ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲೋಕೇಶ್ವರ ನಾಟ್ಯ ಶಾಲಾ ಲಲಿತ ಕಲಾ ಟ್ರಸ್ಟ್ ವತಿಯಿಂದ ನಗರದ ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಜುಲೈ 12, ಭಾನುವಾರ ಬೆಳಗ್ಗೆ 10ಕ್ಕೆ ವಿದುಷಿ ಹೆಚ್.ಎಂ. ಸುಷ್ಮಾರವರ ಶಿಷ್ಯೆಯರಾದ ಕು. ಜಿ. ಪ್ರಣಮ್ಯ, ಕು. ಕೆ. ಶಾರಣಿ, ಕು. ಅವನಿ ಹರೀಶ್ ಮತ್ತು ಕು. ಜೆ. ರಾಘವಿ ಇವರುಗಳ ಆನಂದ ನೂಪುರಮ್ (ಗೆಜ್ಜೆಪೂಜೆ) ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ ವಿದುಷಿ ಉಷಾ ಬಸಪ್ಪ, ಡಾ. ರಕ್ಷೈಶೆಟ್ಟಿ, ವಿ. ಸಂತೋಷ್ ಪ್ರಶಾಂತ್ ಮತ್ತು ಡಾ. ಬಸವರಾಜ್ ಹಿರೇಮಠ್ ಆಗಮಿಸಲಿದ್ದಾರೆ.

Also read: ನಿಜ ಜೇಷ್ಠ ಮಾಸ ಸಂಗೀತೋತ್ಸವ | ವಿಶೇಷ ದೇವರ ಕಲ್ಯಾಣೋತ್ಸವ – ಮಹಾ ಪೂಜೆ
ಈ ವಿಶೇಷ ಕಾರ್ಯಕ್ರಮದ ಹಿಮ್ಮೇಳದಲ್ಲಿ : ನಟುವಾಂಗ-ಗುರು ಚೈತ್ರ ಆರ್. ಜಗದೀಶ್ ಮತ್ತು ಗುರು ಹೆಚ್.ಎಂ. ಸುಷ್ಮಾ, ಗಾಯನ-ಗುರು ಚೇತನಾ ನಾಗರಾಜ್, ಮೃದಂಗ-ಶ್ರೀ ಮಿಥುನ್ ಶಕ್ತಿಲ್, ಕೊಳಲು-ಗುರು ಕೆ.ಎಸ್. ಗಣೇಶ್ ಹಾಗೂ ನಿರೂಪಣೆ-ಗುರು ವಿದುಷಿ ಮಾಣಿಕ್ಯದೇವಿ ಇವರುಗಳು ಸಹಕರಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂದು ಸಂಸ್ಥೆಯ ನಿರ್ದೇಶಕಿ ಹೆಚ್.ಎಂ. ಸುಷ್ಮಾ ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









