ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜಾಗತಿಕ ಮಾರುಕಟ್ಟೆಯ ಸನ್ನಿವೇಶಗಳ ಪರಿಣಾಮ ರಾಜ್ಯದಲ್ಲಿ ಇಂಧನ ಕೊರತೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೆಟ್ರೋಲ್ ಬಂಕ್’ಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿದೆ.
ಈ ಕುರಿತಂತೆ ನಾಗರಿಕ ಹಾಗೂ ಆಹಾರ ಸರಬರಜು ಇಲಾಖೆಯ #Petrol ಪೆಟ್ರೋಲ್ ಮತ್ತು ಡೀಸೆಲ್ #Diesel ವಿತರಣೆಗೆ ಸಂಬಂಧಿಸಿದಂತೆ ನೂತನ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.
Also Read>> ತಾಯಿ ಜಗತ್ತಿನ ವಿಶೇಷ ಶಕ್ತಿ: ಕುಸುಮ ಋಗ್ವೇದಿ
ಏನಿದೆ ನಿಯಮಗಳು?
ಬಂಕ್’ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಕೇವಲ ವಾಹನಗಳ ಟ್ಯಾಂಕ್’ಗಳಿಗೆ #VehicleTank ಮಾತ್ರ ಪೂರೈಸಬೇಕು. ಸುರಕ್ಷತೆಯ ದೃಷ್ಟಿಯಿಂದ ಬಾಟಲಿಗಳು, ಕಾನ್’ಗಳು ಅಥವಾ ಇತರ ಯಾವುದೇ ಅನಧಿಕೃತ ಕಂಟೇನರ್’ಗಳಲ್ಲಿ ಇಂಧನ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕೃಷಿ ಚಟುವಟಿಕೆಗಳಿಗೆ ಹಾಗೂ ಜಲಚರ ಸಾಕಣೆಗೆ ಅಗತ್ಯವಿರುವ ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಅಧಿಕಾರಿಗಳು ಜಾಗ್ರತೆ ವಹಿಸಬೇಕು. ರೈತರ ಅಗತ್ಯತೆಗಳನ್ನು ಪರಿಶೀಲಿಸಿ ಸೂಕ್ತವಾಗಿ ಇಂಧನ ವಿತರಿಸುವುದನ್ನು ಖಚಿತಪಡಿಸಿಕೊಳ್ಳಬೇಕು.
Also Read>> ಪ್ರೀತಿಸಿ, ಓಡಿ ಹೋಗಿದ್ದು ತಮ್ಮ, ಆದರೆ ಅಣ್ಣನ ಅಪಹರಿಸಿ, ಮಾರಣಾಂತಿಕ ಹಲ್ಲೆ
ಪೆಟ್ರೋಲಿಯಂ ನಿಯಮಗಳು 2002ರ ಅನ್ವಯ, ಇಂಧನ ಕೇಂದ್ರಗಳು ವಾಹನಗಳ ಟ್ಯಾಂಕ್’ಗಳಿಗೆ ಅಥವಾ ಅಧಿಕೃತ ಕಂಟೇನರ್’ಗಳಿಗೆ ಮಾತ್ರ ಇಂಧನ ತುಂಬಿಸಬೇಕು. ಇದಕ್ಕೆ ಗರಿಷ್ಠ 200 ಲೀಟರ್’ಗಳ ಮಿತಿ ಹೇರಲಾಗಿದೆ.

https://www.facebook.com/share/v/1CewCbTYqR/
ರೀಟೇಲ್ ಔಟ್ಲೆಟ್’ಗಳು ದೊಡ್ಡ ಮಟ್ಟದಲ್ಲಿ ಪೂರೈಕೆ ಮಾಡುವಂತಿಲ್ಲ. ನೇರ ಮಾರಾಟದ ನಿಯಮದ ಅನ್ವಯವೇ ನಡೆಸಬೇಕಿದ್ದು, ಇದನ್ನು ಉಲ್ಲಂಘಿಸಿದರೆ ಪರವಾನಗಿಯೇ ರದ್ದು ಮಾಡುವ ಗಂಭೀರ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಇಲಾಖೆಯ ಈ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘಿಸುವ ಪೆಟ್ರೋಲ್ ಬಂಕ್’ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















