No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Tuesday, October 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಮೂವರಿಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್ | ಹೆಸರು ಘೋಷಣೆ | ರಾಜ್ಯಪಾಲರ ಅನುಮೋದನೆ

ಮೇ 6ರಂದು ನಡೆಯುವ 35ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ

kalpa News by kalpa News
May 4, 2026
in ಶಿವಮೊಗ್ಗ
0
ಜಿಪಂ ಸಿಇಒ ಹೇಮಂತ್ ಕುಮಾರ್ ಅವರಿಗೆ ಕುವೆಂಪು ವಿವಿ ರಿಜಿಸ್ಟಾರ್ ಆಗಿ ಪ್ರಭಾರ ಜವಾಬ್ದಾರಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  |

ಖ್ಯಾತ ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರು ಲಿಂಗಪ್ಪ, ಹಿರಿಯ ರಂಗಕರ್ಮಿ ಮತ್ತು ನೀನಾಸಂ ನಿರ್ದೇಶಕ ಕೆ.ವಿ. ಅಕ್ಷರ ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್)‌ ನ ಮಾಜಿ ನಿರ್ದೇಶಕ ಪ್ರೊ.ಎಚ್.‌ಎ. ರಂಗನಾಥ್‌ ಅವರಿಗೆ ಕುವೆಂಪು ವಿ‍ಶ್ವವಿದ್ಯಾಲಯ #KuvempuUniversity ಮೇ 06 ರಂದು ನಡೆಯಲಿರುವ 35ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ (ಡಿ.ಲಿಟ್) ಪದವಿ ನೀಡಿ ಗೌರವಿಸಲಿದೆ.

ಈ ಬಗ್ಗೆ ರಾಜ್ಯಪಾಲರಿಂದ ಅಧಿಕೃತ ಅನುಮೋದನೆ ದೊರೆತಿದ್ದು, ರಾಜ್ಯದ ಮೂವರು ಸಾಧಕರಿಗೆ ಕುವೆಂಪು ವಿವಿ ಗೌರವ ಸಲ್ಲಿಸಲಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸೇವೆಗಾಗಿ ಕೋಣಂದೂರು ಲಿಂಗಪ್ಪ, ರಂಗಭೂಮಿಯ ಸೇವೆಗೆ ಕೆ.ವಿ. ಅಕ್ಷರ ಹಾಗೂ ಶಿಕ್ಷಣ ಕ್ಷೇತ್ರದ ಸೇವೆಗೆ ಪ್ರೊ.ಎಚ್.ಎ. ರಂಗನಾಥ್‌ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ.

Also Read>> ಶಿವಮೊಗ್ಗ | ಪ್ರತಿಷ್ಠಿತ ಕಟೀಲ್ ಅಶೋಕ್ ಪೈ ಕಾಲೇಜಿಗೆ ಮೂರು ರ‍್ಯಾಂಕ್ | ಹೆಮ್ಮೆಯ ವಿದ್ಯಾರ್ಥಿಗಳಿವರು

ಕೋಣಂದೂರು ಲಿಂಗಪ್ಪ
ಕೋಣಂದೂರು ಲಿಂಗಪ್ಪ #KonandurLingappa ಅವರು ಶಿವಮೊಗ್ಗ ಜಿಲ್ಲೆಯ ಕೋಣಂದೂರು ಗ್ರಾಮದಲ್ಲಿ ಶ್ರೀ ರಾಮಪ್ಪ-ಶ್ರೀಮತಿ ಗೌರಮ್ಮ ದಂಪತಿಗಳ ಮಡಿಲಲ್ಲಿ 1934 ಫೆಬ್ರವರಿ 24ರಂದು ಜನಿಸಿದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದವರು. ತೀರ್ಥಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಪ್ರೌಢಶಿಕ್ಷಣ ಪಡೆದವರು. ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ, ಬಿ.ಎಲ್. ಪದವಿಯನ್ನು ಬೆಂಗಳೂರಿನಲ್ಲಿ ಪಡೆದವರು.

ಬೆಂಗಳೂರು ಮಹಾನಗರ ಪಾಲಿಕೆಯ ಪ್ರೌಢಶಾಲೆ ಅಧ್ಯಾಪಕರಾಗಿ ವೃತ್ತಿ ಜೀವನವನ್ನು ಆರಂಭಿಸಿ ಬೆಂಗಳೂರು ನಗರದ ಮಲ್ಲೇಶ್ವರಂ, ಚಾಮರಾಜಪೇಟೆ ಮೊದಲಾದಕಡೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು.
1969 ರಿಂದ ಶಿವಮೊಗ್ಗದಲ್ಲಿ ವಕೀಲರಾಗಿ ಸೇವೆ ಆರಂಭಿಸಿದವರು. ಸಮಾಜವಾದಿ ಚಳುವಳಿಯ ಆರಂಭದಿಂದಲೇ ಸಕ್ರಿಯವಾಗಿ ಗುರುತಿಸಿ ಕೊಂಡವರು. ಜನತಾದಳದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ವಯಸ್ಕರ ಮಂಡಳಿ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವ ಲಿಂಗಪ್ಪನವರು ಕನ್ನಡ ಯುವಜನ ಸಭಾವನ್ನು ಸ್ಥಾಪಿಸಿ, ಸಂಚಾಲಕರಾಗಿ ಕನ್ನಡನಾಡು-ನುಡಿಯ ಸಂವರ್ಧನೆಗೆ ಚಳುವಳಿಗಳನ್ನು ರೂಪಿಸಿದವರು.

1972 ರಿಂದ 79 ರವರೆಗೆ ಕರ್ನಾಟಕ ವಿಧಾನಸಭೆ ಸದಸ್ಯರಾಗಿ, 1989ರಿಂದ 92ರವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಅನನ್ಯವಾದ ಸೇವೆಸಲ್ಲಿಸಿದವರು. ಕರ್ನಾಟಕ ನಾಮಕರಣಕ್ಕಾಗಿ ಹೋರಾಡಿದವರು. ”ಉಳುವವನೇ ಹೊಲದೊಡಯ” ಹೋರಾಟ ಆರಂಭಿಸಿದವರು. ಹಾವನೂರು ವರದಿ ಅನುಷ್ಠಾನಕ್ಕಾಗಿ ಶ್ರಮಿಸಿದವರು. ಕರ್ನಾಟಕ ಸಮಾಜವಾದಿ ಪಕ್ಷದ ಕಾರ್ಯದರ್ಶಿಯಾಗಿ, ಶಿವಮೊಗ್ಗ ಜಿಲ್ಲಾ ಜನತಾ ಪಕ್ಷದ ಕಾರ್ಯದರ್ಶಿಯಾಗಿ, ರಾಜ್ಯ ಸಮತಪಕ್ಷದ ಕಾರ್ಯದರ್ಶಿಯಾಗಿ ಅಪೂರ್ವವಾದ ಸೇವೆಸಲ್ಲಿಸಿದವರು.

“ದೀಪಹಚ್ಚಿರೋ” ಕವನಸಂಕಲನ ಸೇರಿದಂತೆ, ಒಳ್ಳೆಯಗಂಡ, ಆತ್ಮಹತ್ಯೆ, ಮಹಾನಾಯಕ ಬೋಸ್ ಸುಭಾಷ್ಚಂದ್ರ, ಪಾರ್ಲಿಮೆಂಟಿನಲ್ಲಿ ಪಟೇಲರು, ಶಾಸನಸಭೆಯಲ್ಲಿ ಶಾಂತವೇರಿ ಕೃತಿಗಳನ್ನು ರಚಿಸಿದವರು. ಸಾಹಿತ್ಯ ಸಮ್ಮೇಳನ ಅಧ್ಯಕ್ಷಗೌರವ, ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ಎಂ ಪಿ ಪ್ರಕಾಶಪ್ರಶಸ್ತಿ, ದೇವರಾಜ ಅರಸು ಪ್ರಶಸ್ತಿ, ಹಾಮಾ ನಾಯಕ ಪ್ರಶಸ್ತಿ ಭಾಜನರಾಗಿದ್ದಾರೆ.
ಡಾ.ಕೆ.ವಿ. ಅಕ್ಷರ
ಡಾ.ಕೆ.ವಿ. ಅಕ್ಷರ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೂಡು ಗ್ರಾಮದಲ್ಲಿನ ಶ್ರೀ ಕೆ ವಿ ಸುಬ್ಬಣ್ಣ ಹಾಗೂ ಶ್ರೀಮತಿ ಕೆ ವಿ ಶೈಲಜಾ ದಂಪತಿಗಳ ಮಗನಾಗಿ 1960 ಏಪ್ರಿಲ್ 24ರಂದು ಜನಿಸಿದರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಬಿ. ಎ. ಪದವಿಯನ್ನು ಸಾಗರದಲ್ಲಿ ವ್ಯಾಸಂಗ ಮಾಡಿದರು. ನಂತರ ಇವರು ನವದೆಹಲಿಯಲ್ಲಿ ರಾಷ್ಟೀಯ ನಾಟಕ ಶಾಲೆಯಲ್ಲಿ ಡಿಪ್ಲೊಮೊ ಪದವಿ ಪಡೆದರು. University of Leeds ನಲ್ಲಿ ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿವೇತನದ ನೆರವಿನಿಂದ ನಾಟಕ ಮತ್ತು ರಂಗಕಲೆಯಲ್ಲಿ ಎಂ.ಎ. ಪದವಿ ಪಡೆದರು.

ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಶ್ರೀಯುತರು ಕನ್ನಡ ರಂಗಭೂಮಿಗೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಕೆ.ವಿ. ಸುಬ್ಬಣ್ಣನವರ ಪುತ್ರರಾದ ಇವರು ‘ನೀನಾಸಂ’ ವಾತಾವರಣದಲ್ಲಿ ಬೆಳೆದು ಸಹಜವಾಗಿಯೇ ರಂಗಭೂಮಿಯಲ್ಲಿ ಆಸಕ್ತಿ ಬೆಳಸಿಕೊಂಡರು.

Also Read>> ತಮಿಳುನಾಡು ಚುನಾವಣೆಗೆ | ಡಿಎಂಕೆ ಪಕ್ಷಕ್ಕೆ ಹಿನ್ನಡೆ | ಸನ್ ನೆಟ್ವರ್ಕ್ ಷೇರುಗಳ ಕುಸಿತ

ಎಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿರುವ ಶ್ರೀಯುತರು ಸ್ವತಃ ಹಲವು ನಾಟಕಗಳನ್ನು ರಚಿಸಿದ್ದಾರೆ. ಪರಮಪದ ಸೋಪಾನಪಟ, ಸೇತುಬಂಧನ, ಚೂರಿಕಟ್ಟೆ, ಅರ್ಥಾತ್ ಕಲ್ಯಾಣಪುರ, ಸ್ವಯಂವರಲೋಕ, ಭಾರತಯಾತ್ರೆ, ಸಹ್ಯಾದ್ರಿಕಾಂಡ ಮೊದಲಾದ ಅವರ ನಾಟಕಗಳು ಗಮನಾರ್ಹವಾಗಿವೆ. ಕಳೆದು ನಾಲ್ಕುದಶಕಗಳಿಂದ ನೀನಾಸಂನಲ್ಲಿ ಅಧ್ಯಾಪನವನ್ನು ಹಾಗೂ ನಿರ್ದೇಶನವನ್ನು ಮಾಡುತ್ತಿದ್ದಾರೆ. ಸಂಶೋಧಕರಾಗಿ, ನಾಟಕಕಾರರಾಗಿ, ಅನುವಾದಕರಾಗಿ, ನಿರ್ದೇಶಕರರಾಗಿ, ಸಂಪಾದಕರರಾಗಿ ಮತ್ತು ಪ್ರಕಾಶಕರಾಗಿ ಅವರು ನಿರ್ವಹಿಸಿರುವ ಕಾರ್ಯಗಳು ಅಪೂರ್ವವಾದವುಗಳು.
ಪ್ರೊ.ಎಚ್.ಎ. ರಂಗನಾಥ್
ಹಾಸನ ಅಣ್ಣೀ ಗೌಡ ರಂಗನಾಥ್ (ಹೆಚ್. ಎ. ರಂಗನಾಥ್) ಅವರು 16 ಜೂನ್ 1945 ರಂದು ಶ್ರೀ ಹೆಚ್. ಬಿ. ಅಣ್ಣೀ ಗೌಡ ಮತ್ತು ಶ್ರೀಮತಿ ಭಾಗ್ಯಲಕ್ಷ್ಮಮ್ಮ ದಂಪತಿಗಳ ಮಡಿಲಲ್ಲಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮತ್ತು ಪ್ರೌಢಶಾಲೆಯಿಂದ ಡಾಕ್ಟರೇಟ್ ಪದವಿಯವರೆಗೆ ಮೈಸೂರಿನಲ್ಲಿ ಪೂರೈಸಿದರು. ಅವರು ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಹಾಗೂ ಜರ್ಮನಿ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಪೋಸ್ಟ್-ಡಾಕ್ಟರೇಟ್ ಸಂಶೋಧನೆಯನ್ನು ಪೂರೈಸಿದ್ದಾರೆ.

ಅವರು ತಳಿಶಾಸ್ತ್ರ ಮತ್ತು ವಿಕಾಸಶಾಸ್ತ್ರದ ಕ್ಷೇತ್ರದಲ್ಲಿ ಪ್ರತಿಷ್ಠಿತ ಪ್ರಾಧ್ಯಾಪಕರೆಂದು ಪ್ರಖ್ಯಾತರಾಗಿದ್ದಾರೆ. ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ, ನ್ಯಾಕ್ (NAAC) ನಿರ್ದೇಶಕರಾಗಿ, ಕರ್ನೂಲ್‌ನ IIIT ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ಮೈಸೂರು ವಿಶ್ವವಿದ್ಯಾಲಯದ ಜೀವಮಾನದ ಗೌರವಾನ್ವಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಬೆಂಗಳೂರಿನ ಐಐಎಸ್‌ಸಿ (IISc) ಮತ್ತು ಮಾನವ ತಳಿಶಾಸ್ತ್ರ ಕೇಂದ್ರದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

1975 ರಿಂದ ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಡಿಬಿಟಿ, ಡಿಎಸ್‌ಟಿ, ಇನ್ಸಾ (INSA), ಯುಜಿಸಿ ಮತ್ತು ಡಿಎಫ್‌ಜಿ (ಜರ್ಮನಿ) ಧನಸಹಾಯದೊಂದಿಗೆ “ಡ್ರೊಸೊಫಿಲಾ ಸ್ಟಾಕ್ ಸೆಂಟರ್” ಮತ್ತು “ಯೂನಿಟ್ ಆನ್ ಎವಲ್ಯೂಷನ್ ಅಂಡ್ ಜೆನೆಟಿಕ್ಸ್” ಅನ್ನು ಸ್ಥಾಪಿಸಿದರು. ಇದು ದೇಶದ ಎಲ್ಲಾ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿಯೇ ಮೊದಲನೆಯದಾಗಿದೆ. ಅವರು “ದಿ ಜರ್ನಲ್ ಆಫ್ ಜೆನೆಟಿಕ್ಸ್” ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.ಅವರು ಭಾರತ ಸರ್ಕಾರದ ವಿವಿಧ ಸಮಿತಿಗಳಾದ UGC-MHRD, ಯೋಜನಾ ಆಯೋಗ, DBT, DST, AICTE, NBA, QCI/NABET, CSR & TI ಗಳಲ್ಲಿ ಹಾಗೂ ರಾಜ್ಯ ಮತ್ತು ಕೇಂದ್ರ ವಿಶ್ವವಿದ್ಯಾಲಯಗಳ ಶಾಸನಬದ್ಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಜಪಾನಿನ IIST, UNU ನ ಸಲಹಾ ಮಂಡಳಿ ಮತ್ತು ಆಸ್ಟ್ರೇಲಿಯನ್ ಅಕ್ರೆಡಿಟೇಶನ್ ಕೌನ್ಸಿಲ್‌ನ JOQAR ಮಾನ್ಯತೆ ಗುಂಪಿನಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಶ್ರೀಯುತರು ಭಾರತದ ಎಲ್ಲಾ ವಿಜ್ಞಾನ ಅಕಾಡೆಮಿಗಳ ಫೆಲೋ (FASc., FNASc., FNA ಮತ್ತು FKSTA) ಗೌರವಕ್ಕೆ ಪಾತ್ರರಾಗಿದ್ದಾರೆ. ಅವರಿಗೆ ಇನ್ಸಾ ಯುವ ವಿಜ್ಞಾನಿ ಪದಕ (1979), ಆರ್ಯಭಟ ಪ್ರಶಸ್ತಿ (2008), ಸರ್ ಎಂ. ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ (2010), ಮತ್ತು ಸುಂದರ್ ಲಾಲ್ ಹೋರಾ ಪದಕ (2020) ಲಭಿಸಿವೆ. ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯವು ಅವರಿಗೆ “ಗೌರವ ಡಾಕ್ಟರೇಟ್” ನೀಡಿ ಗೌರವಿಸಿದೆ. ಅವರು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 102 ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ ಮತ್ತು ಅನೇಕ ಸಂಪಾದಕೀಯ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: Honorary DoctorateKannada News WebsiteKonandur LingappaKuvempu UniversityLatest News KannadaLocal NewsMalnad NewsShimogaShivamoggaShivamogga Newsಕುವೆಂಪು ವಿಶ್ವವಿದ್ಯಾಲಯಕೋಣಂದೂರು ಲಿಂಗಪ್ಪಗೌರವ ಡಾಕ್ಟರೇಟ್ಡಾ. ಕೆ.ವಿ. ಅಕ್ಷರನೀನಾಸಂಶಂಕರಘಟ್ಟಶಿವಮೊಗ್ಗಸಾಗರ
Share210Tweet131Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ | ಪ್ರತಿಷ್ಠಿತ ಕಟೀಲ್ ಅಶೋಕ್ ಪೈ ಕಾಲೇಜಿಗೆ ಮೂರು ರ‍್ಯಾಂಕ್ | ಹೆಮ್ಮೆಯ ವಿದ್ಯಾರ್ಥಿಗಳಿವರು

Next Post

Kotak Mahindra Bank Announces Results

kalpa News

kalpa News

Next Post
Kotak Mahindra Bank Announces Results

Kotak Mahindra Bank Announces Results

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL