ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಪ್ರಯಾಣಿಕರ ಅನುಕೂಲಕ್ಕಾಗಿ, ರೈಲು ಸಂಖ್ಯೆ 11014/11013 ಕೊಯಮತ್ತೂರು–ಲೋಕಮಾನ್ಯ ತಿಲಕ್ ಟರ್ಮಿನಸ್–ಕೊಯಮತ್ತೂರು ಎಕ್ಸ್‌ಪ್ರೆಸ್ ರೈಲಿಗೆ ಯಲಹಂಕ (YNK) ರೈಲು ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆ ನೀಡಲು ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ.
ರೈಲು ಸಂಖ್ಯೆ 11014 ಕೊಯಮತ್ತೂರು–ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲು 2026ರ ಜೂನ್ 29ರಿಂದ ಯಲಹಂಕ ರೈಲು ನಿಲ್ದಾಣಕ್ಕೆ ಸಂಜೆ 4:41 ಗಂಟೆಗೆ ಆಗಮಿಸಿ, ಸಂಜೆ 4:43 ಗಂಟೆಗೆ ನಿರ್ಗಮಿಸಲಿದೆ.

Also read: ಖಾಶೆಂಪುರ್ ಪಿ: ಜೆಡಿಎಸ್ ನಿಂದ ಎಸ್ಐಆರ್, ಬಿಎಲ್ಎ – 2 ಕಾರ್ಯಾಗಾರ
ರೈಲು ಸಂಖ್ಯೆ 11013 ಲೋಕಮಾನ್ಯ ತಿಲಕ್–ಕೊಯಮತ್ತೂರು ಎಕ್ಸ್‌ಪ್ರೆಸ್ ರೈಲು 2026ರ ಜೂನ್ 30ರಿಂದ ಯಲಹಂಕ ರೈಲು ನಿಲ್ದಾಣಕ್ಕೆ ಸಂಜೆ 7:28 ಗಂಟೆಗೆ ಆಗಮಿಸಿ, ಸಂಜೆ 7:30 ಗಂಟೆಗೆ ನಿರ್ಗಮಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








