ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ಉತ್ತರಾದಿ ಮಠ #UttaradiMatha 33 ದಿನಗಳ ಕಾಲ ಆಯೋಜನೆ ಮಾಡಿರುವ ಅಧಿಕ ಜ್ಯೇಷ್ಠ ಮಾಸೋತ್ಸವದ #AdhikaJyeshtaMasa ಅಂಗವಾಗಿ ವಿಶೇಷ ಕಾರ್ಯಕ್ರಮ ಸರಣಿ ‘ಮೈಸೂರು ದಿಗ್ವಿಜಯ’ ಪ್ರಯುಕ್ತ ಗುರುವಾರ ಸಂಜೆ ಬೃಹತ್ ಧಾರ್ಮಿಕ ಮೆರವಣಿಗೆ ನೆರವೇರಿತು.
ವಿವಿಧ ಕಲಾತಂಡದ ಮೆರವಣಿಗೆ ಮೂಲಕ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ #SatyatmaThirthaSwamiji ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.
Also Read>> ನೀಟ್ ಯುಜಿ ಮರುಪರೀಕ್ಷೆಗೆ ದಿನಾಂಕ ಪ್ರಕಟ | ಯಾವತ್ತು? ಇಲ್ಲಿದೆ ಡೀಟೇಲ್ಸ್
ನಗರದ ಮಹಾರಾಜ ಕಾಲೇಜು ಮೈದಾನದಿಂದ ಚಾಮರಾಜ ಜೋಡಿ ರಸ್ತೆ ಮೂಲಕ ಸಾಗಿ ಅಗ್ರಹಾರದ ಧನ್ವಂತರಿ ಕ್ಷೇತ್ರ ಉತ್ತರಾದಿ ಮಠದವರೆಗೆ ಹಲವು ಕಲಾತಂಡಗಳೊಂದಿಗೆ ಪಲ್ಲಕ್ಕಿ ಸಹಿತ ಮೆರವಣಿಗೆ ಗಮನ ಸೆಳೆಯಿತು.
ಗಜರಾಜನ ಕಲಾಕೃತಿಯ ರಥದ ಮೇಲೆ #Ayodhya ಅಯೋಧ್ಯ ಬಾಲರಾಮ ವಿಗ್ರಹಕ್ಕೆ, ರಥದ ಮೇಲೆ ಶ್ರೀ ಸತ್ಯಪ್ರಮೋದ ತೀರ್ಥ ಸ್ವಾಮೀಜಿ ಪ್ರತಿಕೃತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ನಾದಸ್ವರ, ವೀರಗಾಸೆ, ಚಂಡೆ, ನಗಾರಿ, ಕೀಲು ಕುದುರೆ, ಬೊಂಬೆ ವೇಷ, ಕಂಸಾಳೆ ಹಾಗೂ ವಿವಿಧ ಭಜನಾ ಮಂಡಳಿಗಳ ಕಲಾ ಪ್ರದರ್ಶನ ಜನಮನ ರಂಜಿಸಿತು.
ಈ ಸಂದರ್ಭ ಶಾಸಕ ಟಿ.ಎಸ್. ಶ್ರೀವತ್ಸ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್‌ಕುಮಾರ್, ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಸತ್ಯನಾರಾಯಣ, ವಿಶ್ವ ಹಿಂದೂ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಕಾಮತ್, ಉತ್ತರಾದಿ ಮಠಮೈಸೂರು ಶಾಖೆ ವ್ಯವಸ್ಥಾಪಕ ಅನಿರುದ್ಧ ಆಚಾರ್ಯ ಪಾಂಡುರಂಗಿ ಇತರರು ಭಾಗವಹಿಸಿದ್ದರು. ವಿಪ್ರ ಸಮುದಾಯದ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿ ಭಕ್ತಿ ಭಾವ ಸಮರ್ಪಿಸಿದರು.
ಗಮನ ಸೆಳೆದ ಕೋಲಾಟ, ನೃತ್ಯ
ನೂರಾರು ಮಹಿಳೆಯರು ಮತ್ತು ಮಕ್ಕಳು ಮೆರವಣಿಗೆಯಲ್ಲಿ ಕೋಲಾಟ, ನೃತ್ಯ ಪ್ರದರ್ಶನ ಮಾಡಿ ಗಮನ ಸೆಳೆದರು.
ಪಂಡಿತರು ಮತ್ತು ವಿದ್ವಾಂಸರು ಮೈಸೂರು ಪೇಟ ಧರಿಸಿ ಪಾಲ್ಗೊಂಡಿದ್ದು, ಶ್ರೀ ಶ್ರೀ ಸತ್ಯಾತ್ಮ ತೀರ್ಥರು ಪಾರಂಪರಿಕ ವಿಂಟೇಜ್ ಕಾರಿನಲ್ಲಿ ಕುಳಿತು ಮೆರವಣಿಗೆ ಮಾರ್ಗದಲ್ಲಿ ಸಾಗಿದ್ದು ಜನಾಕರ್ಷಣೆಯಾಗಿತ್ತು.
ವಿಶೇಷ ಕಾರ್ಯಕ್ರಮ
ಅಧಿಕ ಮಾಸೋತ್ಸವ ಅಂಗವಾಗಿ ಸೋಮವಾರದಿಂದ 33ದಿನಗಳ ಕಾಲ ಅಗ್ರಹಾರದ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಬೆಳಗ್ಗೆ ವಿವಿಧ ಹೋಮ, ಶ್ರೀಗಳಿಗೆ ಪಾದಪೂಜೆ, ಭಕ್ತರಿಗೆ ಶ್ರೀಗಳಿಂದ ಮುದ್ರಾಧಾರಣೆ, ಶ್ರೀಗಳಿಂದ ಸಂಸ್ಥಾನ ಪೂಜೆ, ಯತಿದ್ವಯರ ವೃಂದಾವನಗಳಿಗೆ ಪೂಜೆ, ಸಂಜೆ ಕಾಶಿವಿಶ್ವನಾಥ ದೇಗುಲ ಆವರಣದಲ್ಲಿ ಭಜನೆ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮ, ಪಂಡಿತರಿಂದ ಉಪನ್ಯಾಸ ನಂತರ ಶ್ರೀ ಸತ್ಯಾತ್ಮತೀರ್ಥರಿಂದ ಅನುಗ್ರಹ ಸಂದೇಶವಿದೆ.
ವಿಘ್ನ ನಿವಾರಣೆಗೆ ಜ್ಞಾನ ಕಾರ್ಯಗಳೇ ಪ್ರಧಾನವಾಗಿರಲಿ
ಜೀವನದಲ್ಲಿ ಎದುರಾಗುವ ಸಕಲ ವಿಘ್ನಗಳಿಂದ ಪಾರಾಗಲು ಜ್ಞಾನ ಕಾರ್ಯಗಳೇ ಪರಿಹಾರ ಎಂದು ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.
ಅಗ್ರಹಾರದ ಕಾಶಿ ವಿಶ್ವನಾಥ ದೇಗುಲ ಆವರಣದ (ಶ್ರೀ ಸತ್ಯ ಸಂಕಲ್ಪನಗರ) ಬೃಹತ್ ವೇದಿಕೆಯಲ್ಲಿ ಅನುಗ್ರಹ ಸಂದೇಶ ನೀಡಿದ ಅವರು, ಪುಣ್ಯ ಸಂಪಾದನೆಗೆ ಅಧಿಕ ಜ್ಯೇಷ್ಠ ಮಾಸ ಪ್ರಶಸ್ತ ಕಾಲವಾಗಿದೆ ಎಂದರು.
ಭಗವಂತ ಶ್ರೇಷ್ಠವಾದ ಮಾನವ ಜನ್ಮ ನೀಡಿದ್ದಾನೆ. ಸುಂದರವಾದ ವಿಶ್ವವನ್ನೇ ನಮಗೆ ಉಚಿತ ಕೊಡುಗೆಯಾಗಿ ನೀಡಿದ್ದಾನೆ. ಕೃಪಾ ಸಾಗರನಾದ ವಿಶ್ವೇಶ್ವರನ ಕಾರುಣ್ಯ ಅರಿತುಕೊಂಡು ಸತ್ಕಾರ್ಯಗಳನ್ನು ಮಾಡಿ. ಇದಕ್ಕಾಗಿ ಪರಮ ಗುರುಗಳ ಮೂಲಕ ನಮಗೆ ದೇವರು ಕೃಪೆ ಮಾಡಲಿ ಎಂದು ಪ್ರಾರ್ಥಿಸೋಣ. 33 ದಿನವೂ ಗರಿಷ್ಠವಾಗಿ ಸತ್ಕಾರ್ಯ ಮಾಡಲು ಸಂಕಲ್ಪ ಮಾಡೋಣ ಎಂದು ಸಂದೇಶ ನೀಡಿದರು.
Also Read>> 4 ವರ್ಷದ ಬಳಿಕ ತೈಲ ಕಂಪನಿಗಳಿಂದ ದರ ಪರಿಷ್ಕರಣೆ | ಪೆಟ್ರೋಲ್, ಡೀಸೆಲ್ ಬೆಲೆ 3 ರೂ. ಏರಿಕೆ
ಶ್ರೀ ಜಯತೀರ್ಥ ವಿದ್ಯಾಪೀಠದ ಕುಲಪತಿ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ವಿದ್ವಾಂಸರಾದ ಪ್ರಹ್ಲಾದಾಚಾರ್ಯ ಗಲಗಲಿ, ಪುರುಷೋತ್ತಮಾಚಾರ್ಯ, ಗೋವಿಂದಾಚಾರ್ಯ ಪಾಂಡುರಂಗಿ, ಬಾದರಾಯಣ ಆಚಾರ್ಯ, ಪುರಾಣಿಕ ರಾಮಾಚಾರ್ಯ, ಆದ್ಯ ಗೋವಿಂದಾಚಾರ್ಯ, ಹರೀಶ ಆಚಾರ್ಯ, ಸಂಶೋಧಕ ಕೊರ‌್ಲಹಳ್ಳಿ ಶ್ರೀನಿವಾಸಾಚಾರ್ಯ, ಕಲಾವಿದ ವ್ಯಾಸತೀರ್ಥಾಚಾರ್ಯ ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

ದೇಶದಲ್ಲೇ ಮೊದಲು | ಸ್ಥಳೀಯ ತಂತ್ರಜ್ಞಾನ ಆಧಾರಿತ ಸೆಮಿ ಹೈಸ್ಪೀಡ್ ರೈಲ್ವೆ ಯೋಜನೆಗೆ ಕೇಂದ್ರ ಅಸ್ತು


















