ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರೋಗ್ಯ ತುರ್ತು ಸಂದರ್ಭದಲ್ಲಿ ವರದಾನವಾಗಿ ಜೀವ ಉಳಿಸುವ ರಕ್ತದಾನ Blood donation ಮಾಡುವುದು ಅತ್ಯಂತ ಪುಣ್ಯ ಕೆಲಸ ಎಂದು ಜಿಪಂ ಮಾಜಿ ಸದಸ್ಯ, ಯುವ ಮುಖಂಡ ಕೆ.ಈ. ಕಾಂತೇಶ್ ಅಭಿಪ್ರಾಯಪಟ್ಟರು.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ K S Eshwarappa ಅವರ 78ನೇ ಜನ್ಮದಿನದ ಅಂಗವಾಗಿ ರಾಷ್ಟç ಭಕ್ತರ ಬಳಗದ ವತಿಯಿಂದ ಮಲ್ಲೇಶ್ವರ ನಗರದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ರಕ್ತದಾನವು ಜೀವಗಳನ್ನು ಉಳಿಸುವ ಅತ್ಯಂತ ಮಹತ್ವದ ಮಾನವೀಯ ಸೇವೆಯಾಗಿದೆ. ಅಪಘಾತಗಳು, ಶಸ್ತ್ರಚಿಕಿತ್ಸೆಗಳು, ಪ್ರಸವ ಸಂದರ್ಭಗಳು, ರಕ್ತದ ಕಾಯಿಲೆಗಳು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಸ್ವಯಂಪ್ರೇರಿತ ರಕ್ತದಾನ ಜೀವ ಉಳಿಸುವ ಜೀವದಾನವಾಗುತ್ತದೆ ಎಂದರು.
Also read: ಆನಂದಪುರಂನಲ್ಲಿ ಅಣ್ಣನಿಂದಲೇ ತಮ್ಮನ ಹತ್ಯೆ | ಕಾರಣವೇನು? ಸ್ಥಳಕ್ಕೆ ಎಸ್’ಪಿ ನಿಖಿಲ್ ಭೇಟಿ
ತುರ್ತು ಪರಿಸ್ಥಿತಿಗಳಲ್ಲಿ ರಕ್ತದ ಕೊರತೆಯಿಂದ ಜೀವ ಅಪಾಯ ಉಂಟಾಗಬಹುದು. ರಕ್ತದಾನವು ಇಂತಹ ಜೀವಗಳನ್ನು ಉಳಿಸಲು ಸಹಕಾರಿಯಾಗಿದೆ. ಆಸ್ಪತ್ರೆಗಳಲ್ಲಿ ಪ್ರತಿದಿನವೂ ರಕ್ತದ ಬೇಡಿಕೆ ಇರುತ್ತದೆ. ರಕ್ತವನ್ನು ಸಂಗ್ರಹಿಸುವ ಅವಧಿ ಸೀಮಿತವಾಗಿರುವುದರಿಂದ ನಿರಂತರ ದಾನ ಅಗತ್ಯ. ರಕ್ತದಾನವು ಯಾವುದೇ ಭೇದಭಾವವಿಲ್ಲದೆ ಇತರರಿಗೆ ನೆರವಾಗುವ ಮಹತ್ವದ ಸಾಮಾಜಿಕ ಸೇವೆ ಎಂದರು.
ರಕ್ತದಾನ ಮಾಡಿದ ನಂತರ ದೇಹವು ಹೊಸ ರಕ್ತಕಣಗಳನ್ನು ಉತ್ಪಾದಿಸುತ್ತದೆ, ಇದು ದೇಹದ ಆರೋಗ್ಯಕ್ಕೆ ಸಹಾಯಕವಾಗಿದೆ. ಅಲ್ಲದೇ ಮುಖ್ಯವಾಗಿ, ಯಾರಾದರೂ ಜೀವ ಉಳಿಸಲು ಸಹಾಯ ಮಾಡಿದ ತೃಪ್ತಿ ದೊರೆಯುತ್ತದೆ. ಹೀಗಾಗಿ, ಅರ್ಹ ಪ್ರತಿಯೊಬ್ಬರೂ ಸಹ ಅದರಲ್ಲೂ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎನ್. ಮಂಜುನಾಥ್, ಈ. ವಿಶ್ವಾಸ್, ದೊರೈಸ್ವಾಮಿ, ವಿನೋದ್, ಶ್ರೀಪಾದ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










