ಕಲ್ಪ ಮೀಡಿಯಾ ಹೌಸ್ | ಫಿಲಿಪೈನ್ಸ್ |
ದಕ್ಷಿಣ ಫಿಲಿಪೈನ್ಸ್‌ನಲ್ಲಿ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ Earthquake ಕನಿಷ್ಠ 32 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Magnitude 7.8 earthquake in the Philippines today.
CCTV footage of a grandmother trying to protect her grandchild during the earthquake.
This happened 4-6 hours ago. pic.twitter.com/vkXNUXkpzi— Anonymous (@YourAnonNews) June 8, 2026
ಈ ನಡುವೆಯೇ, ಭೂಕಂಪದ ಭೀಕರತೆಯನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ವೃದ್ಧೆಯೊಬ್ಬರು ತಮ್ಮ ಮೊಮ್ಮಗನನ್ನು ರಕ್ಷಿಸಿದ ಸಾಹಸ ಎಲ್ಲರ ಗಮನ ಸೆಳೆದಿದೆ.
ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಮಗು ಸೋಫಾದ ಮೇಲೆ ಕುಳಿತಿರುವುದು ಕಾಣಿಸುತ್ತದೆ. ಆಕಸ್ಮಿಕವಾಗಿ ಭೂಕಂಪ ಸಂಭವಿಸಿದಾಗ ಇಡೀ ಮನೆ ಕಂಪಿಸಿ ಅಲುಗಾಡುತ್ತದೆ. ಈ ಸಂದರ್ಭದಲ್ಲಿ ಭಯಭೀತಳಾದ ಅಜ್ಜಿ, ತಕ್ಷಣ ಮಗುವನ್ನು ಎತ್ತಿಕೊಂಡು ಹೊರಗೆ ಹೋಗಲು ಪ್ರಯತ್ನಿಸುತ್ತಾರೆ.
Also read: ILCAD 2026 Observed in Mysuru Division; SWR Promotes Level Crossing Safety
ಆದರೆ ಪರಿಸ್ಥಿತಿ ಅನುಕೂಲಕರವಾಗಿರದ ಕಾರಣ, ಬಾಗಿಲ ಬಳಿಯೇ ಕುಳಿತುಕೊಂಡು ತಮ್ಮ ಮೊಮ್ಮಗನನ್ನು ಎದೆಯೊಡನೆ ಬಿಗಿಯಾಗಿ ಹಿಡಿದು ಕಾಪಾಡುತ್ತಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ವೃದ್ಧೆಯ ಧೈರ್ಯ ಮತ್ತು ತಾಯ್ತನದ ಪ್ರೀತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
“ಸೂಪರ್ ಹೀರೋ ಅಜ್ಜಿ ಮಗು ರಕ್ಷಿಸಲು ಒಂದು ಕ್ಷಣವೂ ಹಿಂಜರಿಯಲಿಲ್ಲ. ಕುಟುಂಬ ಅಂದ್ರೆ ಇದು,” ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. “7.8 ತೀವ್ರತೆಯ ಭೂಕಂಪದ ಮಧ್ಯೆಯೂ ಯಾವುದೇ ಭಯವಿಲ್ಲದೆ ಮೊಮ್ಮಗನನ್ನು ಕಾಪಾಡಿದ್ದಾರೆ – ಅಜ್ಜಿ ನಿಜವಾದ ಹೀರೋ,” ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಅಜ್ಜಿ ಮತ್ತು ಅವರ ಮೊಮ್ಮಗ ಇಬ್ಬರೂ ಸುರಕ್ಷಿತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















