ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ DCM DK Shivakumar ಅವರ 65ನೇ ಹುಟ್ಟುಹಬ್ಬದ ಅಂಗವಾಗಿ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ನಾಟಿ ಕೋಳಿಯಿಂದ ತಯಾರಿಸಿದ ಆಹಾರವನ್ನು ವಿತರಣೆ ಮಾಡಲಾಗಿದೆ.
ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಭೂತರಾಯನ ಆವರಣದಲ್ಲಿ ಕಾಂಗ್ರೆಸ್ ವತಿಯಿಂದ ವಿಶೇಷ ಪೂಜೆ ಮಾಡಿಸಿ, ಸಾರ್ವಜನಿಕರಿಗೆ ನಾಟಿಕೋಳಿ ನೈವೇದ್ಯವನ್ನು ವಿತರಿಸಲಾಗಿದೆ.
ಇಂದು ಮುಂಜಾನೆ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, 101 ನಾಟಿ ಕೋಳಿ ನೈವೇದ್ಯ ಮಾಡಿಸಿ, ಸುಮಾರು ಒಂದು ಸಾವಿರ ಜನರಿಗೆ ಆಹಾರ ವಿತರಿಸಲಾಯಿತು.
Also read: ಹುಬ್ಬಳ್ಳಿ– ಯೋಗ ನಗರಿ ಋಷಿಕೇಶ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆ ಕಾಯಂ
ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ರಾಜ್ಯದಲ್ಲಿ ಬಿಸಿಲು ಹೆಚ್ಚಾಗಿದೆ. ಹೀಗಾಗಿ, ಮಳೆಯಾಗಿ, ಧರೆ ತಂಪಾಗಲಿ ಎಂದು ಡಿ.ಕೆ. ಶಿವಕುಮಾರ್ ಅವರು ಶೃಂಗೇರಿಯಲ್ಲಿ ಹಿಂದೆ ಪೂಜೆ ಮಾಡಿಸಿದ್ದರು. ಒಂದು ವಾರದಲ್ಲಿ ಮಳೆಯಾಗಿತ್ತು. ಇಂತಹ ದೈವಭಕ್ತರಾದ ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಆಶಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















