಯಿಯರ ಬೆಂಬಲ ಹಾಗೂ ಅಧ್ಯಾಪಕರ ಮಾರ್ಗದರ್ಶನ ಕಾರಣ ಎಂದು ತಿಳಿಸಿದರು.
ಈ ಕುರಿತು ಸಂತಸ ಹಂಚಿಕೊಂಡು ಮಾತನಾಡಿದ ವಿದ್ಯಾರ್ಥಿನಿ ಭೂಮಿಕಾ, ಸೈಕಾಲಜಿಸ್ಟ್ ಆಗುವ ಕನಸನ್ನು ತಾನು ಪ್ರೌಢಶಾಲಾ ವಿದ್ಯಾರ್ಥಿನಿಯಾಗಿದ್ದಾಗಲೇ ಕಂಡಿದ್ದೆ. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾನಸ ಸಂಸ್ಥೆಯ ಮೂಲಕ ದೊರಕುವ ಕ್ಲಿನಿಕಲ್ ಟ್ರೈನಿಂಗ್ ಸಂಶೋಧನಾ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಪ್ರಾರಂಭದಿಂದಲೂ ವಿಶ್ವವಿದ್ಯಾಲಯ ಮಟ್ಟದ ರ‍್ಯಾಂಕ್‌ಗಳನ್ನು ಗಳಿಸುತ್ತಿರುವುದು ಕಾಲೇಜಿನ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಒಂದು ಸಾಕ್ಷಿ ಎನ್ನಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















