ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂತ ಆಂಟೋನೀಸ್ ಬ್ಯಾಸಿಲಿಕಾ ವಾರ್ಷಿಕ ಜಾತ್ರೆಯಲ್ಲಿ ಭಾಗವಹಿಸುವ ಭಕ್ತರ ಪ್ರಯಾಣದ ಅನುಕೂಲಕ್ಕಾಗಿ, ಡೋರ್ನಹಳ್ಳಿಯಲ್ಲಿ ನಾಲ್ಕು ರೈಲುಗಳ ನಿಲುಗಡೆಯನ್ನು ನೀಡಲಾಗುತ್ತಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಜೂನ್ 11ರಿಂದ 14ರವರೆಗೆ ಡೋರ್ನಹಳ್ಳಿ ಹಾಲ್ಟ್ ರೈಲು ನಿಲ್ದಾಣದಲ್ಲಿ ಕೆಳಕಂಡ ರೈಲುಗಳಿಗೆ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ ನೀಡಲಾಗಿದೆ ಎಂದು ತಿಳಿಸಿದೆ.
Also Read>> ಸಚಿವರ ಅಸಮಾಧಾನ ಆಡಳಿತದ ಮೇಲೆ ಪರಿಣಾಮ: ಸಿ.ಟಿ. ರವಿ
ಹೀಗಿದೆ ರೈಲುಗಳ ಮಾಹಿತಿ:
- ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಎಕ್ಸ್’ಪ್ರೆಸ್ – ಆಗಮನ/ನಿರ್ಗಮನ: 10:42 / 10:43 ಗಂಟೆ
- ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್-ಮೈಸೂರು ಎಕ್ಸ್’ಪ್ರೆಸ್ – ಆಗಮನ/ನಿರ್ಗಮನ: 15:50 / 15:51 ಗಂಟೆ
- ರೈಲು ಸಂಖ್ಯೆ 16222 ಮೈಸೂರು-ತಾಳಗುಪ್ಪ ಎಕ್ಸ್’ಪ್ರೆಸ್ – ಆಗಮನ/ನಿರ್ಗಮನ: 14:35 / 14:36 ಗಂಟೆ
- ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಎಕ್ಸ್’ಪ್ರೆಸ್ – ಆಗಮನ/ನಿರ್ಗಮನ: 13:57 / 13:58 ಗಂಟೆ
ಸುದ್ಧಿ ಹಾಗೂ ಜಾಹೀರಾತಿಗಾಗಿಸಂಪರ್ಕಿಸಿ: Whatsapp: 9008761663, 9481252093 – info@kalpa.news





















