ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸುಸ್ವರ ಫೈನ್ ಆರ್ಟ್ಸ್ ಟ್ರಸ್ಟ್ ನ ಸಂಸ್ಥಾಪಕರಾದ ಸಂಗೀತ ವಿದ್ವಾನ್ ರಾಜಪ್ಪ ಎಂ ಹಾಗೂ ಲಾಲ್ ದಾಸ್ ಭಕ್ತ ಆಂಜನೇಯ ಸ್ವಾಮಿ ಭಜನೆ ಮಂಡಳಿಯ ವಿದ್ವಾನ್ ಶ್ರೀನಿವಾಸ್ ಅನಂತರಾಮಯ್ಯರವರ ವತಿಯಿಂದ ಜು.12ರ ಭಾನುವಾರ ಭಕ್ತಿಪೂರ್ವಕ ಸಾಂಸ್ಕೃತಿಕ ಕಲಾ ಸೇವೆ ಹಮ್ಮಿಕೊಳ್ಳಲಾಗಿದೆ.
ನಗರದ ಬಳೇಪೇಟೆ ಶ್ರೀ ಲಾಲ್ ದಾಸ್ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ 9ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.

Also read: ಜು.12ರಂದು ಮನೆಗೊಂದು ಗ್ರಂಥಾಲಯ ಅನುಷ್ಠಾನ | ಡಾ. ಮಾನಸ ಚಾಲನೆ
ಸಂಗೀತ ಕಲಾಭಿಮಾನಿಗಳಿಗೆ ಹಾಗೂ ಸದ್ಭಕ್ತರಿಗೆ ಆದರದ ಸುಸ್ವಾಗತ. ನಿಜ ಜೇಷ್ಠ ಮಾಸದ ಪುಣ್ಯಕಾಲದಲ್ಲಿ, ದೇವರ ಕಲ್ಯಾಣೋತ್ಸವದ ಶುಭ ಸಂದರ್ಭದಲ್ಲಿ ಸಂಸ್ಥೆಯ ಹೆಸರಾಂತ ಹಿರಿಯ-ಕಿರಿಯ ಸಂಗೀತ ಕಲಾವಿದರಿಂದ ಹಾಗೂ ವಿದ್ಯಾರ್ಥಿಗಳಿಂದ ಭಕ್ತಿ ಪ್ರಧಾನ “ಸಂಗೀತ ಸೇವೆ” ನಡೆಯಲಿದೆ ಎಂದು ಸುಸ್ವರ ಫೈನ್ ಆರ್ಟ್ಸ್ ಟ್ರಸ್ಟ್ ಸಂಸ್ಥಾಪಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9845061283, 9844027006ಗೆ ಸಂಪರ್ಕಿಸಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









