ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ಇಂದು ಸದಾ ಕಲಿಯುವ ಹಂತದಲ್ಲಿದ್ದು, ಅವರಿಗೆ ಭವಿಷ್ಯದ ಬಗ್ಗೆ ಚಿಂತೆ ಕಾಡುವುದಿಲ್ಲ. ‘ವಿದ್ಯಾರ್ಥಿ ಜೀವನ ಬಂಗಾರದಂತ ಜೀವನ’ ಇದನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದು ವ್ಯಾಲ್ಯೂ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಕಾಂತ್ ನಾಡಿಗ್ ಹೇಳಿದರು.
ನಗರದ ಪಿಇಎಸ್ ಐಎಎಂಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳಿಗಾಗಿ ನಿರ್ವಹಣಾ ವಿದ್ಯಾರ್ಥಿಗಳಿಂದ ‘ಕೈಗಾರಿಕಾ ಕ್ಷೇತ್ರದ ನಿರೀಕ್ಷೆಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಮತ್ತು ಓರಿಯೆಂಟೇಶನ್ ಸಮಾರಂಭದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಗೆ ಮಾತ್ರ ಸೀಮಿತವಾಗದೆ ಕೈಗಾರಿಕಾ ಕ್ಷೇತ್ರವು ಬಯಸುವ ರೀತಿಯಲ್ಲಿ ಸಂವಹನ ಕೌಶಲ್ಯ, ನಾಯಕತ್ವ, ವೃತ್ತಿಪರ ನೈತಿಕತೆ, ತಂಡದೊಂದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ, ಸಮಯ ನಿರ್ವಹಣೆ, ಸಮಸ್ಯೆ ಪರಿಹಾರ ಕೌಶಲ್ಯ ಹಾಗೂ ನಿರಂತರ ಕಲಿಕೆಯ ಮನೋಭಾವ ಹೊಂದಿರುಬೇಕು. ಇಂತಹ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿವೆ ಎಂದು ಹೇಳಿದರು.
Also read: ಶಿಕ್ಷಣಕ್ಕೆ ತಕ್ಕ ಉದ್ಯೋಗ ಪಡೆಯಲು ಕೌಶಲ್ಯ ಅಭಿವೃದ್ಧಿ ಅತ್ಯಗತ್ಯ: ಪ್ರಾಚಾರ್ಯ ಡಾ. ರವೀಂದ್ರ
ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು. ಭವಿಷ್ಯದ ಬಗ್ಗೆ ಯೋಜನೆಯನ್ನು ಹಾಕಿಕೊಳ್ಳಬೇಕು. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಸಾiರ್ಥ್ಯ, ಆತ್ಮವಿಶ್ವಾಸ, ಸೃಜನಾತ್ಮಕತೆ ಹಾಗೂ ಉತ್ತಮ ಭಾಷಾ ಕೌಶಲ್ಯ, ಸಮಯದ ನಿರ್ವಹಣೆ, ಜವಾಬ್ದಾರಿಯುತ ವ್ಯಕ್ತಿತ್ವವು ಯಶಸ್ವಿ ವೃತ್ತಿಜೀವನಕ್ಕೆ ಪ್ರಮುಖ ಅಂಶಗಳಾಗಿವೆ ಹಾಗೆಯೇ ಪ್ರಸ್ತುತ ಉದ್ಯಮದ ನಿರೀಕ್ಷೆಗೆ ತಕ್ಕಂತಹ ಆಸಕ್ತಿದಾಯಕ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ಮೋಹನ್ ಡಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್ ಹೆಚ್‌ಆರ್, ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಎನ್ ಪ್ರವೀಣ್‌ಚಂದ್ರರವರು ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಪ್ರಥಮ ವರ್ಷದ ಬಿಬಿಎ, ಬಿಬಿಎ ಹೆಚ್‌ಇಎಂ, ಬಿಬಿಎ ಟಿ&ಟಿ ಪದವಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇಂಗ್ಲೀಷ್ ಸಹಾಯಕ ಪ್ರಾಧ್ಯಾಪರಾದ ಶ್ರೀಮತಿ ನೌಸೀನ್ ಆರ್ ಎಸ್ ರವರು ಸ್ವಾಗತಿಸಿ, ಟಿ&ಟಿ ವಿಭಾಗದ ಸಹಾಯಕ ಪ್ರಾಧ್ಯಾಪಕ ನಿವಾಸ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪರಾದ ವಿನಯ್‌ಕುಮಾರ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








