ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಚುನಾವಣೆಯಲ್ಲಿ ಸೋತಿರುವ ಮಮತಾ ಬ್ಯಾನರ್ಜಿ #MamataBanarjee ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೇ ಇದ್ದರೆ ಅವರನ್ನು ವಜಾಗೊಳಿಸಿ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶರ್ಮಾ, ಬ್ಯಾನರ್ಜಿ ರಾಜೀನಾಮೆ ನೀಡದಿರುವ ನಿರ್ಧಾರವನ್ನು ನಿಭಾಯಿಸುವುದು ಸುಲಭ. ಅವರನ್ನು ವಜಾಗೊಳಿಸಿ ಎಂದಿದ್ದಾರೆ.
Also Read>> ಅಗ್ನಿವೀರ್, ಪ್ಯಾರಾ ಮಿಲಿಟರಿ, ಪೊಲೀಸ್ ನೇಮಕಾತಿ | ಸಿಗಂಧೂರಿನಲ್ಲಿ ಉಚಿತ ತರಬೇತಿ | ಎಲ್ಲರಿಗೂ ಅವಕಾಶ
ಪಶ್ಚಿಮ ಬಂಗಾಳ #WestBengal ಮಮತಾ ಬ್ಯಾನರ್ಜಿ ಅವರನ್ನು ಬಹಳಷ್ಟು ವರ್ಷಗಳಿಂದ ಸಹಿಸಿಕೊಂಡಿದೆ. ಇದನ್ನು ನೋಡಿದ ಜನ ಸಾಕಾಗಿ ಅವರನ್ನು ಸೋಲಿಸಿ, ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸೋತರೂ ರಾಜೀನಾಮೆ ನೀಡುವುದಿಲ್ಲ ಎಂದ ಅವರನ್ನು ವಜಾಗೊಳಿಸಿ ಎಂದಿದ್ದಾರೆ.
15 ವರ್ಷಗಳ ಸುದೀರ್ಘ ಆಡಳಿತದ ನಂತರ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ #AssemblyElection ಮಮತಾ ಬ್ಯಾನರ್ಜಿ ಹಾಗೂ ಅವರ ಪಕ್ಷ ಹೀನಾಯವಾಗಿ ಸೋತಿದೆ. ಇದೇ ವೇಳೆ ಬಂಗಳಾದ ಇತಿಹಾದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಭೂತಪೂರ್ವ ಜಯ ಗಳಿಸಿದೆ.
Also Read>> ಭದ್ರಾವತಿ | ಆರು ಪೌರ ಕಾರ್ಮಿಕರಿಗೆ ಮಧು ಲ್ಯಾಬ್ ವತಿಯಿಂದ ಸನ್ಮಾನ
ಆದರೆ, ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ ಮಮತಾ ಬ್ಯಾನರ್ಜಿ, ನಾನು ಸೋತಿಲ್ಲ, ಆದ್ದರಿಂದ ನಾನು ರಾಜಭವನಕ್ಕೆ ಹೋಗುವುದಿಲ್ಲ. ನಾನು ರಾಜೀನಾಮೆ ನೀಡುವುದಿಲ್ಲ ಎಂದು ಹೊಸ ವರಸೆ ತೆಗೆದಿದ್ದಾರೆ.
ಬ್ಯಾನರ್ಜಿಯವರ ಈ ಕ್ರಮವು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು #PresidentRule ಉರುಳಿಸುವ ಸಾಧ್ಯತೆಯಿದ್ದರೂ, ಗೆದ್ದ ಪಕ್ಷವು ಹಕ್ಕು ಮಂಡಿಸಿ ವಿಧಾನಸಭೆಯ ಅವಧಿ ಮುಗಿಯುವ ಮೊದಲು ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದರೆ ಇದು ಅಗತ್ಯವಿಲ್ಲ ಎಂದು ಹೇಳಲಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ 7 ರಂದು ಕೊನೆಗೊಳ್ಳುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















