ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದು ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ Minister Madhu Bangarappa ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಯಾವುದೇ ಗೌಜು ಗಲಾಟೆಗೆ ಅವಕಾಶವಾಗದಂತೆ ನೋಡಿಕೊಳ್ಳಲು ಸಭಾಂಗಣದ ಹೊರಗೆ ಬಿಗಿ ಪೊಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬಿಜೆಪಿ ರೈತ ಮೋರ್ಚಾ ಮತ್ತು ಬಜರಂಗದಳಗಳು ಜಿ.ಪಂ.ಸಭೆಗೆ ಆಗಮಿಸಲಿದ್ದ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ನೀಡುವ ಕಾರ್ಯಕ್ರಮವಿತ್ತು. ಸಚಿವರು ಬಂದಾಗ ಮಾತಿನ ಚಕಮಕಿ, ಜಿಪಂ ಆವರಣದೊಳಗೆ ನುಗ್ಗುವ ಯತ್ನ ಮಾಡಿ ಶಾಂತಿ ಕದಡುವ ಸಂಭವ ಇದೆ ಎಂದು ಭಾವಿಸಿ ಹೆಚ್ವಿನ ಸಂಖ್ಯೆಯ ಪೊಲಿಸರನ್ನು ನಿಯೋಜಿಸಲಾಗಿತ್ತು.
ಯಾರೇ ಮುಖ್ಯ ದ್ವಾರದಿಂದ ಒಳ ಹೋಗುವುದಾದರೂ ಪೊಲಿಸರ ಸೂಕ್ಷ್ಮ ತಪಾಸಣೆಗೊಳಗಾಗೇ ಹೋಗಬೇಕಾಯಿತು. ಮಾಧ್ಯಮದವರೂ ಈ ತಪಾಸಣೆಯಿಂದ ಹೊರತಾಗಿರಲಿಲ್ಲ. ಜಿಪಂ ಕೆಡಿಪಿ ಸಭೆಯ ಇತಿಹಾಸದಲ್ಲೇ ಈ ರೀತಿ, ಬಂದೋಬಸ್ತ್, ನಿರ್ಬಂಧ ಆಗಿರಲಿಲ್ಲ ಎಂಬ ಮಾತುಗಳು ಕೇಳಿಬಂದವು.
Also read: ಗುಬ್ಬಿಯಲ್ಲಿ ಮೇ 24ರಂದು ‘ವಿಕಾಸ ಸಂಭ್ರಮ-2026’
ಕೇಸರಿ ಶಾಲಲ್ಲಿ ಮಿಂಚಿದ ಶಾಸಕರು
ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಿ ಕೇಸರಿ ಶಾಲು ಧರಿಸಲು ಅವಕಾಶ ನೀಡದೆ ಇರುವ ಆದೇಶದ ವಿರುದ್ಧ ಪ್ರತಿಭಟನೆ ಎಂಬಂತೆ ಬಿಂಬಿಸಲು ಬಿಜೆಪಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ ಅವರು ಕೊರಳಿಗೆ ಮಿರಿ ಮಿರಿ ಮಿಂಚುವ ಕೇಸರಿ ಶಾಲನ್ನು ಧರಿಸಿ ತ್ರೈಮಾಸಿಕ ಕೆಡಿಪಿ ಕಲಾಪದಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.
ಅಧ್ಯಕ್ಷತೆ ವಹಿಸಿದ್ದ ಸಚಿವ ಮಧು ಬಂಗಾರಪ್ಪ, ವೇದಿಕೆಯಲ್ಲಿದ್ದಾಗ ಶಾಸಕ ಬೇಳೂರು ಗೋಪಾಲಕೃಷ್ಣ ಇವರನ್ನು ನೋಡಿ ಮುಗುಳ್ನಗುತ್ತಿದ್ದುದೂ ಅಚ್ವರಿಯುಂಟುಮಾಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















