ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಸಕ್ರೆಬೈಲಿನ ಪ್ರಕೃತಿ ಫಿಶ್ ಹೊಟೇಲ್ Sakrebailu Prakruthi Fish Hotel ಮಾಲೀಕ ವಿಜಯ್ ಕುಮಾರ್ ಮಂಗಳವಾರ ಸಾವನಪ್ಪಿದ್ದಾರೆ.
ಸೋಮವಾರ ರಾತ್ರಿ ಶಿವಮೊಗ್ಗದಿಂದ ಸಕ್ರೆಬೈಲು ಕಡೆಗೆ ತೆರಳುವಾಗ ಅಪಘಾತ ಸಂಭವಿಸಿತ್ತು. ಅರಕೆರೆ ಬಳಿ ಅಪಘಾತವಾಗಿ ವಿಜಯ್ ಕುಮಾರ್ (42) ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಕೂಡಲೆ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಕಳೆದ ರಾತ್ರಿಯೆ ವಿಜಯ್ ಕುಮಾರ್ ಅವರನ್ನು ಮಣಿಪಾಲದ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿತ್ತು. ಮಂಗಳವಾರ ಮಧ್ಯಾಹ್ನದವರೆಗೆ ಚಿಕಿತ್ಸೆ ನಡೆಯಿತು. ಆದರೆ ಮಧ್ಯಾಹ್ನ ಚಿಕಿತ್ಸೆಗೆ ಸ್ಪಂದಿಸದೆ ವಿಜಯ್ ಕುಮಾರ್ ಕೊನೆಯುಸಿರೆಳೆದಿದ್ದಾರೆ. ವಿಜಯ್ ಕುಮಾರ್ ಅವರು ಸಕ್ರೆಬೈಲು ನಿವಾಸಿಯಾಗಿದ್ದಾರೆ.

Also read: ದೇಶದ ಬೊಕ್ಕಸ ಲೂಟಿ ಮಾಡಿದ ಕಾಂಗ್ರೆಸ್ಸಿಗರಿಗೆ ಮೋದಿಯವರ ಮಿತವ್ಯಯದ ಪಾಠ ಅರ್ಥವಾಗದು: ಶಾಸಕ ಚನ್ನಬಸಪ್ಪ
ಫಿಶ್ ಹೋಟೆಲ್ ಉದ್ಯಮದಲ್ಲಿ ಪರಿಣಿತರಾಗಿದ್ದ ವಿಜಯ್, ಸಕ್ರೆಬೈಲು ಆನೆ ಬಿಡಾರದ ಎದುರಿಗೆ ಪ್ರಕೃತಿ ಫಿಶ್ ಹೊಟೇಲ್ ಪ್ರಾರಂಭಿಸಿದ್ದರು. ಈ ಹೊಟೇಲ್ ಮೀನು ಊಟಕ್ಕೆ ಹೆಸರುವಾಸಿ. ಶಿವಮೊಗ್ಗವಷ್ಟೆ ಅಲ್ಲದೆ ಹೊರ ಜಿಲ್ಲೆಗಳಲ್ಲಿಯು ಸಕ್ರೆಬೈಲ್ ವಿಜಿ ಎಂದೇ ಫೇಮಸ್ ಆಗಿದ್ದರು.
ಆನೆ ಬಿಡಾರಕ್ಕೆ ಬರುತ್ತಿದ್ದ ಪ್ರವಾಸಿಗರು ಹಾಗೂ ಹಲವು ಸೆಲೆಬ್ರಿಟಿಗಳು ಕೂಡ ಪ್ರಕೃತಿ ಹೊಟೇಲ್‌ನ ಮೀನು ಸವಿದು ಹೋಗುತ್ತಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















