ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ Shri Raghavendraswamy Mutt ಅಧಿಕ ಮಾಸದ ಪ್ರಯುಕ್ತ ಮೇ 17 ರಿಂದ ಜೂನ್ 14ರ ವರೆಗೆ ಪ್ರತಿದಿನ ಸಂಜೆ 6-00ಕ್ಕೆ ಧಾರ್ಮಿಕ ಪ್ರವಚನ ಮಾಲಿಕೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಗಳು : ಮೇ 17ರಂದು ಉದ್ಘಾಟನೆ, 18 ರಿಂದ 24-ಶ್ರೀ ಕಂಬಾಲೂರು ಶ್ರೀವತ್ಸಾಚಾರ್ಯರಿಂದ “ಅಧಿಕ ಮಾಸ ಮಹಾತ್ಮೆ”, ಮೇ 25 ರಿಂದ 31-ಶ್ರೀಗುರುಪವನಾಚಾರ್ಯರಿಂದ “ಶ್ರೀಮದ್ಭಾಗವತ ಪ್ರಥಮ ಸ್ಕಂದದಿಂದ ಸಪ್ತಮ ಸ್ಕಂದದವರೆಗೆ”, ಜೂನ್ 1 ರಿಂದ 7-ಡಾ|| ಕೃಷ್ಣಾಚಾರ್ ಕೆಂಪದಾಳಹಳ್ಳಿ ಇವರಿಂದ “ಶ್ರೀಮದ್ಭಾಗವತದ ಅಷ್ಟಮ ಸ್ಕಂದದಿಂದ ದ್ವಾದಶ ಸ್ಕಂದದವರೆಗೆ”, ಜೂನ್ 8 ರಿಂದ 14-ಶ್ರೀ ವಿಜಯೀಂದ್ರಾಚಾರ್ ಪಸಗಿ ಇವರಿಂದ “ಹರಿದಾಸರ ಕೀರ್ತನೆಗಳಲ್ಲಿ ಜ್ಞಾನ-ಭಕ್ತಿ-ವೈರಾಗ್ಯ” ವಿಷಯವಾಗಿ ಧಾರ್ಮಿಕ ಪ್ರವಚನಗಳು ಜರುಗಲಿವೆ.
ವಿಶೇಷ ಕಾರ್ಯಕ್ರಮಗಳು : ಮೇ 24, ಭಾನುವಾರ ಸಂಜೆ 5-30ಕ್ಕೆ “ಸಾಮೂಹಿಕ ದುರ್ಗಾ ನಮಸ್ಕಾರ”, ಜೂನ್ 11, ಗುರುವಾರ ಸಂಜೆ 5-30ಕ್ಕೆ “ಹರಿದಾಸರುಗಳಿಂದ ರಚಿಸಲ್ಪಟ್ಟ 33 ಹಾಡುಗಳ ಗಾಯನ” ಹಾಗೂ “ಹರಿವಾಣ ಸೇವೆ”, ಜೂನ್ 14, ಭಾನುವಾರ “ಸರ್ವ ಸಮರ್ಪಣೋತ್ಸವ”, “ನರಸಿಂಹ ಮಹಾ ಮಂತ್ರ ಹೋಮ” ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















