No Result
View All Result
Hubballi railway Station Swacchata Pakhwada
English Articles

Hubballi Division : Swachhata Hi Seva and Swachhata Pakhwada–2026 Launched in

by kalpa News
September 18, 2026
0

Kalpa Media House  |  Hubballi   | The ‘Swachhata Hi Seva’ and ‘Swachhata Pakhwada–2026’ campaigns were launched today at SSS Hubballi...

Read moreDetails
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
  • Advertise With Us
  • Grievances
  • About Us
  • Contact Us
Friday, September 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಅಧಿಕ ಜ್ಯೇಷ್ಠ ಮಾಸೋತ್ಸವದ | ಸತ್ಯಾತ್ಮ ತೀರ್ಥರ ಮೈಸೂರು ದಿಗ್ವಿಜಯ | ಭವ್ಯ ಸ್ವಾಗತ

ವಿಘ್ನ ನಿವಾರಣೆಗೆ ಜ್ಞಾನ ಕಾರ್ಯಗಳೇ ಪ್ರಧಾನವಾಗಿರಲಿ | ಸತ್ಯಾತ್ಮ ಶ್ರೀ ಅಭಿಮತ

kalpa News by kalpa News
May 15, 2026
in ಮೈಸೂರು
1
ಅಧಿಕ ಜ್ಯೇಷ್ಠ ಮಾಸೋತ್ಸವದ | ಸತ್ಯಾತ್ಮ ತೀರ್ಥರ ಮೈಸೂರು ದಿಗ್ವಿಜಯ | ಭವ್ಯ ಸ್ವಾಗತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ನಗರದ ಉತ್ತರಾದಿ ಮಠ #UttaradiMatha 33 ದಿನಗಳ ಕಾಲ ಆಯೋಜನೆ ಮಾಡಿರುವ ಅಧಿಕ ಜ್ಯೇಷ್ಠ ಮಾಸೋತ್ಸವದ #AdhikaJyeshtaMasa ಅಂಗವಾಗಿ ವಿಶೇಷ ಕಾರ್ಯಕ್ರಮ ಸರಣಿ ‘ಮೈಸೂರು ದಿಗ್ವಿಜಯ’ ಪ್ರಯುಕ್ತ ಗುರುವಾರ ಸಂಜೆ ಬೃಹತ್ ಧಾರ್ಮಿಕ ಮೆರವಣಿಗೆ ನೆರವೇರಿತು.

ವಿವಿಧ ಕಲಾತಂಡದ ಮೆರವಣಿಗೆ ಮೂಲಕ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ #SatyatmaThirthaSwamiji ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.

Also Read>> ನೀಟ್ ಯುಜಿ ಮರುಪರೀಕ್ಷೆಗೆ ದಿನಾಂಕ ಪ್ರಕಟ | ಯಾವತ್ತು? ಇಲ್ಲಿದೆ ಡೀಟೇಲ್ಸ್

ನಗರದ ಮಹಾರಾಜ ಕಾಲೇಜು ಮೈದಾನದಿಂದ ಚಾಮರಾಜ ಜೋಡಿ ರಸ್ತೆ ಮೂಲಕ ಸಾಗಿ ಅಗ್ರಹಾರದ ಧನ್ವಂತರಿ ಕ್ಷೇತ್ರ ಉತ್ತರಾದಿ ಮಠದವರೆಗೆ ಹಲವು ಕಲಾತಂಡಗಳೊಂದಿಗೆ ಪಲ್ಲಕ್ಕಿ ಸಹಿತ ಮೆರವಣಿಗೆ ಗಮನ ಸೆಳೆಯಿತು.

ಗಜರಾಜನ ಕಲಾಕೃತಿಯ ರಥದ ಮೇಲೆ #Ayodhya ಅಯೋಧ್ಯ ಬಾಲರಾಮ ವಿಗ್ರಹಕ್ಕೆ, ರಥದ ಮೇಲೆ ಶ್ರೀ ಸತ್ಯಪ್ರಮೋದ ತೀರ್ಥ ಸ್ವಾಮೀಜಿ ಪ್ರತಿಕೃತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ನಾದಸ್ವರ, ವೀರಗಾಸೆ, ಚಂಡೆ, ನಗಾರಿ, ಕೀಲು ಕುದುರೆ, ಬೊಂಬೆ ವೇಷ, ಕಂಸಾಳೆ ಹಾಗೂ ವಿವಿಧ ಭಜನಾ ಮಂಡಳಿಗಳ ಕಲಾ ಪ್ರದರ್ಶನ ಜನಮನ ರಂಜಿಸಿತು. ಈ ಸಂದರ್ಭ ಶಾಸಕ ಟಿ.ಎಸ್. ಶ್ರೀವತ್ಸ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್‌ಕುಮಾರ್, ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಸತ್ಯನಾರಾಯಣ, ವಿಶ್ವ ಹಿಂದೂ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಕಾಮತ್, ಉತ್ತರಾದಿ ಮಠಮೈಸೂರು ಶಾಖೆ ವ್ಯವಸ್ಥಾಪಕ ಅನಿರುದ್ಧ ಆಚಾರ್ಯ ಪಾಂಡುರಂಗಿ ಇತರರು ಭಾಗವಹಿಸಿದ್ದರು. ವಿಪ್ರ ಸಮುದಾಯದ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿ ಭಕ್ತಿ ಭಾವ ಸಮರ್ಪಿಸಿದರು.

ಗಮನ ಸೆಳೆದ ಕೋಲಾಟ, ನೃತ್ಯ
ನೂರಾರು ಮಹಿಳೆಯರು ಮತ್ತು ಮಕ್ಕಳು ಮೆರವಣಿಗೆಯಲ್ಲಿ ಕೋಲಾಟ, ನೃತ್ಯ ಪ್ರದರ್ಶನ ಮಾಡಿ ಗಮನ ಸೆಳೆದರು.ಪಂಡಿತರು ಮತ್ತು ವಿದ್ವಾಂಸರು ಮೈಸೂರು ಪೇಟ ಧರಿಸಿ ಪಾಲ್ಗೊಂಡಿದ್ದು, ಶ್ರೀ ಶ್ರೀ ಸತ್ಯಾತ್ಮ ತೀರ್ಥರು ಪಾರಂಪರಿಕ ವಿಂಟೇಜ್ ಕಾರಿನಲ್ಲಿ ಕುಳಿತು ಮೆರವಣಿಗೆ ಮಾರ್ಗದಲ್ಲಿ ಸಾಗಿದ್ದು ಜನಾಕರ್ಷಣೆಯಾಗಿತ್ತು.

ವಿಶೇಷ ಕಾರ್ಯಕ್ರಮ
ಅಧಿಕ ಮಾಸೋತ್ಸವ ಅಂಗವಾಗಿ ಸೋಮವಾರದಿಂದ 33ದಿನಗಳ ಕಾಲ ಅಗ್ರಹಾರದ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಬೆಳಗ್ಗೆ ವಿವಿಧ ಹೋಮ, ಶ್ರೀಗಳಿಗೆ ಪಾದಪೂಜೆ, ಭಕ್ತರಿಗೆ ಶ್ರೀಗಳಿಂದ ಮುದ್ರಾಧಾರಣೆ, ಶ್ರೀಗಳಿಂದ ಸಂಸ್ಥಾನ ಪೂಜೆ, ಯತಿದ್ವಯರ ವೃಂದಾವನಗಳಿಗೆ ಪೂಜೆ, ಸಂಜೆ ಕಾಶಿವಿಶ್ವನಾಥ ದೇಗುಲ ಆವರಣದಲ್ಲಿ ಭಜನೆ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮ, ಪಂಡಿತರಿಂದ ಉಪನ್ಯಾಸ ನಂತರ ಶ್ರೀ ಸತ್ಯಾತ್ಮತೀರ್ಥರಿಂದ ಅನುಗ್ರಹ ಸಂದೇಶವಿದೆ.ವಿಘ್ನ ನಿವಾರಣೆಗೆ ಜ್ಞಾನ ಕಾರ್ಯಗಳೇ ಪ್ರಧಾನವಾಗಿರಲಿ
ಜೀವನದಲ್ಲಿ ಎದುರಾಗುವ ಸಕಲ ವಿಘ್ನಗಳಿಂದ ಪಾರಾಗಲು ಜ್ಞಾನ ಕಾರ್ಯಗಳೇ ಪರಿಹಾರ ಎಂದು ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.

ಅಗ್ರಹಾರದ ಕಾಶಿ ವಿಶ್ವನಾಥ ದೇಗುಲ ಆವರಣದ (ಶ್ರೀ ಸತ್ಯ ಸಂಕಲ್ಪನಗರ) ಬೃಹತ್ ವೇದಿಕೆಯಲ್ಲಿ ಅನುಗ್ರಹ ಸಂದೇಶ ನೀಡಿದ ಅವರು, ಪುಣ್ಯ ಸಂಪಾದನೆಗೆ ಅಧಿಕ ಜ್ಯೇಷ್ಠ ಮಾಸ ಪ್ರಶಸ್ತ ಕಾಲವಾಗಿದೆ ಎಂದರು.ಭಗವಂತ ಶ್ರೇಷ್ಠವಾದ ಮಾನವ ಜನ್ಮ ನೀಡಿದ್ದಾನೆ. ಸುಂದರವಾದ ವಿಶ್ವವನ್ನೇ ನಮಗೆ ಉಚಿತ ಕೊಡುಗೆಯಾಗಿ ನೀಡಿದ್ದಾನೆ. ಕೃಪಾ ಸಾಗರನಾದ ವಿಶ್ವೇಶ್ವರನ ಕಾರುಣ್ಯ ಅರಿತುಕೊಂಡು ಸತ್ಕಾರ್ಯಗಳನ್ನು ಮಾಡಿ. ಇದಕ್ಕಾಗಿ ಪರಮ ಗುರುಗಳ ಮೂಲಕ ನಮಗೆ ದೇವರು ಕೃಪೆ ಮಾಡಲಿ ಎಂದು ಪ್ರಾರ್ಥಿಸೋಣ. 33 ದಿನವೂ ಗರಿಷ್ಠವಾಗಿ ಸತ್ಕಾರ್ಯ ಮಾಡಲು ಸಂಕಲ್ಪ ಮಾಡೋಣ ಎಂದು ಸಂದೇಶ ನೀಡಿದರು.

Also Read>> 4 ವರ್ಷದ ಬಳಿಕ ತೈಲ ಕಂಪನಿಗಳಿಂದ ದರ ಪರಿಷ್ಕರಣೆ | ಪೆಟ್ರೋಲ್, ಡೀಸೆಲ್ ಬೆಲೆ 3 ರೂ. ಏರಿಕೆ

ಶ್ರೀ ಜಯತೀರ್ಥ ವಿದ್ಯಾಪೀಠದ ಕುಲಪತಿ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ವಿದ್ವಾಂಸರಾದ ಪ್ರಹ್ಲಾದಾಚಾರ್ಯ ಗಲಗಲಿ, ಪುರುಷೋತ್ತಮಾಚಾರ್ಯ, ಗೋವಿಂದಾಚಾರ್ಯ ಪಾಂಡುರಂಗಿ, ಬಾದರಾಯಣ ಆಚಾರ್ಯ, ಪುರಾಣಿಕ ರಾಮಾಚಾರ್ಯ, ಆದ್ಯ ಗೋವಿಂದಾಚಾರ್ಯ, ಹರೀಶ ಆಚಾರ್ಯ, ಸಂಶೋಧಕ ಕೊರ‌್ಲಹಳ್ಳಿ ಶ್ರೀನಿವಾಸಾಚಾರ್ಯ, ಕಲಾವಿದ ವ್ಯಾಸತೀರ್ಥಾಚಾರ್ಯ ಇತರರು ಹಾಜರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

ದೇಶದಲ್ಲೇ ಮೊದಲು | ಸ್ಥಳೀಯ ತಂತ್ರಜ್ಞಾನ ಆಧಾರಿತ ಸೆಮಿ ಹೈಸ್ಪೀಡ್ ರೈಲ್ವೆ ಯೋಜನೆಗೆ ಕೇಂದ್ರ ಅಸ್ತು

Tags: AgraharaKannada News WebsiteLatest News KannadamysoreSri Satyatma Thirtha SwamijiUttaradi Mathaಅಗ್ರಹಾರಅಧಿಕ ಜ್ಯೇಷ್ಠ ಮಾಸೋತ್ಸವಅಯೋಧ್ಯ ಬಾಲರಾಮಉತ್ತರಾದಿ ಮಠಕಾಶಿ ವಿಶ್ವನಾಥ ದೇಗುಲಧನ್ವಂತರಿ ಕ್ಷೇತ್ರಮಹಾರಾಜ ಕಾಲೇಜುಮೈಸೂರುಶ್ರೀ ಜಯತೀರ್ಥ ವಿದ್ಯಾಪೀಠಶ್ರೀ ಸತ್ಯಪ್ರಮೋದ ತೀರ್ಥ ಸ್ವಾಮೀಜಿಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ
Share200Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

ನೀಟ್ ಯುಜಿ ಮರುಪರೀಕ್ಷೆಗೆ ದಿನಾಂಕ ಪ್ರಕಟ | ಯಾವತ್ತು? ಇಲ್ಲಿದೆ ಡೀಟೇಲ್ಸ್

Next Post

ನಟ ದರ್ಶನ್’ಗೆ ಬಿಗ್ ಸೆಟ್ ಬ್ಯಾಕ್ | ಇನ್ನೊಂದು ವರ್ಷ ಜೈಲೇ ಫಿಕ್ಸ್ | ಕಾರಣವೇನು?

kalpa News

kalpa News

Next Post
Renukaswamy Murder Case: Pradosh Becomes Approver, Legal Trouble for Darshan

ನಟ ದರ್ಶನ್'ಗೆ ಬಿಗ್ ಸೆಟ್ ಬ್ಯಾಕ್ | ಇನ್ನೊಂದು ವರ್ಷ ಜೈಲೇ ಫಿಕ್ಸ್ | ಕಾರಣವೇನು?

Comments 1

  1. Pingback: ನಟ ದರ್ಶನ್'ಗೆ ಬಿಗ್ ಸೆಟ್ ಬ್ಯಾಕ್ | ಇನ್ನೊಂದು ವರ್ಷ ಜೈಲೇ ಫಿಕ್ಸ್ | ಕಾರಣವೇನು? » kalpa.news

Leave a Reply Cancel reply

Your email address will not be published. Required fields are marked *

No Result
View All Result
Hubballi railway Station Swacchata Pakhwada
English Articles

Hubballi Division : Swachhata Hi Seva and Swachhata Pakhwada–2026 Launched in

by kalpa News
September 18, 2026
0

Kalpa Media House  |  Hubballi   | The ‘Swachhata Hi Seva’ and ‘Swachhata Pakhwada–2026’ campaigns were launched today at SSS Hubballi...

Read moreDetails
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL